ಇತ್ತೀಚಿನ ದಿನಗಳಲ್ಲಿ ಗಾಯಕರು, ಸಂಗೀತ ನಿರ್ದೇಶಕರು ಸಿನಿಮಾ ಹೀರೋ ಆಗೋದು ಕಾಮನ್ ಆಗಿದೆ. ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಎಲ್ರ ಕಾಲೆಳೆಯತ್ತೆ ಕಾಲ ಸಿನಿಮಾದಲ್ಲಿ ಹೀರೋ ಆಗಿಯೂ ಎಂಟ್ರಿ ನೀಡಿದ್ದರು. ಆ ಸಿನಿಮಾ ತೆರೆಗೆ ಬರುವ ಮುನ್ನವೇ ಅವರು ಮತ್ತೊಂದು ಸಿನಿಮಾಗೆ ಹೀರೋ ಆಗಿದ್ದಾರೆ. ಆ ಸಿನಿಮಾವು ವಿಜಯ ದಶಮಿ ಹಬ್ಬದಂದು ಸೆಟ್ಟೇರಲಿದೆ.
![Singer Chandan shetty became the hero](https://etvbharatimages.akamaized.net/etvbharat/prod-images/kn-bng-01-hesaridha-hosa-cinemage-hero-aadha-singer-chandhan-shetty-7204735_19092022111516_1909f_1663566316_669.jpg)
ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಇದು ಅವರಿಗೆ ಮೊದಲ ಚಿತ್ರ. ಚಂದನ್ ಶೆಟ್ಟಿ ಅಭಿನಯದ ಜೊತೆಗೆ ಸಂಗೀತ ಸಂಯೋಜಿಸಲಿದ್ದಾರೆ. ಪಿ ಕೆ ಹೆಚ್ ದಾಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹೆಸರಿಡದ ಚಿತ್ರಕ್ಕೆ ಚಂದನ್ ಶೆಟ್ಟಿ ಹಾಗೂ ತಬಲ ನಾಣಿ ಆಯ್ಕೆಯಾಗಿದ್ದಾರೆ. ಇನ್ನು, ನಾಯಕಿ ಸೇರಿದಂತೆ ಅನೇಕ ಹಿರಿಯ ಕಲಾವಿದರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಬೇಕಾಗಿದೆ.
![Singer Chandan shetty became the hero](https://etvbharatimages.akamaized.net/etvbharat/prod-images/kn-bng-01-hesaridha-hosa-cinemage-hero-aadha-singer-chandhan-shetty-7204735_19092022111516_1909f_1663566316_177.jpg)
![Singer Chandan shetty became the hero](https://etvbharatimages.akamaized.net/etvbharat/prod-images/kn-bng-01-hesaridha-hosa-cinemage-hero-aadha-singer-chandhan-shetty-7204735_19092022111516_1909f_1663566316_6.jpg)
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್ ಸೇರಿದಂತೆ ಸಾಕಷ್ಟು ಸಮಾರಂಭಗಳನ್ನು ಮಾಡುತ್ತಿರುವ ನವರಸನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈವರೆಗೂ ದಮಯಂತಿ ಸೇರಿದಂತೆ ನಾಲ್ಕು ಚಿತ್ರಗಳನ್ನು ನವರಸನ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಣದೊಂದಿಗೆ ಕ್ರಿಯೇಟಿವ್ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಹೆಸರಿಡದ ಈ ಹೊಸ ಚಂದನ್ ಶೆಟ್ಟಿ ಸಿನಿಮಾ ವಿಜಯ ದಶಮಿಗೆ ಆರಂಭವಾಗಲಿದ್ದು, ಅಕ್ಟೋಬರ್ 10ರಿಂದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.
ಇದನ್ನೂ ಓದಿ: ಸಂಗೀತ ನಿರ್ದೇಶನದ ಜೊತೆಗೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ!