ETV Bharat / entertainment

ವಿನಯ್ ರಾಜ್​ಕುಮಾರ್ ಸಿನಿಮಾಗೆ ಸಿಂಪಲ್ ಸುನಿ ನಿರ್ದೇಶನ - Simple Suni latest news

ಸಿಂಪಲ್ ಸುನಿ ರೊಮ್ಯಾಂಟಿಕ್ ಸಿನಿಮಾವೊಂದನ್ನು ನಿರ್ದೇಶಿಸಲಿದ್ದು, ವಿನಯ್ ರಾಜ್​ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

Vinay Rajkumar upcoming movie
ವಿನಯ್ ರಾಜ್​ಕುಮಾರ್ ಮುಂದಿನ ಸಿನಿಮಾ
author img

By

Published : Jan 5, 2023, 12:12 PM IST

ಕನ್ನಡ ಚಿತ್ರರಂಗದಿಂದ ಉತ್ತಮ ಕಥೆಗಳುಳ್ಳ, ಅದ್ಧೂರಿ ಮೇಕಿಂಗ್​ ಇರುವ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಈ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಸ್ಯಾಂಡಲ್​​ವುಡ್​ ವಿಶೇಷ ರೀತಿಯಲ್ಲಿ ಗಮನ ಸೆಳೆಯುತ್ತಿದೆ. ಈ ಬಣ್ಣದ ಲೋಕಕ್ಕೆ ಹೊಸ ಪ್ರತಿಭೆಗಳ ಜೊತೆ ಸ್ಟಾರ್​ ಕಿಡ್ಸ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಆ ರೀತಿ ಬಂದು ಹೆಸರು ಮಾಡಿದವರಲ್ಲಿ ದೊಡ್ಮನೆ ಹುಡುಗ ವಿನಯ್ ರಾಜ್​ಕುಮಾರ್ ಸಹ ಇದ್ದಾರೆ. ಈವರೆಗೆ ಹೇಳಿಕೊಳ್ಳುವ ಸೂಪರ್​ ಹಿಟ್​ ಸಿನಿಮಾ ಮಾಡದಿದ್ರೂ, ಅಭಿಮಾನಿಗಳ ಪಾಲಿಗೆ ಮೆಚ್ಚಿನ ಹೀರೋ ಇವರು. ಇವರ ಮುಂದಿನ ಸಿನಿಮಾಗೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ ಡೈರೆಕ್ಟರ್​ ಸಿಂಪಲ್ ಸುನಿ. ಇವರಿಬ್ಬರ ಕಾಂಬೋದಲ್ಲಿ ಮೂಡಿಬರಲಿರುವ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ವಿನಯ್ ರಾಜ್​ಕುಮಾರ್ ಸಿನಿಮಾಗೆ ಸುನಿ ನಿರ್ದೇಶನ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್​ಫುಲ್ ನಿರ್ದೇಶಕನಾಗಿ ಹೊರ ಹೊಮ್ಮಿರುವ ಡೈರೆಕ್ಟರ್​ ಸಿಂಪಲ್ ಸುನಿ. ಆಪರೇಷನ್ ಅಲಮೆಲಮ್ಮ ಹಾಗು ಚಮಕ್ ಅಂತಹ ಯಶಸ್ವಿ ಚಿತ್ರಗಳ ಬಳಿಕ ನಟ ಶರಣ್ ಜೊತೆ ಅವತಾರ ಪುರುಷ ಸಿಮಿಮಾ ಮಾಡಿದರು. ‌ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಬಂದ ಅವತಾರ ಪುರುಷ ಸಿನಿಮಾ ಪ್ರೇಕ್ಷಕರಿಗೆ ಹೇಳುವಷ್ಟರ ಮಟ್ಟಿಗೆ ಇಷ್ಟ ಆಗಲಿಲ್ಲ. ಕೊಂಚ ಬ್ರೇಕ್ ಬಳಿಕ ನಿರ್ದೇಶಕ ಸಿಂಪಲ್ ಸುನಿ ಇದೀಗ ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ತಯಾರಿ ನಡೆಸುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದೊಡ್ಮನೆ ಹುಡುಗ ವಿನಯ್ ರಾಜ್​ಕುಮಾರ್​ ಅವರಿಗೆ ಸಿಂಪಲ್ ಸುನಿ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ.

ಇದು ಮೊದಲ ಪ್ರಯತ್ನ: ಸಿಂಪಲ್ ಸುನಿ ಮುಂದಿನ ಚಿತ್ರ ರೊಮ್ಯಾಂಟಿಕ್ ಸಬ್ಜೆಕ್ಟ್ ಒಳಗೊಂಡಿದ್ದು, ನಾಯಕ ನಟನಾಗಿ ವಿನಯ್ ರಾಜ್​ಕುಮಾರ್ ನಟಿಸುತ್ತಿದ್ದಾರೆ. ಚೊಚ್ಚಲ ಬಾರಿಗೆ ಸಿಂಪಲ್ ಸುನಿ ಹಾಗೂ ವಿನಯ್ ರಾಜ್​ಕುಮಾರ್ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಇಬ್ಬರ ಕಾಂಬಿನೇಶನ್ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ಸಿಂಪಲ್ ಸುನಿ ಬರೆದಿದ್ದಾರೆ.

ಇದನ್ನೂ ಓದಿ: ಕನ್ನಡದ ತಾರಾಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆ ದಿನಾಂಕ ಫಿಕ್ಸ್

ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿಂಪಲ್ ಸುನಿ ಸದ್ಯದಲ್ಲೇ ಟೈಟಲ್, ತಾರಾಬಳಗ ಸೇರಿದಂತೆ ಎಲ್ಲದರ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳೋದಾಗಿ ತಿಳಿಸಿದ್ದಾರೆ. ವಿನಯ್ ರಾಜ್​ಕುಮಾರ್ ಅಭಿನಯದ ಪೆಪೆ, ಗ್ರಾಮಾಯಣ, ಅದೊಂದಿತ್ತು ಕಾಲ ಸಿನಿಮಾಗಳ ಕೆಲಸ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಬಾರಿ ದೊಡ್ಮನೆ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಉಡುಗೊರೆ ನೀಡೋಕೆ ವಿನಯ್ ರಾಜ್​ಕುಮಾರ್ ಕೂಡ ರೆಡಿಯಾಗಿದ್ದಾರೆ.

ಇದನ್ನೂ ಓದಿ: ಮಾದರಿ ನಟ ಹೀಗೆ ಮಾಡಬಹುದೇ? ಸೋನುಸೂದ್​ ರೈಲು ಪಯಣದ ವಿಡಿಯೋಗೆ ಟೀಕೆ

ಅಂದಹಾಗೆ, ಸಿಂಪಲ್ ಸುನಿ, ವಿನಯ್ ರಾಜ್​ಕುಮಾರ್ ಕಾಂಬೋದಲ್ಲಿ ಮೂಡಿಬರಲಿರುವ ಮೊದಲ ಚಿತ್ರಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡುತ್ತಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸಭಾ ಛಾಯಾಗ್ರಹಣ ಇರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.