ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲ ವಾಗಿರುವ ನಟಿ ಶೃತಿ ಹಾಸನ್. ನೇರ ಮಾತಿನ ಈ ಹುಡುಗಿ ಅನೇಕ ಬಾರಿ ತಮ್ಮ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳುತ್ತಾರೆ. ಆಗ್ಗಿಂದಾಗ್ಗೆ ತಮ್ಮ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿರುವ ಫೋಟೋ ಅಭಿಮಾನಿಗಳಿಗೆ ಶಾಕ್ ನೀಡಿದೆ.
ತಮ್ಮ ಊದಿಕೊಂಡಿರುವ ಮುಖದ ಫೋಟೋವನ್ನು ಶೃತಿ ಹಾಸನ್ ಹಂಚಿಕೊಂಡಿದ್ದು, ಆಕೆಯನ್ನು ಗುರುತಿಸುವುದೇ ಸಾಧ್ಯವಾಗದಂತೆ ಇದೆ. ಮೇಕಪ್ ಇಲ್ಲದ ಸರಣಿ ಸೆಲ್ಫಿ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. 'ಕೆಟ್ಟ ಕುದೂಲ ದಿನ, ಜ್ವರ ಮತ್ತು ಸೈನಸ್ನಿಂದ ಊದಿಕೊಂಡ ಮುಖ, ಪಿರಿಯಡ್ ನೋವಿನ ದಿನ ಎಂದು ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದು, ನೀವು ಎಂಜಾಯ್ ಮಾಡಿದ್ದೀರಾ' ಎಂದು ಕ್ಯಾಪ್ಶನ್ ಕೂಡಾ ಬರೆದಿದ್ದಾರೆ.
- " class="align-text-top noRightClick twitterSection" data="
">
ಅಭಿಮಾನಿಗಳು ಆಕೆಯ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮನ್ನು ನೀವಾಗಿ ತೋರಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಸಿನಿರಂಗದಲ್ಲಿ 13 ವರ್ಷಗಳನ್ನು ಶೃತಿ ಹಾಸನ್ ಇತ್ತೀಚೆಗಷ್ಟೇ ಪೂರೈಸಿದ್ದು, ಈ ಕುರಿತು ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದರು.
ಸದ್ಯ ಪ್ರಭಾಸ್ ಜೊತೆ 'ಸಲರ್', 'ಚಿರು 154' ಸಿನಿಮಾಗಳಲ್ಲಿ ಶೃತಿ ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ: ಅಪ್ಪು ಮೆಚ್ಚಿದ ಕಥೆಗೆ ಜೀವ ತುಂಬಲಿರುವ ಮಲಯಾಳಂ ನಟ.. ಸಿನಿಮಾ ಯಾವುದು ಗೊತ್ತಾ?