ಇಂದು ಬಾಲಿವುಡ್ನ ಮುದ್ದಾದ ನಟಿ ಶ್ರದ್ಧಾ ಕಪೂರ್ ಅವರು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನಕ್ಕೆ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ದಾಂತ್ ಕಪೂರ್ ಸುಂದರವಾದ ಸಂದೇಶದೊಂದಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಸಿದ್ದಾಂತ್ ಕಪೂರ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸಹೋದರಿ ಶ್ರದ್ಧಾ ಜೊತೆಗಿರುವ ಹಳೆಯ ಫೋಟೋವೊಂದನ್ನು ಹಂಚಿಕೊಂಡು ಸ್ಪೆಷಲ್ ಆಗಿಯೇ ಬರ್ತ್ಡೇ ವಿಶ್ ಮಾಡಿದ್ದಾರೆ.
- " class="align-text-top noRightClick twitterSection" data="
">
"ಜಗತ್ತಿನ ಬೆಸ್ಟ್ ತಂಗಿ, ಬೆಸ್ಟ್ ಮಗಳು, ಬೆಸ್ಟ್ ಫ್ರೆಂಡ್, ಬೆಸ್ಟ್ ಸೊಸೆ, ಬೆಸ್ಟ್ ಕಸಿನ್, ಬೆಸ್ಟ್ ಅತ್ತೆ ಎಲ್ಲಾ ಸಂಬಂಧಗಳಿಗೂ ನೀನು ರೋಲ್ ಮಾಡೆಲ್. ನನ್ನ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ವ್ಯಕ್ತಿಗೆ, ವಿಶಾಲ ಮನಸ್ಸಿಗೆ, ನನ್ನ ಜೀವನದ ಬೆಳಕಿಗೆ, ಸದಾ ಸಂತೋಷ ಮತ್ತು ಪ್ರೀತಿಯನ್ನೇ ನೀಡುತ್ತಿರುವ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು... ನಾನು ನಿನ್ನನ್ನು ಪ್ರೀತಿಸುತ್ತೇನೆ.!" ಎಂದು ಪೋಸ್ಟ್ ಕೆಳಗೆ ಸಿದ್ದಾಂತ್ ಬರೆದುಕೊಂಡು ಶುಭಾಶಯ ಹೇಳಿದ್ದಾರೆ. ಫೋಟೋದಲ್ಲಿ ಅಣ್ಣ ತಂಗಿ ಇಬ್ಬರು ಮುದ್ದಾಗಿ ಕಾಣುತ್ತಿದ್ದಾರೆ.
ಇದನ್ನೂ ಓದಿ: ಕಪ್ಪು ಬಿಳುಪಿನ ಉಡುಪಿನಲ್ಲಿ ನೋರಾ ಫತೇಹಿ ಮೋಹಕ ನೋಟ.. ಫ್ಯಾನ್ಸ್ ಫಿದಾ!
ಆಶಿಕಿ-2 ಬೆಡಗಿ ಶ್ರದ್ಧಾ ಕಪೂರ್: ಶಕ್ತಿ ಕಪೂರ್ ಮತ್ತು ಶಿವಾಂಗಿ ಕಪೂರ್ ದಂಪತಿಯ ಪುತ್ರಿ ಶ್ರದ್ಧಾ ಕಪೂರ್ ಬಾಲಿವುಡ್ನ ಸೂಪರ್ ತಾರೆ. ಬಣ್ಣದ ಲೋಕಕ್ಕೆ ಕಾಲಿರಿಸಿದ ಇವರಿಗೆ ಆಶಿಕಿ-2 ಬಹುದೊಡ್ಡ ಯಶಸ್ಸನ್ನೇ ತಂದುಕೊಟ್ಟಿತು. ಈ ಸಿನಿಮಾದಿಂದ ಪ್ರೇಕ್ಷಕರ ಮನ ಗೆದ್ದು, ಫೇವರಿಟ್ ನಟಿಯೆಂಬ ಪಟ್ಟ ಗಿಟ್ಟಿಸಿಕೊಂಡರು. ಮೋಹಿತ್ ಸೂರಿ ನಿರ್ದೇಶಿಸಿದ ಆಶಿಕಿ 2 ಚಿತ್ರ 2013 ರಲ್ಲಿ ತೆರೆ ಕಂಡಿದ್ದು, ಆದಿತ್ಯ ರಾಯ್ ಕಪೂರ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಏಕ್ ವಿಲನ್, ಸ್ತ್ರೀ, ಬಾಘಿ, ಹೈದರ್, ಚಿಚೋರೆ ಮುಂತಾದ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಶ್ರದ್ಧಾ ಇತ್ತೀಚೆಗೆ ಬಾಘಿ 3 ರಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಶೀಘ್ರದಲ್ಲೇ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆ ತೂ ಝೂತಿ ಮೈಕ್ ಮಕ್ಕರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಜಾಲ್ಬಾಜ್ ಇನ್ ಲಂಡನ್ ಮತ್ತು ನಿರ್ಮಾಪಕ ನಿಖಿಲ್ ದ್ವಿವೇದಿ ಅವರ ನಾಗಿನ್ ಟ್ರೈಲಾಜಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಹಲವು ಚಿತ್ರಗಳಲ್ಲಿ ಸಿದ್ದಾಂತ್ ನಟನೆ: ಸಿದ್ದಾಂತ್ ಕಪೂರ್ ಒಬ್ಬ ನಟ ಮತ್ತು ಸಹಾಯಕ ನಿರ್ದೇಶಕ. ಅವರು 'ಭಾಗಂ ಭಾಗ್' (2006), 'ಚುಪ್-ಚುಪ್ ಕೆ' (2006), 'ಭೂಲ್ ಭುಲೈಯಾ' (2007), 'ಧೋಲ್' (2007) ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ 'ಪಲ್ಟನ್' (2018), 'ಜಜ್ಬಾ' (2015) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ ಚೆಹ್ರೆ (2021) ಚಿತ್ರದಲ್ಲಿ 'ಜೋ' ಆಗಿ ಕಾಣಿಸಿಕೊಂಡರು.
ಇದನ್ನೂ ಓದಿ: 'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್ ಬಿಡುಗಡೆಗೂ ಮುನ್ನವೇ ಸರ್ಪ್ರೈಸ್ ಕೊಟ್ಟ ನಿರ್ದೇಶಕ ಆರ್ ಚಂದ್ರು