ETV Bharat / entertainment

ಎಸ್​ಆರ್​ಕೆ ಬರ್ತ್​ಡೇ: ಅದ್ಭುತ ನಟನೆ, ಕಥೆಯ ಹೊರತಾಗಿಯೂ ಬಾಕ್ಸ್​​ ಆಫೀಸ್​ನಲ್ಲಿ ಮಂಕಾದ ಶಾರುಖ್​ ಸಿನಿಮಾಗಳಿವು! - SRK failure movies

ಕೆಲವು ಸಿನಿಮಾಗಳಲ್ಲಿ ಶಾರುಖ್​ ಖಾನ್​ ಅಭಿನಯ ಅಮೋಘವಾಗಿದ್ದರೂ ಬಾಕ್ಸ್​ ಆಫೀಸ್​ ವಿಚಾರದಲ್ಲಿ ಹಿನ್ನಡೆಯಾಗಿದೆ.

SRK
ಶಾರುಖ್​ ಖಾನ್​
author img

By ETV Bharat Karnataka Team

Published : Nov 2, 2023, 11:27 AM IST

ಬಾಲಿವುಡ್‌ನ ಕಿಂಗ್ ಶಾರುಖ್​ ಖಾನ್​ ಅವರಿಗಿಂದು​​ 58ನೇ ಜನ್ಮದಿನದ ಸಂಭ್ರಮ. ಈ ವರ್ಷ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಗಣ್ಯರು, ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಇರುವ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಎಸ್‌ಆರ್​​ಕೆ ಯಶಸ್ಸು, ಪ್ರತಿಭೆ, ಮೋಡಿ, ಮ್ಯಾಜಿಕ್, ವರ್ಚಸ್ಸಿಗೆ ಸಮಾನಾರ್ಥಕ ಹೆಸರು ಅಂದ್ರೆ ತಪ್ಪಾಗಲ್ಲ. ಮೂರು ದಶಕಗಳಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಆದಾಗ್ಯೂ, ಖಾನ್ ಹಲವು ಏರಿಳಿತಗಳನ್ನು ಕಂಡೇ ಈ ಸ್ಥಾನಕ್ಕೆ ಏರಿದವರು. ನಟನಾ ಕೌಶಲ್ಯ ಸಾಕಾಗದೇ ಇದ್ದ ಸಂದರ್ಭ, ಬಾಕ್ಸ್​ ಆಫೀಸ್​ ಕುಸಿತ ಸೇರಿದಂತೆ ಹಲವು ಕಠಿಣ ಸನ್ನಿವೇಶಗಳನ್ನು ಮೆಟ್ಟಿಯೇ ಸಾಧನೆಯ ಶಿವರವನ್ನೇರಿದ ಸಾಧಕ ಅಂದ್ರೆ ಉತ್ಪ್ರೇಕ್ಷೆಯಲ್ಲ.

ಶಾರುಖ್ ಖಾನ್ ಅಭಿನಯ ಅಮೋಘವಾಗಿದ್ದರೂ, ಬಾಕ್ಸ್​ ಆಫೀಸ್​​​ ಪ್ರಯಾಣದಲ್ಲಿ ಹಿನ್ನೆಡೆ ಸಾಧಿಸಿದ ಕೆಲವು ಚಿತ್ರಗಳಿವೆ. ಗಲ್ಲಾಪೆಟ್ಟಿಗೆಯಲ್ಲಿ ಕೊಂಚ ಹಿನ್ನೆಡೆ ಕಂಡರೂ ಕೂಡ ಅಭಿಮಾನಿಗಳ ಹೃದಯದಲ್ಲಿ ಗೆದ್ದ ಸಿನಿಮಾಗಳಿಲ್ಲಿವೆ.

ಸ್ವದೇಶ್​​​​ (2004): ಅಶುತೋಷ್ ಗೋವಾರಿಕರ್ ನಿರ್ದೇಶನದ ಸ್ವದೇಶ್ ಸಿನಿಮಾ ಶಾರುಖ್ ಖಾನ್ ಅತ್ಯುತ್ತಮ ಅಭಿನಯದ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಚಿತ್ರದಲ್ಲಿ ಮೋಹನ್ ಭಾರ್ಗವ ಎಂಬ ನಾಸಾ ವಿಜ್ಞಾನಿಯ ಪಾತ್ರ ನಿರ್ವಹಿಸಿದ್ದಾರೆ. ಖಾನ್ ಪಾತ್ರ ಭಾವನಾತ್ಮಕವಾಗಿ ಮೂಡಿಬಂದಿದೆ. ಇದು ನಟನ ವೃತ್ತಿಜೀವನದಲ್ಲಿ ಒಂದು ಅಸಾಧಾರಣ ಅಭಿನಯಕ್ಕೆ ಹೆಸರುವಾಸಿಯಾಗಿದೆ. ವಿಮರ್ಶಾತ್ಮಕ ಮೆಚ್ಚುಗೆಯ ಹೊರತಾಗಿಯೂ, ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಕೊಂಚ ಹಿನ್ನೆಡೆ ಕಂಡಿತು.

ಪಹೇಲಿ (2005): ಅಮೋಲ್ ಪಾಲೇಕರ್ ಅವರ ಪಹೇಲಿ ಒಂದು ವಿಶಿಷ್ಟ, ಕಲಾತ್ಮಕ ಸಿನಿಮಾ. ಚಿತ್ರದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಒಂದು ಪಾತ್ರ ಪ್ರೇತದ್ದಾಗಿದ್ದರೆ, ಇನ್ನೊಂದು ನವವಿವಾಹಿತನ ಪಾತ್ರ. ಅವರ ಅಭಿನಯವು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ. ಖಾನ್ ಅವರ ಪವರ್​ಫುಲ್​ ಆ್ಯಕ್ಟಿಂಗ್​​, ಉತ್ತಮ ಸಂಗೀತದ ಹೊರತಾಗಿಯೂ, ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೊಂಚ ಹಿನ್ನೆಡೆ ಕಂಡಿತು.

ಮೈ ನೇಮ್ ಈಸ್ ಖಾನ್ (2010): ಈ ಚಿತ್ರದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರನ್ನು ಭೇಟಿಯಾಗಲು ಪ್ರಯಾಣವನ್ನು ಪ್ರಾರಂಭಿಸುವ ವ್ಯಕ್ತಿ ರಿಜ್ವಾನ್ ಖಾನ್ ಪಾತ್ರದಲ್ಲಿ ಎಸ್‌ಆರ್‌ಕೆ ಕಾಣಿಸಿಕೊಂಡಿದ್ದು, ಅವರದ್ದು ಅಮೋಘ ಅಭಿನಯ. ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.

ಫ್ಯಾನ್​​ (2016): ಫ್ಯಾನ್ ಒಂದು ಥ್ರಿಲ್ಲರ್ ಚಿತ್ರ. ಶಾರುಖ್ ಖಾನ್ ಅವರು ಸೂಪರ್ ಸ್ಟಾರ್ ಆರ್ಯನ್ ಖನ್ನಾ ಮತ್ತು ಅವರ ಕಟ್ಟಾ ಅಭಿಮಾನಿ ಗೌರವ್ ಎಂಬ ಎರಡು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಿಮಾನಿ ಗೌರವ್ ಪಾತ್ರಕ್ಕೆ ಖಾನ್ ಅವರ ರೂಪಾಂತರ ಗಮನಾರ್ಹವಾಗಿತ್ತು. ಓರ್ವ ನಟನಾಗಿ ಅವರ ಬಹುಮುಖ ಪ್ರತಿಭೆಯನ್ನು ಈ ಪಾತ್ರ ಪ್ರದರ್ಶಿಸಿತು. ಅಸಾಧಾರಣ ಅಭಿನಯದ ಹೊರತಾಗಿಯೂ, ಚಿತ್ರ ನಿರೀಕ್ಷೆಗಳನ್ನು ತಲುಪಲಿಲ್ಲ.

ಜೀರೋ (2018): ಚಿತ್ರದಲ್ಲಿ ಎಸ್​ಆರ್​ಕೆ ವಿಶೇಷ ಚೇತನ (vertically challenged) ಬೌವಾ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೌವಾ ಅವರ ಚಿತ್ರಣವು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ. ಆದಾಗ್ಯೂ, ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ ಶಾರುಖ್​ ಖಾನ್! ಮಧ್ಯರಾತ್ರಿ ಮನೆ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.