ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಮಾಡುವ ಪೋಸ್ಟ್‌ಗಳು ಹಾಸ್ಯದಿಂದ ತುಂಬಿರುತ್ತವೆ. ಆದರೆ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಗಮನ ಸೆಳೆದಿದೆ. ಭಾನುವಾರ (ನಿನ್ನೆ) ಬಿಗ್ ಬಿ ಅಪರಿಚಿತರೊಂದಿಗೆ ಬೈಕ್ ರೈಡ್ ಮಾಡುತ್ತಿರುವ ಚಿತ್ರವನ್ನು ಶೇರ್ ಮಾಡಿದ್ದಾರೆ. ತಮ್ಮ ಪ್ರಯಾಣದ ಬಗ್ಗೆ ಆಸಕ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ. ಪ್ರತಿದಿನ ಕೆಲಸಕ್ಕೆ ಹೋಗುವ ವಿಚಾರವಾಗಿ ಹಿರಿಯ ನಟ ಹಾಕಿದ ಪೋಸ್ಟ್ ವೈರಲ್ ಆಗಿದೆ.
ರಸ್ತೆಯಲ್ಲಿ ಸಿಕ್ಕ ವ್ಯಕ್ತಿ ಜತೆ ಕೆಲಸಕ್ಕೆ ಹೋಗುವ ಫೋಟೋ ಶೇರ್ ಮಾಡಿ, "ಥಾಂಕ್ಯೂ ಫಾರ್ ದಿ ರೈಡ್ ಬಡ್ಡಿ" ಎಂದು ಅಮಿತಾಭ್ ಬಚ್ಚನ್ ಬರೆದಿದ್ದಾರೆ. "ನೀವ್ಯಾರೋ ಗೊತ್ತಿಲ್ಲ, ಈ ಟ್ರಾಫಿಕ್ ಮಧ್ಯೆ ವೇಗವಾಗಿ ಸರಿಯಾದ ಸಮಯಕ್ಕೆ ನನ್ನನ್ನು ಕೆಲಸದ ಸ್ಥಳಕ್ಕೆ ತಲುಪಿಸಿದ್ದೀರಿ. ಕ್ಯಾಪ್, ಶಾರ್ಟ್ಸ್, ಯೆಲ್ಲೋ ಟೀ ಶರ್ಟ್ ಮಾಲೀಕರಿಗೆ ಧನ್ಯವಾದಗಳು" ಎಂದಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: 'ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್': ಎಲಾನ್ ಮಸ್ಕ್ಗೆ ಅಮಿತಾಭ್ ಬಚ್ಚನ್ ಧನ್ಯವಾದ
ಬಿಗ್ ಬಿ ಪೋಸ್ಟ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾರ್ಟ್ ಇಮೋಜಿ ಹಾಕಿ ನಿಜವಾದ ಲೆಜೆಂಡ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಇನ್ನು ಕೆಲವರು ಹೆಲ್ಮೆಟ್ ಎಲ್ಲಿ ಸಾರ್ ಎಂದು ಕೇಳುತ್ತಿದ್ದಾರೆ. ಸಾರ್ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಆರೋಗ್ಯದಲ್ಲಿ ಚೇತರಿಕೆ; ಪ್ರಾಜೆಕ್ಟ್ ಕೆ ಶೂಟಿಂಗ್ ಸೆಟ್ಗೆ ಮರಳಿದ ಅಮಿತಾಭ್ ಬಚ್ಚನ್
ಅಮಿತಾಭ್ ಅವರು ತುಂಬಾ ಸಿಂಪಲ್ ಆಗಿ ಅಭಿಮಾನಿಗಳೊಂದಿಗೆ ಇಂಟರ್ಯಾಕ್ಟ್ ಮಾಡುತ್ತಲೇ ಇರುತ್ತಾರೆ. ಆಗಾಗ ವಿಡಿಯೋ, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸಿನಿಮಾ ವಿಚಾರಕ್ಕೆ ಬಂದರೆ ಬಚ್ಚನ್ 'ಪ್ರಾಜೆಕ್ಟ್ ಕೆ' ಚಿತ್ರೀಕರಣದಲ್ಲಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ಸೆಟ್‌ನಲ್ಲಿ ಗಾಯಗೊಂಡಿದ್ದು, ಬಳಿಕ ಚೇತರಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಪ್ರಭಾಸ್ ಜತೆ ನಟಿಸಲಿದ್ದಾರೆ. ಇದು ಬಹುನಿರೀಕ್ಷಿತ ಪ್ರಾಜೆಕ್ಟ್ಗಳಲ್ಲಿ ಒಂದಾಗಿದೆ. ನಾಗ್ ಅಶ್ವಿನ್ ಅವರ ನಿರ್ದೇಶನದಲ್ಲಿ 'ಪ್ರಾಜೆಕ್ಟ್ ಕೆ' ಚಿತ್ರ ಹಿಂದಿ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ದ್ವಿಭಾಷಾ ಚಲನಚಿತ್ರವಾಗಿದೆ.
ಅಲ್ಲದೇ ರಿಭು ದಾಸ್‌ಗುಪ್ತಾ ಬರೆದು ನಿರ್ದೇಶಿಸಿದ 'ಸೆಕ್ಷನ್ 84' ಚಿತ್ರದಲ್ಲಿಯೂ ಅಮಿತಾಭ್ ನಟಿಸಿತ್ತಿದ್ದಾರೆ. ಸಿನಿಮಾದಲ್ಲಿ ಡಯಾನಾ ಪೆಂಟಿ, ಅಭಿಷೇಕ್ ಬ್ಯಾನರ್ಜಿ ಮತ್ತು ನಿಮ್ರತ್ ಕೌರ್ ನಟಿಸಿದ್ದಾರೆ.
ಇದನ್ನೂ ಓದಿ: ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಅಮಿತಾಭ್ ಬಚ್ಚನ್: ಮತ್ತೆ ಕೆಲಸ ಆರಂಭಿಸಿದ ಬಿಗ್ ಬಿ