ಕನ್ನಡ ಕಿರುತೆರೆ ಜನಪ್ರಿಯ ಶೋ 'ವೀಕೆಂಡ್ ವಿತ್ ರಮೇಶ್' ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿದೆ. ಸೀಸನ್ 5ರಲ್ಲಿ ಈಗಾಗಲೇ 7 ಸಾಧಕರು ಬಂದು ಹೋಗಿದ್ದು, ಈ ವಾರ ಕೂಡ ಇಬ್ಬರು ಸಾಧಕರು ಬರಲಿದ್ದಾರೆ.
- " class="align-text-top noRightClick twitterSection" data="
">
ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಮೂಲಕ ಆರಂಭಗೊಂಡ 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ನೃತ್ಯ ನಿರ್ದೇಶಕ ಪ್ರಭುದೇವ, ಜಯದೇವ ಸಂಸ್ಥೆಯ ಡಾ. ಸಿ.ಎನ್ ಮಂಜುನಾಥ್, ಹಿರಿಯ ಕಲಾವಿದ ದತ್ತಣ್ಣ, ನಟ ಡಾಲಿ ಧನಂಜಯ್, ನಟ ಅವಿನಾಶ್, ನಟ ಮಂಡ್ಯ ರಮೇಶ್ ತಮ್ಮ ಜೀವನದ ಸಾಧನೆ ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಈ ವೀಕೆಂಡ್ನಲ್ಲಿ 8 ಮತ್ತು 9ನೇ ಅತಿಥಿಯಾಗಿ ಸಿನಿಮಾ ಲೋಕದ ಸಿಹಿಕಹಿ ಚಂದ್ರು ಮತ್ತು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಭಾಗಿಯಾಗಲಿದ್ದಾರೆ.
- " class="align-text-top noRightClick twitterSection" data="
">
ವೀಕೆಂಡ್ ವಿತ್ ರಮೇಶ್ ಪ್ರೋಮೋ: ಈ ಜನಪ್ರಿಯ ಕಾರ್ಯಕ್ರಮದ ಪ್ರೋಮೋ ರಿಲೀಸ್ ಅಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಜೀ ವಾಹಿನಿ ''ಸಿಹಿಕಹಿಯಂತೆ ಮನರಂಜನೆ ಕೊಟ್ಟ ಚಂದ್ರು, ಲಕ್ಷಾಂತರ ಜನಕ್ಕೆ ಸ್ಫೂರ್ತಿ ತುಂಬಿದ ಡಾ. ಗುರುರಾಜ ಕರಜಗಿ ಅವರು ಈ ವೀಕೆಂಡ್‌ನ ಅತಿಥಿಗಳು, ವೀಕೆಂಡ್ ವಿತ್ ರಮೇಶ್ - 5'' ಎಂದು ಬರೆದುಕೊಂಡಿದೆ. ಇದಕ್ಕೂ ಮುನ್ನ ಬ್ಲರ್ ಚಿತ್ರವೊಂದನ್ನು ಹಂಚಿಕೊಂಡು ಯಾರೆಂದು ಗೆಸ್ ಮಾಡಿ ಅಂತಾ ಪ್ರೇಕ್ಷಕರಲ್ಲಿ ಕೇಳಿಕೊಳ್ಳಲಾಗಿತ್ತು. ಅದರಲ್ಲಿ ಬಹುತೇಕ ಮಂದಿ ಸಿಹಿಕಹಿ ಚಂದ್ರು ಮತ್ತು ಡಾ. ಗುರುರಾಜ ಕರಜಗಿ ಹೆಸರನ್ನೇ ತಿಳಿಸಿದ್ದರು.
ಇದನ್ನೂ ಓದಿ: ಶಾರುಖ್ ಪುತ್ರನ ಬಟ್ಟೆ ಬ್ರ್ಯಾಂಡ್ ಜಾಹೀರಾತು: ತಂದೆಗೆ ಆ್ಯಕ್ಷನ್ ಕಟ್ ಹೇಳಿದ ಮಗ
ನೆಟ್ಟಿಗರು ಹೀಗಂದ್ರು: ಈ ವಾರದ ಸಾಧಕರ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಡಾ. ಮಂಜುನಾಥ್, ಡಾ. ಗುರುರಾಜ ಕರಜಗಿ ನಿಜವಾಗಿಯೂ ಸಾಧಕರೆ. ಇಂತಹ ಸಾಧಕರನ್ನು ಕರೆಸಿ. ಸಿನಿಮಾ ರಂಗದಲ್ಲಿಯೂ ಸಾಧನೆ ಮಾಡಿರುವವರು ಇದ್ದಾರೆ ಅವರನ್ನೂ ಕರೆಸಿ' ಎಂದು ಓರ್ವ ಸಾಮಾಜಿಕ ಬಳಕೆದಾದರರು ತಿಳಿಸಿದ್ದಾರೆ. ಮತ್ತೋರ್ವರು, 'ಈ ವಾರ ಸೂಪರ್, ಒಬ್ಬರು ಊಟದ ಮಹತ್ವದ ಪಾತ್ರ ವಹಿಸಿದವರು, ಮತ್ತೊಬ್ಬರು ಜ್ಞಾನದ ಬಗ್ಗೆ ಅಪಾರ ಕೀರ್ತಿ ಗಳಿಸಿದವರು' ಎಂದು ಕಾಮೆಂಟ್ ಮಾಡಿದ್ದಾರೆ. 'ಬಹುಶಃ ಗುರುರಾಜ ಕರಜಗಿ ಸರ್ ಈ ಸೀಸನ್ ಮೊದಲ ವ್ಯಕ್ತಿ ಆಗಬೇಕಿತ್ತು, ಆ ಎಲ್ಲ ಅರ್ಹತೆಗಳು ಇರುವಂತಹ ಸಾಧಕರಿವರು' ಎಂದು ಇನ್ನೋರ್ವರು ಬರೆದಿದ್ದಾರೆ. 'ಇನ್ನು ಹೆಚ್ಚು ಮೆರಗು ಬಂತು ಈ ಶೋಗೆ' ಎಂದು ಅಭಿಮಾನಿಯೋರ್ವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 11 ವರ್ಷಗಳ ಬಳಿಕ ಕಾಶ್ಮೀರಕ್ಕೆ ಶಾರುಖ್ ಖಾನ್ ಭೇಟಿ: ಅಭಿಮಾನಿಗಳಿಂದ ಪ್ರೀತಿಯ ಮಳೆ
ರಂಗಭೂಮಿ, ಕಿರುತೆರೆ, ಹಿರಿತೆರೆಯಲ್ಲಿ ಸಾಧನೆಗೈದವರು ಸಿಹಿ ಕಹಿ ಚಂದ್ರು. ಇನ್ನೂ ಶಿಕ್ಷಣ ಕ್ಷೇತ್ರದಲ್ಲೇ ದೊಡ್ಡ ಮಟ್ಟದ ಸಾಧನೆ ಮಾಡಿದ ಕೀರ್ತಿ ಡಾ. ಗುರುರಾಜ ಕರಜಗಿ ಅವರದ್ದು. ಹಾಗಾಗಿ ಈ ವಾರದ ಎಪಿಸೋಡ್ ಬಗ್ಗೆ ಪ್ರೇಕ್ಷಕರು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ .