ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ತಮ್ಮ ಮುಂದಿನ ಥ್ರಿಲ್ಲರ್ ಸಿನಿಮಾ 'ಯೋಧ' ಚಿತ್ರೀಕರಣವನ್ನು ಸೋಮವಾರದಂದು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಈ ಬಾಲಿವುಡ್ ಬೇಡಿಕೆ ನಟ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ ಡ್ರೆಸ್ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಏರ್ಪೋರ್ಟ್ನಲ್ಲಿನ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾಪರಾಜಿಯೊಬ್ಬರು ನಟನೊಂದಿಗೆ ಮಾತನಾಡಿದ್ದು, ವಿಮಾನ ನಿಲ್ದಾಣದ ಗೇಟ್‌ಗಳನ್ನು ಪ್ರವೇಶಿಸುವವರೆಗೆ ಕೆಲ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್ ಒಂದರಲ್ಲಿ ಮಲ್ಹೋತ್ರ ಪಾಪರಾಜಿಗಳ, ಮಾಧ್ಯಮಗಳ ವಿರುದ್ಧ ಕೋಪಗೊಂಡಿರುವಂತೆ ಕಂಡುಬಂದರು. ಆದಾಗ್ಯೂ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ರಕ್ಷಣೆಗೆ ಬಂದಿದ್ದಾರೆ. ಇನ್ಸ್ಟಾ ಖಾತೆಯೊಂದರಿಂದ ಪೋಸ್ಟ್ ಮಾಡಲಾದ ವಿಡಿಯೋ ಕ್ಲಿಪ್‌ನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ, ವಿಮಾನ ನಿಲ್ದಾಣದ ಗೇಟ್‌ಗಳ ಮೂಲಕ ಓಡುತ್ತಿರುವುದನ್ನು ಕಾಣಬಹುದು. ಆ ವೇಳೆ ಪಾಪರಾಜಿಗಳು 2023ರ ಆಸ್ಕರ್‌ನಲ್ಲಿ ನಾಟು ನಾಟು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಗೆಲುವಿನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಪ್ರಶ್ನಿಸಿದಾಗ "ಪತ್ರಿಕಾಗೋಷ್ಠಿ ನಡೆಯುತ್ತಿದೆ" ಎಂದು ಹೇಳಿ ಸಿದ್ಧಾರ್ಥ್ ಮುನ್ನಡೆದರು.
ಟೀಕೆ ಎದುರಿಸಿದ ಸಿದ್ಧಾರ್ಥ್: ಈ ನಿರ್ದಿಷ್ಟ ವಿಡಿಯೋದಿಂದಾಗಿ ಸಿದ್ಧಾರ್ಥ್ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಸಿದ್ಧಾರ್ಥ್ "ಆಸ್ಕರ್ ವಿಜೇತ ತಂಡಕ್ಕೆ ಅಭಿನಂದನೆಗಳು" ಎಂದು ಸರಳವಾಗಿ ಹೇಳಿರಬಹುದು ಎಂದು ಕೆಲವರು ಭಾವಿಸಿದರೆ, ಇತರರು ಅವರು ವಿನಯವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಭಾವಿಸಿದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ನಟನ ಬೆಂಬಲಿಗರು ಅವರನ್ನು ಸಮರ್ಥಿಸಿಕೊಂಡರು. ವಿಡಿಯೋದ ನಿರ್ದಿಷ್ಟ ಭಾಗವನ್ನು ಮಾತ್ರ ಹಂಚಿಕೊಂಡಿದ್ದಕ್ಕಾಗಿ, ಈ ಮೂಲಕ ವೀಕ್ಷಕರನ್ನು ಗೊಂದಲಕ್ಕೆ ಒಳಮಾಡಿದ್ದಕ್ಕೆ, ನಟನ ಮೇಲೆ ತಪ್ಪು ಭಾವನೆ ಮೂಡುವಂತೆ ಮಾಡಿದ್ದಕ್ಕೆ ಆ ಇನ್ಸ್ಟಾ ಖಾತೆ ವಿರುದ್ಧ ಕಿಡಿಕಾರಿದ್ದಾರೆ.
'ಸಂಪೂರ್ಣ ವಿಡಿಯೋ ವೀಕ್ಷಿಸಿ': ನಟನ ಅಭಿಮಾನಿ ಪೇಜ್ ಒಂದು ಸಂಪೂರ್ಣ ವಿಡಿಯೋ ವೀಕ್ಷಿಸಲು ನೆಟ್ಟಿಗರಲ್ಲಿ ಕೇಳಿದೆ. ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಮೊದಲು ಎಲ್ಲಾ ಪ್ರಶ್ನೆಗಳಿಗೆ ನಟ ಸೌಜನ್ಯದಿಂದ ಪ್ರತಿಕ್ರಿಯಿಸಿದ್ದಾರೆ. ಪಾಪರಾಜಿಯ ಸಂಪೂರ್ಣ ವಿಡಿಯೋವನ್ನು ವೀಕ್ಷಿಸುವಂತೆ ಸಲಹೆ ಕೊಟ್ಟಿದೆ. ಸಂಪೂರ್ಣ ವಿಡಿಯೋದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಕೋಪಗೊಂಡಂತೆ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ: ಎಸ್ಆರ್ಕೆ ಅಪ್ಪುಗೆ ನಿರೀಕ್ಷೆಯಲ್ಲಿ ಗುನೀತ್ ಮೊಂಗಾ.. ಪಠಾಣ್ ನಟನಿಗೆ ಧನ್ಯವಾದ ಅರ್ಪಿಸಿದ ರಾಜಮೌಳಿ
ಮತ್ತೊಂದೆಡೆ, ನಟ ಸಿದ್ಧಾರ್ಥ್ ಮಲ್ಹೋತ್ರಾ ಈಗಾಗಲೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ಮತ್ತು ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಗೆದ್ದಿದ್ದಕ್ಕಾಗಿ ನಾಟು ನಾಟು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ತಂಡಗಳನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ವಿಶ್ವಾದ್ಯಂತ RRR ನಾಯಕರ ಕ್ರೇಜ್: ಜೂ.ಎನ್ಟಿಆರ್ ನಂ.1, ಎರಡನೇ ಸ್ಥಾನದಲ್ಲಿ ರಾಮ್ಚರಣ್
ಇನ್ನು, ಸಿದ್ದಾರ್ಥ್ ಮಲ್ಹೋತ್ರಾ 'ಯೋಧ' ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಬ್ಯಾಂಕಾಕ್‌ನ ರೆಸ್ಟೋರೆಂಟ್‌ನಿಂದ ಯೋಧ ತಂಡದೊಂದಿಗಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ "ವರ್ಕ್ ಫ್ಯಾಮಿಲಿ" ಎಂದು ಶೀರ್ಷಿಕೆ ನೀಡಿದ್ದಾರೆ. ಅವರ ಮುಂಬರುವ ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ರಾಶಿ ಖನ್ನಾ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಯೋಧ ನವೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.