ETV Bharat / entertainment

ಶ್ರೇಯಸ್ ತಲ್ಪಾಡೆ ಆರೋಗ್ಯ ಸ್ಥಿರ: ಪತ್ನಿ ದೀಪ್ತಿ ಕೊಟ್ರು ಮಾಹಿತಿ - ಶ್ರೇಯಸ್ ತಲ್ಪಾಡೆ ಹೆಲ್ತ್

ಹೃದಯಾಘಾತಕ್ಕೆ ಒಳಗಾದ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅವರ ಸದ್ಯದ ಪರಿಸ್ಥಿತಿ ಬಗ್ಗೆ ಪತ್ನಿ ದೀಪ್ತಿ ಮಾಹಿತಿ ಕೊಟ್ಟಿದ್ದಾರೆ.

Shreyas Talpade health updates by deepthi
ಶ್ರೇಯಸ್ ತಲ್ಪಾಡೆ ಆರೋಗ್ಯ ಸ್ಥಿರ: ಪತ್ನಿ ದೀಪ್ತಿ ಕೊಟ್ರು ಮಾಹಿತಿ
author img

By ETV Bharat Karnataka Team

Published : Dec 15, 2023, 12:14 PM IST

Updated : Dec 15, 2023, 12:28 PM IST

ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅವರಿಗೆ ಡಿಸೆಂಬರ್ 14, ಗುರುವಾರದಂದು ಹೃದಯಾಘಾತವಾಗಿತ್ತು. ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟನಿಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿ, ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಆತಂಕಕ್ಕೆ ಒಳಗಾಗಿದ್ದರು. ಇದೀಗ ನಟನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ, ನಟನ ಪತ್ನಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿ ತಿಳಿದ ನಟನ ಅಭಿಮಾನಿಗಳು ನಿರಾಳರಾಗಿದ್ದಾರೆ.

ಅಭಿಮಾನಿಗಳ ಚಿಂತೆ ದೂರ ಮಾಡಿದ ದೀಪ್ತಿ: ಚಿಕಿತ್ಸೆ ಪಡೆಯುತ್ತಿರುವ ನಟ ಶ್ರೇಯಸ್ ತಲ್ಪಾಡೆ ಅವರ ಪತ್ನಿ ದೀಪ್ತಿ ಶ್ರೇಯಸ್ ತಲ್ಪಾಡೆ ಅವರು ಇಂದು ಬೆಳಗ್ಗೆ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಚಿಂತೆ ದೂರ ಮಾಡಿದ್ದಾರೆ. ತಮ್ಮ ಸ್ಟಾರ್ ಪತಿಯ ಆರೋಗ್ಯದ ಅಪ್​ಡೇಟ್ಸ್ ನೀಡಿದ್ದಾರೆ.

ದೀಪ್ತಿ ಶ್ರೇಯಸ್ ತಲ್ಪಾಡೆ ಹೇಳಿದ್ದಿಷ್ಟು: ಇನ್​ಸ್ಟಾಗ್ರಾಮ್​ ಪೋಸ್ಟ್ ಶೇರ್ ಮಾಡಿದ ದೀಪ್ತಿ ಶ್ರೇಯಸ್ ತಲ್ಪಾಡೆ, 'ಪ್ರಿಯ ಸ್ನೇಹಿತರೇ ಮತ್ತು ಮಾಧ್ಯಮ ಮಿತ್ರರೇ, ನನ್ನ ಪತಿಯ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿ, ಅವರ ಆರೋಗ್ಯ ಚೇತರಿಕೆಗೆ ಶುಭ ಹಾರೈಸಿದ ನಿಮಗೆಲ್ಲರಿಗೂ ಧನ್ಯವಾದಗಳು. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ, ಅಲ್ಲದೇ ಅವರು ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್​ ಆಗಲಿದ್ದಾರೆ. ವೈದ್ಯಕೀಯ ತಂಡ ಸ್ಪಂದಿಸುತ್ತಿದ್ದು, ಎಲ್ಲ ತಜ್ಞರಿಗೂ ನನ್ನ ಕೃತಜ್ಞತೆಗಳು. ನಮ್ಮ ಗೌಪ್ಯತೆ ಗೌರವಿಸಲು ನಿಮ್ಮಲ್ಲಿ ವಿನಂತಿಸುತ್ತೇನೆ. ನಿಮ್ಮ ನಿಸ್ವಾರ್ಥ ಬೆಂಬಲ ನಮ್ಮಿಬ್ಬರನ್ನೂ ಬಲಪಡಿಸಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ

ಇತ್ತೀಚಿನ ದಿನಗಳಲ್ಲಿ ಶ್ರೇಯಸ್ ತಲ್ಪಾಡೆ ಕಂಪ್ಲೀಟ್​​ ಕಾಮಿಡಿ ಮೂವಿ 'ವೆಲ್ಕಮ್ ಟು ದಿ ಜಂಗಲ್' ಮೂಲಕ ಸುದ್ದಿಯಲ್ಲಿದ್ದಾರೆ. ಇದೇ ವೆಲ್ಕಮ್ 3 ಚಿತ್ರೀಕರಣದ ನಂತರ ನಟನಿಗೆ ಹೃದಯಾಘಾತ ಆಗಿದೆ. 'ವೆಲ್ಕಮ್ ಟು ದ ಜಂಗಲ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಬಹುಬೇಡಿಕೆ ತಾರೆಯರಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್​ ಕಿಲಾಡಿ ಅಕ್ಷಯ್ ಕುಮಾರ್ ಈ ಚಿತ್ರದ ಶೂಟಿಂಗ್‌ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಸ್ವತಃ ಶ್ರೇಯಸ್ ತಲ್ಪಾಡೆ ಕೂಡ ಕಾಣಿಸಿಕೊಂಡಿದ್ದರು. ಆದರೆ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಆ ಕೂಡಲೇ ಮುಂಬೈನ ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ನಟನ ಪರಿಸ್ಥಿತಿ ಸುಧಾರಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ನಟನಿಗೆ ಸಂಬಂಧಿಸಿದ ಪೋಸ್ಟ್​​ಗಳು ಮುಂದುವರಿದಿದೆ. ಸಂಪೂರ್ಣ ಚೇತರಿಕೆಗೆ ಶುಭ ಹಾರೈಕೆಗಳು ಬಂದಿವೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ - ವಿಡಿಯೋ ನೋಡಿ

Last Updated : Dec 15, 2023, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.