ETV Bharat / entertainment

ಅರ್ಜೆಂಟೀನಾ ಪ್ರವಾಸದಲ್ಲಿರುವ ಸ್ಟಾರ್​ ಲವ್​ ಬರ್ಡ್ಸ್​​ ಹೃತಿಕ್​ ರೋಷನ್​ - ಸಬಾ ಆಜಾದ್​

ನಟಿ ಸಬಾ ಆಜಾದ್​ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸೆಲ್ಫಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

author img

By

Published : Jul 28, 2023, 4:02 PM IST

Star lovebirds Hrithik Roshan Saba Azad
ಅರ್ಜೆಟೀನಾ ಪ್ರವಾಸದಲ್ಲಿರುವ ಸ್ಟಾರ್​ ಲವ್​ ಬರ್ಡ್ಸ್

ಬಾಲಿವುಡ್​ನ ಅಧಿಕೃತ ಜೋಡಿ ನಟ​ ಹೃತಿಕ್​ ರೋಷನ್​ ಹಾಗೂ ಗೆಳತಿ ಸಬಾ ಆಜಾದ್​ ಸದ್ಯ ಅರ್ಜೆಂಟೀನಾ ಪ್ರವಾಸ ಎಂಜಾಯ್​ ಮಾಡುತ್ತಿದ್ದಾರೆ. ಸಬಾ ಆಜಾದ್​ ಅವರು ಬ್ಯೂನಸ್ ಐರಿಸ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ತೆಗೆದ ಎರಡು ಸೆಲ್ಫಿಗಳನ್ನು ತಮ್ಮ ಇನ್​ಸ್ಟಾಗ್ರಾಂ ಪುಟಗಳಲ್ಲಿ ಪೋಸ್ಟ್​ ಮಾಡಿದ್ದು, ತಮ್ಮ ಹ್ಯಾಪಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸಬಾ ಆಜಾದ್​ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಗಳು ಗಮನಿಸಿದರೆ, ಇಬ್ಬರೂ ಅರ್ಜೆಂಟೀನಾದಲ್ಲಿ ಸುಂದರ ಕ್ಷಣಗಳನ್ನು ಆನಂದಿಸುತ್ತಿರುವುದು ತಿಳಿಯುತ್ತದೆ.

ಒಂದು ಫೋಟೋದಲ್ಲಿ, ಹೃತಿಕ್ ರೋಷನ್​ ಕಪ್ಪು ಸ್ಲೀವ್​ ಲೆಸ್​ ಟಿ - ಶರ್ಟ್ ಮತ್ತು ಕ್ಯಾಪ್ ಧರಿಸಿ, ಅವರ ಮುಂದೆ ಕೇಕ್ ಮತ್ತು ಪಾನೀಯ ಇರಿಸಿಕೊಂಡು ಕಾಣಿಸಿಕೊಂಡಿದ್ದಾನೆ. ಈ ಫೋಟೋ ಹಂಚಿಕೊಂಡಿರುವ ಸಬಾ ಆಜಾದ್​ ಹೃತಿಕ್ ರೋಷನ್​ ಅವರನ್ನು ಪ್ರೀತಿಯಿಂದ ತನ್ನ "ಹಿಪ್ಪೋ ಹೃದಯ" ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಮತ್ತೊಂದು ಸೆಲ್ಫಿ ಹಂಚಿಕೊಂಡಿದ್ದು, ಅವರಿಬ್ಬರೂ ಚಳಿಗಾಲದ ಬಟ್ಟೆ ಮತ್ತು ಉಣ್ಣೆಯ ಟೋಪಿ ಧರಿಸಿರುವುದನ್ನು ಕಾಣಬಹುದು. ಈ ಫೋಟೋಗೆ "ಬ್ಯುನೋಸ್ ಡಯಾಸ್" ಎಂಬ ಶೀರ್ಷಿಕೆ ನೀಡಿದ್ದಾರೆ ನಟಿ ಸಬಾ ಆಜಾದ್​.

ಹೃತಿಕ್​ ರೋಷನ್​ ಹಾಗೂ ಸಬಾ ಆಜಾದ್​ ಕಳೆದ ಒಂದು ವರ್ಷದಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಹೃತಿಕ್​ ರೋಷನ್​ ಅವರು ಅವರ ಮೊದಲ ಪತ್ನಿ ಸುಸ್ಸಾನ್ನೆ ಖಾನ್​ ಅವರಿಗೆ ವಿಚ್ಛೇದನ ನೀಡಿದ ಕೆಲವು ವರ್ಷಗಳ ನಂತರ ಹೃತಿಕ್​ ರೋಷನ್​ ಹಾಗೂ ಸಬಾ ಅವರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಮೊದಲ ಪತ್ನಿಗೆ ಹೃತಿಕ್​ ವಿಚ್ಛೇದನ ನೀಡಿದ್ದರೂ ಇಂದಿಗೂ ಇಬ್ಬರೂ ಸ್ನೇಹಿತರಾಗಿಯೇ ಇದ್ದಾರೆ. ತಮ್ಮ ಇಬ್ಬರು ಪುತ್ರರಾದ ಹ್ರೇಹ್ರಾನ್​ ಹಾಗೂ ಹೃದಾನ್​ ಅವರಿಗೆ ಪೋಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಸ್ಸಾನ್ನೆ ಖಾನ್​ ಅವರು ಸದ್ಯ ಅಲಿ ಖಾನ್​ ಅವರೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ. ಸುಸ್ಸಾನ್ನೆ ಸಬಾ ಆಜಾದ್​ ಜೊತೆಗೂ ಉತ್ತಮ ಗೆಳೆತನ ಹೊಂದಿದ್ದಾರೆ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಸಬಾ ಆಜಾದ್ ಪ್ರತಿಭಾನ್ವಿತ ಕಲಾವಿದೆ. ನಟಿ ಸಬಾ ಆಗಾಗ್ಗೆ ತಮ್ಮ Instagram ನಲ್ಲಿ ತನ್ನ ಗಿಗ್‌ಗಳ ಗ್ಲಿಂಪ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಟಿರಾಗಿಯೂ ಸಕ್ರಿಯರಾಗಿದ್ದಾರೆ. ಸಬಾ ಪ್ರಾಜೆಕ್ಟ್​ಗಳನ್ನು ನೋಡುವುದಾದರೆ ಜಿಮ್ ಸರ್ಭ್, ಇಶ್ವಾಕ್ ಸಿಂಗ್ ಮತ್ತು ರೆಜಿನಾ ಕಸ್ಸಂಡ್ರಾ ಅವರೊಂದಿಗೆ ನಟಿಸಿರುವ ರಾಕೆಟ್ ಬಾಯ್ಸ್ ಎಂಬ ವೆಬ್ ಸರಣಿಯ ಎರಡನೇ ಸೀಸನ್ ಇತ್ತೀಚೆಗೆ ಪ್ರವಾಸವಾಗಿತ್ತು.

ನಟ ಹೃತಿಕ್ ರೋಷನ್ ಅವರ ಸಿನಿಮಾಗಳನ್ನು ನೋಡುವುದಾದರೆ, ಕೆಲವು ಟೆಂಟ್ಪೋಲ್ ಪ್ರಾಜೆಕ್ಟ್​​ಗಳನ್ನು ಒಪ್ಪಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿರುವ ಸಿದ್ಧಾರ್ಥ್ ಆನಂದ್ ಅವರ ಫೈಟರ್ ಚಿತ್ರದಲ್ಲಿ ಹೃತಿಕ್​ ರೋಷನ್​ ಅವರು ದೀಪಿಕಾ ಪಡುಕೋಣೆ ಜೊತೆ ತೆರೆ ಹಂಚಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನಿಂದ ತಯಾರಾಗುತ್ತಿರುವ ವಾರ್ 2 ಸಿನಿಮಾದಲ್ಲೂ ಅಭಿನಯಿಸುತ್ತಿದ್ಧಾರೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ RRR ಸ್ಟಾರ್ ಜೂನಿಯರ್ NTR ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಲ್ಲದೇ, ಹೃತಿಕ್ ತನ್ನ ವಾರ್​ ಸಿನಿಮಾದ ಸಹ-ನಟಿ ವಾಣಿ ಕಪೂರ್ ಅವರೊಂದಿಗೆ ಸ್ಟಾರ್ಸ್ ಆನ್ ಫೈರ್ ಎಂಬ UK ಪ್ರವಾಸದ ತಂಡವನ್ನು ಸೇರಿಕೊಂಡಿದ್ದಾರೆ. ಇದು ಸೆಪ್ಟೆಂಬರ್ 1 ರಂದು OVO ಅರೆನಾ, ವೆಂಬ್ಲಿ, ಲಂಡನ್ ಮತ್ತು ಸೆಪ್ಟೆಂಬರ್ 2 ರಂದು ಲೀಡ್ಸ್‌ನ ಫಸ್ಟ್ ಡೈರೆಕ್ಟ್ ಅರೆನಾದಲ್ಲಿ ನಿಗದಿಯಾಗಿದೆ.

ಇದನ್ನೂ ಓದಿ: Kiara Advani: ಜನ್ಮದಿನ ಸಂಭ್ರಮಿಸಲು ಪತಿಯೊಂದಿಗೆ ವಿದೇಶಕ್ಕೆ ಹಾರಿದ ಕಿಯಾರಾ ಅಡ್ವಾಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.