ETV Bharat / entertainment

ಪಂಜುರ್ಲಿ ದೈವದ ವೇಷ ಧರಿಸಿ ರೀಲ್ಸ್ - ಧರ್ಮಸ್ಥಳಕ್ಕೆ ಬಂದು ಕ್ಷಮೆ ಯಾಚಿಸಿದ ಶ್ವೇತಾ ರೆಡ್ಡಿ - shweta reddy panjurli reels

ಪಂಜುರ್ಲಿ ದೈವದ ವೇಷ ಧರಿಸಿ ರೀಲ್ಸ್ ಮಾಡಿ ಜನಾಕ್ರೋಶಕ್ಕೆ ಕಾರಣರಾಗಿದ್ದ ಶ್ವೇತಾ ರೆಡ್ಡಿ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ಕ್ಷಮೆಯಾಚಿಸಿದ್ದಾರೆ.

shweta reddy apology for panjurli reels
ಧರ್ಮಸ್ಥಳಕ್ಕೆ ಬಂದು ಕ್ಷಮೆಯಾಚಿಸಿದ ಶ್ವೇತಾ ರೆಡ್ಡಿ
author img

By

Published : Nov 4, 2022, 2:17 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಕಾಂತಾರ ಸಿನಿಮಾ ರೀತಿಯಲ್ಲಿ 'ಪಂಜುರ್ಲಿ' ದೈವದ ವೇಷ ಧರಿಸಿ ರೀಲ್ಸ್ ಮಾಡಿ ತುಳುನಾಡಿದ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ಕ್ಷಮೆಯಾಚಿಸಿದ್ದಾರೆ.

ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಲು ಯುವತಿ ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ, ವೇಷ ಧರಿಸಿದ್ದರು. ಬಳಿಕ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅನೇಕರು ಯುವತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರು 'ಈಕೆಯನ್ನು ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ' ಎಂದು ಹೇಳಿದ್ದರು.

ಜನ ಆಕ್ರೋಶಗೊಂಡಿದ್ದರಿಂದ ಯುವತಿ ತಕ್ಷಣ ತನ್ನ ರೀಲ್ಸ್ ಅನ್ನು ಡಿಲೀಟ್ ಮಾಡಿ ಮಂಜುನಾಥ ಸ್ವಾಮಿಗೆ ಕ್ಷಮೆ ಕೇಳುವುದಾಗಿ ಹೇಳಿದ್ದರು. ಸದ್ಯ ಯುವತಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ತಪ್ಪು ಕಾಣಿಕೆ ಸಲ್ಲಿಸಿ ಬಳಿಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಯಾಚಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ಬಾಯಲ್ಲೂ 'ಕಾಂತಾರ': ಅಭಿಮಾನಿಗಳು ಖುಷ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.