ETV Bharat / entertainment

ರಾಜ್ ಬಿ ಶೆಟ್ಟಿ ಸಿನಿಮಾ ಪ್ರೇಮದ ಬಗ್ಗೆ ಸಿಂಪಲ್‌ ಮತ್ತು ಡಿವೈನ್ ಸ್ಟಾರ್ ಹೇಳಿದ್ದೇನು? - ಟೋಬಿ

ಬಹು ನಿರೀಕ್ಷಿತ ಟೋಬಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಕುರಿತು ಸಿಂಪಲ್‌ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಏನು ಹೇಳಿದ್ದಾರೆ ನೋಡಿ.

toby movie trailer
ಟೋಬಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ
author img

By

Published : Aug 6, 2023, 7:00 AM IST

ಕನ್ನಡ ಚಿತ್ರರಂಗದಲ್ಲಿ 'ಒಂದು ಮೊಟ್ಟೆಯ ಕಥೆ' ಸಿನಿಮಾ ಮುಖಾಂತರ ಪ್ರೇಕ್ಷಕರ ಮನ ಗೆದ್ದ ರಾಜ್ ಬಿ ಶೆಟ್ಟಿ ಇದೀಗ 'ಟೋಬಿ' ಅವತಾರ ತಾಳಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿತ್ರದ ಟೈಟಲ್ ಹಾಗೂ ಪೋಸ್ಟರ್​ನಿಂದಲೇ ಸೌತ್ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿರುವ ಟೋಬಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರ ಮನ ಗೆದ್ದಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ.

ಸಿನಿಮಾದ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 3 ಮಿಲಿಯನ್ ಜನ‌‌ ನೋಡಿ ಮೆಚ್ಚಿಕೊಂಡಿದ್ದಾರೆ. ವಿಚಿತ್ರ ಟೈಟಲ್​ನೊಂದಿಗೆ ದಕ್ಷಿಣ ಭಾರತದಲ್ಲಿ ಹವಾ ಕ್ರಿಯೇಟ್ ಮಾಡಿರೋ‌ ಟೋಬಿ ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್​ಗೆ ನಟ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೆಚ್ಚಿನ ಗೆಳೆಯನ ಕಾರ್ಯ ವೈಖರಿ ಮತ್ತು ಸಿನಿಮಾ ವ್ಯಾಮೋಹದ ಬಗ್ಗೆ ಕೊಂಡಾಡಿದ್ದಾರೆ.

toby movie trailer
ನಟಿಯರ ಜೊತೆ ರಾಜ್ ಬಿ ಶೆಟ್ಟಿ

ಮೊದಲು ಮಾತನಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, "ನನಗೆ ರಾಜ್ ಬಿ ಶೆಟ್ಟಿ ಹಾಗೂ ತಂಡದವರನ್ನು ನೋಡಿದ್ರೆ ಖುಷಿಯಾಗುತ್ತದೆ‌‌‌. ಚಿಕ್ಕ ಬಜೆಟ್​ನಲ್ಲಿ 'ಒಂದು ಮೊಟ್ಟೆಯ ಕಥೆ' ಮಾಡಿ ಹಿಟ್ ಮಾಡಿ ತೋರಿಸಿದರು. ಆನಂತರ 'ಗರುಡ ಗಮನ ವೃಷಭ ವಾಹನ' ಕೂಡ ಸೂಪರ್ ಹಿಟ್ ಆಯಿತು. ಈಗ 'ಟೋಬಿ' ಸರದಿ. ಈ ಚಿತ್ರ ಆ ಎರಡೂ ಚಿತ್ರಗಳನ್ನು ಮೀರಿಸುವಷ್ಟು ಯಶಸ್ವಿಯಾಗಲಿದೆ ಎಂದರು.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮಾತನಾಡಿ, "ಈ ಚಿತ್ರದ ಕಥೆ ಟಿ.ಕೆ. ದಯಾನಂದ್ ನನಗೆ ಮೊದಲು ಹೇಳಿದ್ದು. ನಾನು ಆಗ 'ಕಾಂತಾರ'ದಲ್ಲಿ ಬ್ಯುಸಿಯಾಗಿದ್ದೆ. ಆನಂತರ ರಾಜ್ ಬಿ ಶೆಟ್ಟಿ ಅವರಿಗೆ ಹೇಳಿದರು. 'ಟೋಬಿ' ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಇದೀಗ ಬಿಡುಗಡೆಯಾಗಿರುವ ಟ್ರೇಲರ್ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಚಿತ್ರ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಶುಭ ಹಾರೈಸಿದರು.

toby movie trailer
ಟೋಬಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ

ಬಳಿಕ ಮಾತನಾಡಿದ ರಾಜ್ ಬಿ ಶೆಟ್ಟಿ, 'ಟೋಬಿ' ನನ್ನೊಬ್ಬನ ಚಿತ್ರವಲ್ಲ. ಇಡೀ ತಂಡದ ಸಿನಿಮಾ. ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನನಗೆ ಇಂದು ಹೆಚ್ಚು ಖುಷಿಯಾಗಿರುವುದು ಬೇರೆ ಚಿತ್ರತಂಡದವರು ಬಂದು ನಮ್ಮ ಚಿತ್ರಕ್ಕೆ ಪ್ರಮೋಷನ್ ಮಾಡುತ್ತಿರುವುದು. ನಮ್ಮ ಚಿತ್ರ ಬಿಡುಗಡೆಯಾಗಿ ಒಂದೇ ವಾರಕ್ಕೆ ರಕ್ಷಿತ್ ಶೆಟ್ಟಿ ಅವರ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರ ಬಿಡುಗಡೆಯಾಗುತ್ತಿದೆ. 'ಹಾಸ್ಟೆಲ್ ಹುಡುಗರು' ಮತ್ತು 'ಸಪ್ತ ಸಾಗರದಾಚೆ ಎಲ್ಲೋ' ತಂಡ ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆ. ಇದು ಮುಂದುವರೆಯಲಿ‌ ಅಂತಾ ಸಾಥ್ ಕೊಟ್ಟ ಗೆಳಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ : Raj B Shetty: 'ಟೋಬಿ' ಟ್ರೇಲರ್​ ರಿಲೀಸ್​: ರಾಜ್​ ಬಿ ಶೆಟ್ಟಿ ಹೊಸ ಸಿನಿಮಾ ಮೇಲೆ ಭಾರಿ ಕುತೂಹಲ

ಕಥೆಗಾರ ಟಿ.ಕೆ ದಯಾನಂದ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಾಜ್ ಬಿ ಶೆಟ್ಟಿಯ ಜೊತೆಗೆ ಚೈತ್ರ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಮತ್ತು ಇನ್ನಷ್ಟು ಕಲಾವಿದರ ತಾರಾ ಬಳಗವಿದ್ದು, ಬಾಸಿಲ್ ಅಲ್ಚಾಲಕ್ಕಲ್ ನಿರ್ದೇಶನ ಮಾಡಿದ್ದಾರೆ. ಮಿಥುನ್ ಮುಕುಂದನ್ ಅವರ ಹಿನ್ನೆಲೆ ಸಂಗೀತ ಮತ್ತು ಪ್ರವೀಣ್ ಶೀಯಾನ್ ಅವರ ಛಾಯಾಗ್ರಹಣ ಟ್ರೇಲರ್‌ಗೆ ಮತ್ತಷ್ಟು ಕೌತುಕತೆಯನ್ನು ನೀಡಿದೆ.

ಈ ಚಿತ್ರವನ್ನು ಲೈಟರ್ ಬುದ್ಧ ಫಿಲಂಮ್ಸ್, ಅಗಸ್ತ್ಯ ಫಿಲಂಮ್ಸ್, ಕಾಫಿ ಗ್ಯಾಂಗ್ ಸ್ಟುಡಿಯೋ ಮತ್ತು ಸ್ಮೂತ್ ಸೈಲರ್ಸ್ ಜಂಟಿಯಾಗಿ ನಿರ್ಮಾಪಕರಾದ ರವಿ ರೈ ಕಳಸ, ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಈ ವೇದಿಕೆಯಲ್ಲಿ ನಟ ಪ್ರಮೋದ್ ಶೆಟ್ಟಿ ಮತ್ತು 'ಚಾರ್ಲಿ' ಖ್ಯಾತಿಯ ಕಿರಣ್ ರಾಜ್ ಟೋಬಿಗೆ ಶುಭ ಕೋರಿದರು. ಜೊತೆಗೆ ಹಾಸ್ಟೆಲ್ ಹುಡುಗರು ಮತ್ತು ಟೋಬಿಗಾಗಿ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಸದ್ಯಕ್ಕೆ ಟ್ರೇಲರ್​ನಿಂದಲೇ ಸೌತ್ ಸಿನಿಮಾರಂಗದಲ್ಲಿ ಹವಾ ಸೃಷ್ಟಿಸಿರೋ ಟೋಬಿ ಇದೇ ಆಗಸ್ಟ್ 25 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.