ಟೈಟಲ್, ಟ್ರೈಲರ್, ಮೇಕಿಂಗ್ನಿಂದ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿರೋ ಚಿತ್ರ ಸ್ಪೂಕಿ ಕಾಲೇಜ್. ಧಾರವಾಡದ ನೂರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಕೆಸಿಡಿ) ಕಾಲೇಜ್ನಲ್ಲಿ ಬಹತೇಕ ಚಿತ್ರೀಕರಣ ಆಗಿರುವ ಸ್ಪೂಕಿ ಕಾಲೇಜ್ ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆ ಆಗಲು ಸಜ್ಜಾಗಿದೆ.
ಸಸ್ಪೆನ್ಸ್ ಜೊತೆಗೆ ಸೈಕಲಾಜಿಕಲ್ ಹಾರರ್ ಕಥೆ ಹೊಂದಿರುವ ಸ್ಪೂಕಿ ಕಾಲೇಜ್ ಸಿನಿಮಾದಲ್ಲಿ ದಿಯಾ ಖ್ಯಾತಿಯ ಖುಷಿ ರವಿ ಹಾಗು ಪ್ರಿಮೀಯರ್ ಪದ್ಮಿನಿ ಚಿತ್ರದ ವಿವೇಕ್ ಸಿಂಹ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
ಹೌದು, ನಟಿ ಖುಷಿ ರವಿ ಅವರಿಗೆ ನಮ್ಮ ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆ ಆಗುತ್ತಿದೆ. ನೀನು ನೋಡಿದ್ರೆ ಟೈಮ್ ಪಾಸ್ ಮಾಡುತ್ತಿದ್ದೀಯಾ ಅಂತ ಸ್ಪೂಕಿ ಖುಷಿ ಬೆಚ್ಚಿ ಬೀಳಿಸುತ್ತಿದ್ದಾರೆ. ಸ್ಪೂಕಿ ಖುಷಿ ಭಯಕ್ಕೆ ಖುಷಿ ರವಿ ತಲೆ ಕೆಡಿಸಿಕೊಂಡು ನಾನು ಏಕೆ ಹಾರರ್ ಸಿನಿಮಾ ಮಾಡಿದೆ ಅಂತಾ ಫೀಲ್ ಆಗ್ತಾವ್ರೆ. ನಿಜವಾಗ್ಲೂ ಖುಷಿ ರವಿ ಈ ಹಾರರ್ ಸಿನಿಮಾ ಮಾಡಿ ಬೇಜಾರು ಮಾಡಕೊಂಡಿದ್ದಾರಾ ಅಂತಾ ಯೋಚನೆ ಮಾಡ್ತಾ ಇದ್ದೀರಾ?, ಇಲ್ಲ, ಸ್ಪೂಕಿ ಕಾಲೇಜ್ ಸಿನಿಮಾ ತಂಡ ಖುಷಿ ರವಿ ಅವರನ್ನು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸ್ಪೂಕಿ ಕಾಲೇಜ್ ಸಿನಿಮಾ ಪ್ರಮೋಷನ್ ಕಾರ್ಯವನ್ನು ಬಹಳ ಡಿಫ್ರೆಂಟ್ ಆಗಿ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸ್ಪೂಕಿ ಕಾಲೇಜ್ ಚಿತ್ರ ತಂಡ: ವಿವೇಕ್ ಸಿಂಹ ಹಾಗೂ ಖುಷಿ ರವಿ ಅಲ್ಲದೇ ಈ ಚಿತ್ರದಲ್ಲಿ ರಘು ರಮಣಕೊಪ್ಪ, ವಿಜಯ್ ಚೆಂಡೂರ್ ಶೃತಿ ರಾವ್ ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಇನ್ನು ಮನೋಹರ್ ಜೋಶಿ ಕ್ಯಾಮರಾ ವರ್ಕ್ ಈ ಚಿತ್ರದ ಅಂದವನ್ನು ಹೆಚ್ಚಿಸಿದೆ. ರಂಗಿತರಂಗ ಹಾಗು ಅವನೇ ಶ್ರೀಮನ್ನಾರಾಯಣ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೈಲರ್ನಿಂದಲೇ ಗಾಂಧಿನಗರದಲ್ಲಿ ಕ್ರೇಜ್ ಹುಟ್ಟಿಸಿರೋ ಸ್ಪೂಕಿ ಕಾಲೇಜ್ ಚಿತ್ರ ಜನವರಿ 6ರಂದು ಪ್ರೇಕ್ಷಕರಿಗೆ ದರ್ಶನ ಕೊಡಲಿದೆ.
ಇದನ್ನೂ ಓದಿ: 'ಸ್ಪೂಕಿ ಕಾಲೇಜ್'ನಲ್ಲಿ ಮೆಲ್ಲುಸಿರೆ ಸವಿಗಾನ ಅಂತಿದ್ದಾರೆ ರೀಷ್ಮಾ ನಾಣಯ್ಯ
ಸ್ಪೂಕಿ ಅಂದ್ರೆ ಏನು?: ಸ್ಪೂಕಿ ಅಂದ್ರೆ ಭಯ. ಭಯದ ವಾತಾವರಣದಲ್ಲಿ ಅನೇಕ ತರಹದ ತಿರುವುಗಳಿವೆ. ಬೆಚ್ಚಿ ಬೀಳಿಸುವ ಸನ್ನಿವೇಶಗಳಿವೆ. ಬಿಡುಗಡೆಯಾಗಿರುವ ಟೀಸರ್, ಟ್ರೈಲರ್ ಈ ಭಯದ ಸುಳಿವು ನೀಡಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ 'ಸ್ಪೂಕಿ ಕಾಲೇಜ್' ರಿಲೀಸ್; ಅಭಿಮಾನಿಗಳಲ್ಲಿ ಕುತೂಹಲ
ಮೆಲ್ಲುಸಿರೆ ಸವಿಗಾನ: ಡಾ.ರಾಜ್‌ಕುಮಾರ್ ಅವರ ಜನಪ್ರಿಯ ಹಾಡು 'ಮೆಲ್ಲುಸಿರೆ ಸವಿಗಾನ'ವನ್ನು ಈ ಸ್ಪೂಕಿ ಕಾಜೇಜ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ದಾಂಡೇಲಿಯ ದಟ್ಟ ಕಾಡಿನಲ್ಲಿ 250ಕ್ಕೂ ಅಧಿಕ ತಂತ್ರಜ್ಞರ ಸಹಾಯದಿಂದ ಅದ್ಭುತ ಸೆಟ್ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಕ್ಯಾಮರಾಮ್ಯಾನ್ ಮನೋಹರ್ ಜೋಷಿ ಸ್ಪೆಷಲ್ ಸಾಂಗ್ ಸೀನ್ಗಳನ್ನು ಸೆರೆ ಹಿಡಿದಿದ್ದಾರೆ. ನೃತ್ಯ ನಿರ್ದೇಶಕ ಭೂಷಣ್ ಕೋರಿಯೋಗ್ರಫಿ ಮಾಡಿದ್ದಾರೆ. ಏಕ್ ಲವ್ ಯಾ ಸಿನಿಮಾ ಸುಂದರಿ ರೀಷ್ಮಾ ನಾಣಯ್ಯ ನಾಲ್ಕೈದು ಕಾಸ್ಟ್ಯೂಮ್ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಸೊಂಟ ಬಳುಕಿಸಿದ್ದಾರೆ.