ಬಾಲಿವುಡ್ ನಟಿ ಸೋನಂ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ನಟಿ ತನ್ನ ಗರ್ಭಾವಸ್ಥೆಯ ಅವಧಿಯನ್ನು ಆನಂದಿಸುತ್ತಿದ್ದು ಆಗಾಗ್ಗೆ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದಕ್ಕೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಪತಿ ಆನಂದ್ ಅಹುಜಾ ಜೊತೆಗಿನ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಕಾಂಪ್ಲಿಮೆಂಟ್ಸ್ ಸಿಗುವುದು ಸಾಮಾನ್ಯ.
ಇದೀಗ ಸೋನಂ ಕಪೂರ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಪತಿ ಆನಂದ್ ಅಹುಜಾ ಸಖತ್ ಖುಷಿಯಾಗಿರುವ ಫೋಟೋ ಮತ್ತು ಸೋನಂ ಕಪೂರ್ ತಮ್ಮ ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ. ಫೋಟೋದೊಂದಿಗೆ ''pool ready!'' ಎಂದು ಬರೆದಿದ್ದಾರೆ. ಅಭಿಮಾನಿಗಳಿಗಾಗಿ ಹಂಚಿಕೊಂಡಿರುವ ಫೋಟೋಗೆ ಪ್ರತಿಕ್ರಿಯೆಗಳು ಬರುತ್ತಿವೆ.
ಮೊದಲು ಸೋನಂ ಕಪೂರ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪತಿ ಆನಂದ್ ಅಹುಜಾ ಜೊತೆಗಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಪತಿಯೊಂದಿಗೆ ಮತ್ತೆ ಒಂದಾಗಿರುವುದಾಗಿ ಬರೆದುಕೊಂಡಿದ್ದರು. ಅಂದರೆ ತಮ್ಮ ಪತಿಯನ್ನು ಬಹು ದಿನಗಳ ನಂತರ ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದರು. ನಂತರ ಕಪ್ಪು ಉಡುಗೆಯಲ್ಲಿ ತಮ್ಮ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಯಿಂದ ಗುಲಾಬಿ ಪಡೆದು ಪ್ಲೈಕಿಸ್ ಕೊಟ್ಟ ನೀಲಿ ಕಣ್ಣಿನ ಚೆಲುವೆ!
ಸೋನಂ ಕಪೂರ್ ಅವರು ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8, 2018ರಂದು ಮುಂಬೈನಲ್ಲಿ ವಿವಾಹವಾಗಿದ್ದರು. ಕೆಲ ಸಮಯದ ಹಿಂದೆ ತಾವು ತಾಯಿಯಾಗಲಿರುವ ಸಂತೋಷದ ವಿಷಯವನ್ನು ಇನ್ಸ್ಟಾಗ್ರಾಮ್ ಮೂಲಕ ಬಹಿರಂಗಪಡಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸೋನಂ ಕಪೂರ್ ತಾಯ್ತನದ ಸುಂದರ ಅನುಭವ ಪಡೆಯಲಿದ್ದಾರೆ.