ETV Bharat / entertainment

ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಅದ್ಧೂರಿ ವಿವಾಹಕ್ಕೆ ಭರದ ಸಿದ್ಧತೆ - ಐಷಾರಾಮಿ ಸೂರ್ಯಘರ್ ಹೋಟೆಲ್‌

ಬಾಲಿವುಡ್‌ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆ ಸಮಾರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

Sidharth Malhotra-Kiara Advani wedding: All we know so far about venue, sangeet and reception
ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ
author img

By

Published : Feb 3, 2023, 3:35 PM IST

Updated : Feb 3, 2023, 7:21 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ನಲ್ಲೀ ಸಾಲು ಸಾಲು ಮದುವೆಗಳು ನಡೆಯುತ್ತಿವೆ. ಈ ಪಟ್ಟಿಗೆ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಹೆಸರು ಕೂಡ ಸೇರಿಕೊಳ್ಳಲಿದೆ. ತಾರಾ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

ತಮ್ಮ ಮದುವೆ ಬಗ್ಗೆ ಕಿಯಾರಾ ಅಡ್ವಾಣಿಯಾಗಲೀ ಅಥವಾ ಸಿದ್ಧಾರ್ಥ್ ಮಲ್ಹೋತ್ರಾ ಅವರಗಾಲೀ ಈವರೆಗೂ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಒಟ್ಟೊಟ್ಟಿಗೆ ಸಭೆ-ಸಮಾರಂಭ, ಡಿನ್ನರ್​, ಪಾರ್ಟಿಗಳಿಗೆ ತೆರಳುವ ಇವರು ತಾವು ಡೇಟಿಂಗ್​ನಲ್ಲಿದ್ದೇವೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ವರದಿಗಳ ಪ್ರಕಾರ, ಇದೇ ಫೆಬ್ರವರಿ 6 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಇವರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

ಜೈಸಲ್ಮೇರ್‌ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದ್ದು ಸಿದ್ಧತೆ ನಡೆಯುತ್ತಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಭಾಗಿಯಾಗಲಿದ್ದು, ಫೆಬ್ರವರಿ 4 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಲಿವೆ ಎಂಬ ಮಾಹಿತಿ ಇದೆ. ನಟರಾದ ಶಾಹಿದ್ ಕಪೂರ್, ಮೀರಾ ಕಪೂರ್, ಕರಣ್ ಜೋಹರ್ ಮತ್ತು ವರುಣ್ ಧವನ್ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಮತ್ತು ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಮದುವೆ ವಿಜೃಂಭಣೆಯಿಂದ ಜರುಗಲಿದೆ ಎನ್ನಲಾಗುತ್ತಿದೆ.

ಅತ್ಯಾಕರ್ಷಕ, ಐಷಾರಾಮಿ ಸೂರ್ಯಗಢ ಹೋಟೆಲ್ ನಗರದಿಂದ ಸುಮಾರು 20 ರಿಂದ 25 ಕಿಮೀ ದೂರದಲ್ಲಿರುವ ಸುಮ್ ರಸ್ತೆಯಲ್ಲಿದೆ. ಥಾರ್ ಮರುಭೂಮಿಯ ಹೃದಯಭಾಗದಲ್ಲಿರುವ ಫೋರ್ಟ್ ಹೋಟೆಲ್ ಅತ್ಯಂತ ಆಕರ್ಷಕವಾಗಿದೆ. ಡಿಸೆಂಬರ್ 2010 ರಲ್ಲಿ ಜೈಪುರದ ಉದ್ಯಮಿಯೊಬ್ಬರು ಈ ಹೋಟೆಲ್ ನಿರ್ಮಿಸಿದ್ದು ಭೂಮಿ ಮೇಲಿನ ಸ್ವರ್ಗದಂತೆ ಭಾಸವಾಗುತ್ತಿದೆ. ಸುಮಾರು 65 ಎಕರೆ ಪ್ರದೇಶದಲ್ಲಿ ಹರಡಿರುವ ಹೋಟೆಲ್, ಜೈಸಲ್ಮೇರ್‌ನ ಹಳದಿ ಕಲ್ಲುಗಳಿಂದ ಮಾಡಲ್ಪಟ್ಟಿರುವುದು ವಿಶೇಷ. ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಇದು ಪ್ರಪಂಚದಾದ್ಯಂತ ಪ್ರಸಿದ್ಧ. ಇಲ್ಲಿ ಮದುವೆಗೆ ಅತ್ಯುತ್ತಮ ಕೊಠಡಿ, ಈಜುಕೊಳ ಮತ್ತು 65 ಎಕರೆ ಹೋಟೆಲ್ ಜೊತೆಗೆ ಎಲ್ಲಾ ಮದುವೆ ಕಾರ್ಯಕ್ರಮಗಳನ್ನು ನಿರ್ವಹಿಸಲು ಉತ್ತಮ ಸ್ಥಳಾವಕಾಶವಿದೆ. ವಿಶೇಷ ವಿವಾಹ ಸಮಾರಂಭಗಳಿಗಾಗಿ ಈ ಸ್ಥಳವನ್ನು ನಿರ್ಮಿಸಲಾಗಿದ್ದು ಮಂಟಪದ ಸುತ್ತ ನಾಲ್ಕು ವಿಶೇಷ ಕಂಬಗಳನ್ನು ಅಳವಡಿಸಲಾಗಿದೆ. ಸಾವಿರಕ್ಕೂ ಹೆಚ್ಚು ಅತಿಥಿಗಳು ಸೇರಬಹುದಾದ ವಿಶಾಲವಾದ ಸುಂದರ ಸ್ಥಳ ಇಲ್ಲಿದೆ.

ಸಂಗೀತಪ್ರಿಯರೂ ಆಗಿರುವ ಈ ತಾರಾ ಜೋಡಿ ತಮಗಿಷ್ಟದ ಹಾಡುಗಳ ಮಧ್ಯೆ ಹೊಸ ಜೀವನಕ್ಕೆ ಕಾಲಿಡಲಿದ್ದಾರಂತೆ. ಶೇರ್ಷಾ ಚಿತ್ರ ರಾತನ್ ಲಂಬಿಯಾನ್, ರಂಝಾ ಸೇರಿದಂತೆ ಮುಂತಾದ ಹಾಡುಗಳಿಗೆ ನೃತ್ಯ ಮಾಡಲಿದ್ದಾರಂತೆ. ಕಿಯಾರಾ ಮತ್ತು ಸಿದ್ಧಾರ್ಥ್ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ನಿರ್ದೇಶಕ ಕರಣ್ ಜೋಹರ್ ಸಂಗೀತ ಕಾರ್ಯಕ್ರಮವನ್ನು ಹೋಸ್ಟ್ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನ ತಮ್ಮ ನೆಚ್ಚಿನ ಡಿಸೈನರ್ ಆಗಿರುವ ಮನೀಶ್ ಮಲ್ಹೋತ್ರಾ ಅವರ ಮನೆಗೂ ತೆರಳಿದ್ದ ಸಿದ್ಧಾರ್ಥ್ ಮತ್ತು ಕಿಯಾರಾ, ತಮ್ಮ ಮದುವೆಗೆ ಯಾವ ಯಾವ ಶೈಲಿಯ ಬಟ್ಟೆಗಳು ಬೇಕು ಅನ್ನೋದನ್ನು ಸಹ ಖಚಿತಪಡಿಸಿದ್ದಾರಂತೆ.

ಮದುವೆ ಬಳಿಕ ಈ ಜೋಡಿ ಎರಡು ಆರತಕ್ಷತೆ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ. ಅದಕ್ಕೂ ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲ ಆರತಕ್ಷತೆ ದೆಹಲಿಯಲ್ಲಿ ನಡೆಯಲಿದ್ದು ಎರಡನೇ ಆರತಕ್ಷತೆಯನ್ನು ಮುಂಬೈನಲ್ಲಿ ಮಾಡಿಕೊಳ್ಳಲಿದ್ದಾರೆ. ಎರಡೂ ಆರತಕ್ಷತೆಗಳಲ್ಲಿ ಖ್ಯಾತ ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.

ವರ್ಷದ ಹಿಂದೆ, ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್‌ ಶೋದಲ್ಲಿ ಪಾಲ್ಗೊಂಡಿದ್ದ ಈ ಜೋಡಿ ಕೆಲವು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು. ಕರಣ್‌ ಕೇಳಿದ ಪ್ರಶ್ನೆಗಳಿಗೆ ಕುತೂಹಲಕಾರಿ ಉತ್ತರಗಳನ್ನು ಕೊಡುವ ಮೂಲಕ ಪರೋಕ್ಷವಾಗಿ ತಮ್ಮ ನಡುವಿನ ಡೇಟಿಂಗ್​ ಒಪ್ಪಿಕೊಂಡಿದ್ದರು. ನಾವು ಆಪ್ತ ಸ್ನೇಹಿತರಿಗಿಂತ ಸ್ನೇಹಿತರು ಎಂದಷ್ಟೇ ಹೇಳಿ ಮುಂದಿನದ್ದನ್ನು ಅಭಿಮಾನಿಗಳಿಗೆ ಬಿಟ್ಟುಕೊಟ್ಟಿದ್ದರು. ಕೆಲದಿನಗಳ ಬಳಿಕ ಈ ಜೋಡಿ ಬಗ್ಗೆ ಬಾಲಿವುಡ್​ ಅಂಗಳದಲ್ಲಿ ಡೇಟಿಂಗ್​ ವದಂತಿಗಳು ಹರಿದಾಡತೊಡಗಿದ್ದವು. ಡಿನ್ನರ್​ ಮತ್ತು ಪಾರ್ಟಿಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು.

ಇದನ್ನೂ ಓದಿ: ಟೀಕೆಗಳಿಗೆ ತಿರುಗೇಟು ಕೊಟ್ಟ ಪಠಾಣ್​: 9 ದಿನಗಳಲ್ಲಿ 700 ಕೋಟಿ ರೂಪಾಯಿ ಸಂಗ್ರಹ

Last Updated : Feb 3, 2023, 7:21 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.