ಪಣಜಿ (ಗೋವಾ): ಇತ್ತೀಚೆಗೆ ಗೋವಾದಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ಇಂಡಿಯನ್ ಪೊಲೀಸ್ ಫೋರ್ಸ್ ವೆಬ್ ಶೋ ಶೂಟಿಂಗ್ ವೇಳೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನಟ ತನಗೆ ಆದ ಗಾಯದ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸಿದ್ಧಾರ್ಥ್ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿಜವಾದ ಬೆವರು, ನಿಜವಾದ ರಕ್ತಕ್ಕೆ ಸಮ ಎಂದು ಬರೆದುಕೊಂಡಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರ ಆಗುವ ಈ ವೆಬ್ ಶೋ ಭಾರತೀಯ ಪೊಲೀಸ್ ಪಡೆಯ ಬಗ್ಗೆ ಇದೆ. ದೇಶಾದ್ಯಂತ ಪೊಲೀಸ್ ಅಧಿಕಾರಿಗಳ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ದೇಶಭಕ್ತಿಗೆ ಗೌರವ ಸಲ್ಲಿಸುವ ಗುರಿಯನ್ನು ಈ ಶೋ ಹೊಂದಿದೆ. ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ವಿವೇಕ್ ಒಬೆರಾಯ್ ಕೂಡ ಈ ಚಿತ್ರದ ಭಾಗವಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿಗೆ ಕೇಂದ್ರದ ಬಂಪರ್ ; ರಾಣಿಚೆನ್ನಮ್ಮ ವಿವಿಯಲ್ಲಿ ವಿಶ್ವದರ್ಜೆಯ ಈಜುಕೊಳ ನಿರ್ಮಾಣ