ಸ್ಪೂಕಿ ಕಾಲೇಜು ವಿಭಿನ್ನ ಶೀರ್ಷಿಕೆಯ ಚಿತ್ರವೊಂದು ಸ್ಯಾಂಡಲ್ವುಡ್ನಲ್ಲಿ ತಯಾರಾಗಿ ಬಿಡುಗಡೆಗೆ ಎದುರು ನೋಡುತ್ತಿದೆ. ಸದ್ಯ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ತೆರೆಗೆ ಬರುವ ದಿನಾಂಕವನ್ನೂ ಘೋಷಿಸಿದೆ. ಚಂದನವನದಲ್ಲಿ ಹಾರರ್ ಜೊತೆಗೆ ಗಟ್ಟಿ ಕಥೆಯಿಂದ ನಾ ನಿನ್ನ ಬಿಡಲಾರೆ, ಶ್, ಆಪ್ತಮಿತ್ರ, ರಂಗಿತರಂಗ ಹಿಟ್ಲಿಸ್ಟ್ಗೆ ಸೇರಿದೆ. ಆ ಸಾಲಿಗೆ ಸೇರಲು ಮತ್ತೊಂದು ಚಿತ್ರ ಕನ್ನಡ ಸಿನಿಮಾರಂಗದಲ್ಲಿ ಸಿದ್ಧವಾಗಿದೆ.
ಪ್ರೀಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಸಿಂಹ ಹಾಗು ದಿಯಾ ಚಿತ್ರದ ಮೂಲಕ ಗಮನ ಸೆಳೆದಿರೋ ಖುಷಿ ರವಿ ಸ್ಪೂಕಿ ಕಾಲೇಜು ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ರೇಡಿಯೋ ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ಹೆಚ್ಚು ಅನುಭವ ಇರುವ ಭರತ್ ಜೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರು ಹೇಳುವಂತೆ ಕೋವಿಡ್ ಸಂದರ್ಭದಲ್ಲಿ ಈ ಸಿನಿಮಾ ಶುರುವಾಯಿತು. ಆದರೆ ನಮ್ಮ ಈ ಸಿಮಿಮಾಗೆ ಯಾವುದೇ ಸಮಸ್ಯೆ ಆಗದಂತೆ ಚಿತ್ರೀಕರಣ ಮುಗಿಸಿದ್ದೇವೆ. ಈ ಸಿನಿಮಾ ಕೇವಲ ಹಾರರ್ ಅಲ್ಲ ಹಾಸ್ಯವೂ ಪ್ರಧಾನವಾಗಿದೆ ಎಂದಿದ್ದಾರೆ.
ಭರತ್ ಜೆ ಈ ಸಿನಿಮಾದ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಸಂಭಾಷಣೆಯನ್ನೂ ಬರೆದಿದ್ದಾರೆ. ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಅಂತಹ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರಾದ ಹೆಚ್.ಕೆ.ಪ್ರಕಾಶ್ ಅವರು ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ಸ್ಪೂಕಿ ಕಾಲೇಜ್ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ.
- " class="align-text-top noRightClick twitterSection" data="">
ವಿವೇಕ್ ಸಿಂಹ ಹಾಗು ದಿಯಾ ಖುಷಿ ರವಿ ಅಲ್ಲದೇ ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಪಿ.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು. ಇಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಇನ್ನು ಕಾಳಿ ನದಿಯಿಂದ ಆವೃತವಾಗಿರುವ, ದಟ್ಟವಾದ ವನಸಿರಿಯನ್ನು ಹೊಂದಿರುವ ದಾಂಡೇಲಿಯಲ್ಲಿ ಸ್ಪೂಕಿ ಕಾಲೇಜು ಚಿತ್ರವನ್ನ ಚಿತ್ರೀಕರಣ ಮಾಡಲಾಗಿದೆ.
ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಮನಮೋಹಕ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಇಂಪಾದ ಸಂಗೀತ ಹಾಗೂ ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ ಸ್ಪೂಕಿ ಕಾಲೇಜ್ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿರುವ ಸ್ಪೂಕಿ ಕಾಲೇಜು ಚಿತ್ರ ನವೆಂಬರ್ 25ಕ್ಕೆ ತೆರೆಕಾಣಲಿದೆ.
ಇದನ್ನೂ ಓದಿ : 'ಅಟ್ಲಿ' ಸಿನಿಮಾದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ನಟನೆ