ETV Bharat / entertainment

'ಸೈಂಧವ್​' ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್​: ಫಸ್ಟ್​ ಲುಕ್​ ಔಟ್​

author img

By

Published : Apr 16, 2023, 3:05 PM IST

'ಸೈಂಧವ್​' ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್​ ನಟಿಸುತ್ತಿದ್ದಾರೆ. ಫಸ್ಟ್​ ಲುಕ್​ ರಿಲೀಸ್​ ಆಗಿದೆ.

saindhav
'ಸೈಂಧವ್​'

ಸ್ಯಾಂಡಲ್​ವುಡ್​ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್​ ಬಹುಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ಯೂಟರ್ನ್​ ಸಿನಿಮಾ ಮೂಲಕ ಪ್ರೇಕ್ಷಕರನ್ನು ವಿಶೇಷವಾಗಿ ಮನರಂಜಿಸಿದವರು. ಇದೀಗ ಕನ್ನಡದ ಜೊತೆಗೆ ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ. ಇವರ ನಟನೆಗೆ ಮನಸೋತಿರುವ ನಿರ್ದೇಶಕರು ಕೈ ತುಂಬ ಅವಕಾಶಗಳನ್ನು ನೀಡುತ್ತಿದ್ದಾರೆ. ಇದೀಗ ಹೊಸ ಸಿನಿಮಾವೊಂದಕ್ಕೆ ಶ್ರದ್ಧಾ ಶ್ರೀನಾಥ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಟಾಲಿವುಡ್​ ನಟ ವಿಕ್ಟರಿ ವೆಂಕಟೇಶ್​ ಅವರ 'ಸೈಂಧವ್​' ಸಿನಿ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿದೆ. ಶೈಲೇಶ್​ ಕೋಲನು ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರದ ಶೂಟಿಂಗ್​ ಈಗಾಗಲೇ ಅರ್ಧ ಭಾಗದಷ್ಟು ಮುಕ್ತಾಯಗೊಂಡಿದೆ. ಸದ್ಯ ವೈಜಾಗ್​ನಲ್ಲಿ ಎರಡನೇ ಹಂತದ ಶೂಟಿಂಗ್​ ನಡೆಯುತ್ತಿದೆ. ನಿಹಾರಿಕಾ ಎಂಟರ್​ ಟೈನ್​ಮೆಂಟ್​ ಅಡಿಯಲ್ಲಿ ಭಾರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. 'ಸೈಂಧವ್​' ಚಿತ್ರಕ್ಕೆ ನಾಯಕಿಯಾಗಿದ್ದಾರೆ ಶ್ರದ್ಧಾ ಶ್ರೀನಾಥ್​. ಚಿತ್ರತಂಡ ಫಸ್ಟ್​ ಲುಕ್​ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಭೇಟಿಯಾದ ಡಾಲಿ: ಧನಂಜಯ್​ ಭೂಮಿ ಮೇಲಿರಲು ಇವರೇ ಕಾರಣ

ರಿಲೀಸ್​ ಆದ ಪೋಸ್ಟರ್​ನಲ್ಲಿ ಶ್ರದ್ಧಾ ಸೀರೆ ಉಟ್ಟು ಕೈಯಲ್ಲಿ ಟಿಫಿನ್​ ಬಾಕ್ಸ್​ ಹಿಡಿದುಕೊಂಡು ಏನೋ ಗಹನ ಚಿಂತನೆಯಲ್ಲಿ ಮುಳುಗಿರುವಂತಿದೆ. ಸೂಪರ್ ಹಿಟ್ ಜೆರ್ಸಿ ಸಿನಿಮಾದಲ್ಲಿ ಅಭಿನಯಿಸಿದ್ದ ಶ್ರದ್ಧಾ ಅವರೀಗ ಸೈಂಧವ್​ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆಯಲಿದ್ದಾರೆ. ನಟಿಯ ಹೊಸ ಲುಕ್​ ಕಂಡ ಅಭಿಮಾನಿಗಳಲ್ಲಿ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿದೆ. ಈ ಪೋಸ್ಟರ್​ ಅನ್ನು ಶ್ರದ್ಧಾ ತಮ್ಮ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನೆಟ್ಟಿಗರು ಎಮೋಜಿಗಳ ಜೊತೆಗೆ ಬಗೆಬಗೆಯ ಬರಹಗಳಿಂದ ಕಾಮೆಂಟ್​ ವಿಭಾಗವನ್ನು ತುಂಬಿದ್ದಾರೆ. ಬಾಲಿವುಡ್​ ನಟ ನವಾಜುದ್ಧೀನ್​ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್​ ಸಿನಿಮಾ ರಂಗ ಪ್ರವೇಶಿಸಿದ್ದಾರೆ. ಸಂತೋಷ್​ ನಾರಾಯಣನ್​ ಸಂಗೀತ ನಿರ್ದೇಶನ, ಎಸ್.ಮಣಿಕಂಠನ್​ ಛಾಯಾಗ್ರಹಣ, ಗ್ಯಾರಿ ಬಿ.ಎಚ್. ಸಂಕಲನ, ಅವಿನಾಶ್​ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್​ ತಲ್ಲೂರ್​ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೈಂಧವ್​​ ಡಿಸೆಂಬರ್​ ತಿಂಗಳ ಕ್ರಿಸ್ಮಸ್​ ಹಬ್ಬದ ಸಮಯದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಶೂಟಿಂಗ್​ ಸೆಟ್​ನಲ್ಲಿ ಸಲ್ಮಾನ್​​ ಖಾನ್​ ಡ್ರೆಸ್ ರೂಲ್ಸ್​: ಸ್ಪಷ್ಟನೆ ಕೊಟ್ಟ ಪಲಕ್​ ತಿವಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.