ETV Bharat / entertainment

'ಆ್ಯಕ್ಷನ್​ ಸಿನಿಮಾದಲ್ಲಿ ನಮಗೆ ಅವಕಾಶ ಕೊಡಬೇಕು': ನಿರ್ದೇಶಕರು, ನಿರ್ಮಾಪಕರಿಗೆ ಆಫರ್ ಇಟ್ಟ ಕಂಗನಾ ರಣಾವತ್ - ಕಂಗನಾ ರಣಾವತ್ ಲೇಟೆಸ್ಟ್ ನ್ಯೂಸ್

ನಟಿ ಕಂಗನಾ ರಣಾವತ್ ಇನ್‌ಸ್ಟಾಗ್ರಾಮ್ ಸ್ಟೋರಿ ನೆಟ್ಟಿಗರ ಗಮನ ಸೆಳೆದಿದೆ.

Kangana Ranaut vidyut jammwal
ಕಂಗನಾ ರಣಾವತ್ ವಿದ್ಯುತ್ ಜಮ್ವಾಲ್
author img

By

Published : Aug 1, 2023, 7:40 PM IST

ನಟಿ, ನಿರ್ಮಾಪಕಿ ಕಂಗನಾ ರಣಾವತ್ ಅವರು ನಟ ವಿದ್ಯುತ್ ಜಮ್ವಾಲ್ ಜೊತೆ ರ‍್ಯಾಂಪ್ ವಾಕ್ ಮಾಡುತ್ತಿರುವ ಹಳೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಳೇ ಫ್ಯಾಶನ್​ ಈವೆಂಟ್​ನ ವಿಡಿಯೋ ಕ್ಲಿಪ್​ ಶೇರ್ ಮಾಡಿರುವ ನಟಿ, ಆ್ಯಕ್ಷನ್ ಸಿನಿಮಾದಲ್ಲಿ ತಮಗೆ ಅವಕಾಶ ಕೊಡಬಹುದು ಎಂದು ನಿರ್ದೇಶಕರುಗಳಿಗೆ ಆಫರ್​ ಇಟ್ಟರು. ಫಿಟ್ನೆಸ್ ಐಕಾನ್ ಆಗಿರುವ ವಿದ್ಯುತ್ ಜಮ್ವಾಲ್ ಆ್ಯಕ್ಷನ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತ ಕಂಗನಾ ಕೂಡ ಆ್ಯಕ್ಷನ್ ಚಲನಚಿತ್ರಗಳನ್ನು ಮಾಡಲು ಇಷ್ಟಪಡುತ್ತಾರೆ. ಇದೀಗ ಅವರ ಇನ್​ಸ್ಟಾ ಸ್ಟೋರಿ ಸಹ ಈ ಬಗ್ಗೆಯೇ ಮಾತನಾಡಿದೆ.

Kangana Ranaut vidyut jammwal
ಕಂಗನಾ ರಣಾವತ್ ಇನ್​ಸ್ಟಾ ಸ್ಟೋರಿ

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಕ್ಲಿಪ್​ನಲ್ಲಿ ನಟಿ ಸೆಮಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರೆ, ನಟ ಸ್ಟೈಲಿಶ್​ ಸೂಟ್​ನಲ್ಲಿ ಕಾಣಿಸಿಕೊಂಡರು. ವಿದ್ಯುತ್ ಜಮ್ವಾಲ್ ಅವರೊಂದಿಗೆ ರ‍್ಯಾಂಪ್ ವಾಕ್ ಮಾಡುತ್ತಿರುವ ಹಳೇ ವಿಡಿಯೋ ಇದಾಗಿದ್ದು, ಕಂಗನಾ ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ಲೆಹೆಂಗಾಗೆ ಸೆಟ್ ಆಗುವ ಜ್ಯುವೆಲರಿಗಳು ನಟಿಯ ಅಂದ ಚೆಂದ ಹೆಚ್ಚಿಸಿದೆ.

ಕಂಗನಾ ರಣಾವತ್ ವಿದ್ಯುತ್ ಜಮ್ವಾಲ್ ರ‍್ಯಾಂಪ್ ವಾಕ್

ಈ ಇಬ್ಬರೂ ಪ್ರತಿಭಾನ್ವಿತ ನಟರು ಬೆರಗುಗೊಳಿಸುವ ನೋಟ ಬೀರಿದ್ದಾರೆ. ವಿಡಿಯೋ ಹಂಚಿಕೊಂಡ ತನು ವೆಡ್ಸ್ ಮನು ನಟಿ "ಒಳ್ಳೆಯ ಜೋಡಿ...ಯಾರಾದರೂ ನಮ್ಮನ್ನು ಯಾವುದಾದರೂ ಆ್ಯಕ್ಷನ್ ಚಿತ್ರದಲ್ಲಿ ಹಾಕಿಕೊಳ್ಳಬೇಕು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇವರ ವಯಸ್ಸು 68 ಅಂದ್ರೆ ನಂಬ್ತೀರಾ - ಯುವ ಕಲಾವಿದರೊಂದಿಗೆ ತರುಣಿಯಂತೆ ಕಂಗೊಳಿಸಿದ ಬಾಲಿವುಡ್​ ಬ್ಯೂಟಿ ರೇಖಾ

ಆ್ಯಕ್ಷನ್ ಸಿನಿಮಾದಲ್ಲಿ ವಿದ್ಯುತ್ ಜಮ್ವಾಲ್ ಜೊತೆ ಕೆಲಸ ಮಾಡುವ ಬಯಕೆಯನ್ನು ಕಂಗನಾ ವ್ಯಕ್ತಪಡಿಸಿದ್ದಾರೆ. ಈ ಇಬ್ಬರೂ ಆ್ಯಕ್ಷನ್​ ಸಿನಿಮಾವನ್ನು ಇಷ್ಟಪಡುತ್ತಾರೆ. ವಿದ್ಯುತ್ ಈ ಹಿಂದೆ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಫೋರ್ಸ್‌ನಲ್ಲಿ ಕೆಲಸ ಮಾಡಿದ್ದಾರೆ. ಫೋರ್ಸ್ ನಟನ ಚೊಚ್ಚಲ ಚಿತ್ರವೂ ಹೌದು. ಈ ಚಿತ್ರವನ್ನು ವಿಪುಲ್ ಅಮೃತ್‌ಲಾಲ್ ಷಾ ನಿರ್ಮಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ವಿದ್ಯುತ್‌ ಅವರ ಸಾಮರ್ಥ್ಯ ಗಮನಿಸಿದ ನಿರ್ಮಾಪಕರು ಅವರಿಗೆ ಕಮಾಂಡೋ ಪಾತ್ರ ನೀಡಿದರು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿರುವ ಸನಕ್ - ಹೋಪ್ ಅಂಡರ್ ಸೀಜ್‌ ನಲ್ಲಿಯೂ ನಟ ಆ್ಯಕ್ಷನ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​​ನಲ್ಲಿ ಭಟ್ ಫ್ಯಾಮಿಲಿ: ಪುತ್ರಿ ಭೇಟಿಯಾದ ಮಹೇಶ್ ಭಟ್, ಇಂದು ಸೆಲೆಬ್ರಿಟಿ ಹೌಸ್​​ಗೆ ಆಲಿಯಾ ಭಟ್ ಎಂಟ್ರಿ

ಇನ್ನೂ ಕಂಗನಾ ರಣಾವತ್ ಅವರ ನಟನಾ ಸಾಮರ್ಥ್ಯದ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಧಾಕಡ್ ಚಿತ್ರದಲ್ಲಿ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಹಲವು ಸಾಹಸಗಳನ್ನು ಪ್ರದರ್ಶಿಸಿದ್ದಾರೆ. ಇತರೆ ಚಿತ್ರಗಳಲ್ಲಿಯೂ ಆ್ಯಕ್ಷನ್ ದೃಶ್ಯಗಳಿವೆ. ಮಣಿಕರ್ಣಿಕಾ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಕತ್ತಿಯುದ್ಧವನ್ನು ಸಹ ಕಲಿತರು. ಕಂಗನಾ ಸದ್ಯ ತೇಜಸ್ ಮತ್ತು ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.