ETV Bharat / entertainment

ಶ್ರೀಲಂಕಾ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸೂಪರ್​ಸ್ಟಾರ್​ ರಜನಿಕಾಂತ್‌ಗೆ ಆಹ್ವಾನ - Rajinikanth latest news

ಪ್ರವಾಸೋದ್ಯಮವನ್ನು ಉತ್ತೇಜಿಸಲು ತಮ್ಮ ದೇಶಕ್ಕೆ ಆಗಮಿಸುವಂತೆ ಖ್ಯಾತ ತಮಿಳು ನಟ ರಜನಿಕಾಂತ್‌ ಅವರಿಗೆ ಶ್ರೀಲಂಕಾದ ಡೆಪ್ಯುಟಿ ಹೈಕಮಿಷನರ್ ಡಾ.ಡಿ.ವೆಂಕಟೇಶ್ವರನ್ ​ಆಹ್ವಾನ ನೀಡಿದ್ದಾರೆ.

Srilanka invites Rajinikanth
ರಜನಿಕಾಂತ್​ರನ್ನು ಆಹ್ವಾನಿಸಿದ ಶ್ರೀಲಂಕಾ
author img

By

Published : Jun 1, 2023, 8:13 AM IST

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ನೆರೆಯ ಪುಟ್ಟ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಂತೆ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಶ್ರೀಲಂಕಾ ಡೆಪ್ಯೂಟಿ ಹೈಕಮಿಷನರ್‌ ಆಹ್ವಾನಿಸಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ರಜನಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಡೆಪ್ಯೂಟಿ ಹೈಕಮಿಷನರ್‌ ಡಾ.ಡಿ.ವೆಂಕಟೇಶ್ವರನ್ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟ ರಜನಿಕಾಂತ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ನಟನಿಗೆ ವಿಶೇಷ ಆಹ್ವಾನ ನೀಡಿದರು.

ರಜನಿಕಾಂತ್ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನ ವಿವಿಧೆಡೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಶ್ರೀಲಂಕಾದಲ್ಲಿ ಸಹ ಅಲ್ಲಿನ ಜನರು ರಜನಿ ಅವರನ್ನು ಬಹಳವಾಗಿ ಇಷ್ಟಪಡುತ್ತಾರೆ, ಬೆಂಬಲಿಸುತ್ತಾರೆ. ಶ್ರೀಲಂಕಾದಲ್ಲಿರುವ ತಮಿಳು ಸಮುದಾಯ ಪದ್ಮಭೂಷಣ ಪುರಸ್ಕೃತ ನಟನನ್ನು ಹೆಚ್ಚಾಗಿ ಅನುಸರಿಸುತ್ತದೆ. ಅಲ್ಲಿನ ಅಧಿಕಾರಿಗಳು ಕೂಡಾ ರಜನಿ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಉಪಸ್ಥಿತಿಯು ಶ್ರೀಲಂಕಾದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ಲಂಕಾ ರಾಜತಾಂತ್ರಿಕ ಅಧಿಕಾರಿಗಳದ್ದು.

ಬಹುಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ರಜನಿಕಾಂತ್ ಅವರು ನಮ್ಮ ದೇಶಕ್ಕೆ ಬಂದರೆ, ಅವರ ಉಪಸ್ಥಿತಿಯು ಸಿನಿಮಾ ಪ್ರೇರಿತ ಪ್ರವಾಸೋದ್ಯಮದ ಜೊತೆಗೆ ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ಅಭಿವೃದ್ಧಿ ಆಗುತ್ತದೆ ಎಂದು ಡಾ. ಡಿ. ವೆಂಕಟೇಶ್ವರನ್ ಹೇಳಿದರು. ಶ್ರೀಲಂಕಾದಲ್ಲಿಯೇ ಇರುವ 'ramayana trail' (ಇದು 11 ದಿನಗಳು, 10 ರಾತ್ರಿಗಳ ತೀರ್ಥಯಾತ್ರೆಯ ಪ್ರವಾಸದ ಪ್ಯಾಕೇಜ್​. ವನವಾಸದ ಸಮಯದಲ್ಲಿ ಭಗವಾನ್ ರಾಮನ ಪ್ರಯಾಣದ ವಿವರಗಳನ್ನು ತಿಳಿಯಲು ಈ ಪ್ರಯಾಣ ನಿಮಗೆ ಅವಕಾಶ ನೀಡುತ್ತದೆ) ಜನರಿಗೆ ಮತ್ತಷ್ಟು ಪರಿಚಯಿಸುವ ಉದ್ದೇಶದಿಂದಲೂ ರಜನಿಕಾಂತ್ ಅವರನ್ನು ಆಹ್ವಾನಿಸಲಾಗಿದೆ. ಅಲ್ಲದೇ, ಅಲ್ಲಿ ಇತರೆ ಪುರಾತನ ಬೌದ್ಧ ತಾಣಗಳಿವೆ. ಅವುಗಳಿಗೂ ಸಹ ಪ್ರಚಾರದ ಅಗತ್ಯವಿದೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ 50ಕ್ಕೂ ಹೆಚ್ಚು ಕಲಾವಿದರಿಂದ ಡಾ.ಲೀಲಾವತಿಗೆ ಸನ್ಮಾನ: ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ಪ್ರದಾನ

ಪ್ರವಾಸೋದ್ಯಮ ಲಂಕಾದ ಪ್ರಮುಖ ಆದಾಯ ಮೂಲ: ಪ್ರವಾಸೋದ್ಯಮ ಒಂದು ದೊಡ್ಡ ಸೇವಾ ವಲಯ. ಈ ಮೂಲಕ ಜನರ ಮತ್ತು ಸಂಪೂರ್ಣ ದೇಶದ ಆದಾಯ ಹೆಚ್ಚುತ್ತದೆ. ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತದೆ. ಇದರ ಜೊತೆಗೆ ವೃತ್ತಿಜೀವನದ ಜಂಜಡದಲ್ಲಿರುವವರಿಗೆ ಉತ್ತಮ ತಾತ್ಕಾಲಿಕ ವಿರಾಮದ ತಾಣವೂ ಕೂಡ ಹೌದು. ಪ್ರವಾಸ ಆದಾಯ ಹೆಚ್ಚಿಸುವುದಲ್ಲದೇ ಜನರ ಮಾನಸಿಕ ಆರೋಗ್ಯವನ್ನೂ ವೃದ್ಧಿಸುತ್ತದೆ. ಈ ಹಿನ್ನೆಲೆಯಲ್ಲಿ ದೇಶಗಳು ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ಕೊಡುತ್ತವೆ. ಅದರಂತೆ ದೇಶದ ಪ್ರಮುಖ ಆದಾಯ ಮೂಲವೂ ಆಗಿರುವ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ, ಚೇತರಿಕ ನೀಡುವ ಉದ್ದೇಶದಿಂದ ಶ್ರೀಲಂಕಾ ಇದೀಗ ಪ್ರಖ್ಯಾತ ನಟ ರಜನಿಕಾಂತ್ ಅವರನ್ನು ಆಹ್ವಾನಿಸಿದೆ.

ಇದನ್ನೂ ಓದಿ: ಮದುವೆ, ಮಗು ಬಳಿಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಕಾಜಲ್: 'ಮಗಧೀರ' ಬೆಡಗಿಯ ಕಿಲ್ಲಿಂಗ್​ ಲುಕ್

ಲಾಲ್​ ಸಲಾಂ ರಜನಿಕಾಂತ್ ಅವರ ಮುಂದಿನ ಸಿನಿಮಾ. ಪುತ್ರಿ ಐಶ್ವರ್ಯಾ ನಿರ್ದೇಶನದ ಚಿತ್ರದಲ್ಲಿ ರಜನಿ ಪ್ರಮುಖ ಪಾತ್ರವೊಂದರಲ್ಲಿ (ಮೊಯ್ದೀನ್ ಭಾಯ್) ಕಾಣಿಸಿಕೊಳ್ಳಲಿದ್ದಾರೆ. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.