ETV Bharat / entertainment

ವೆಬ್ ಸಿರೀಸ್​ನಲ್ಲಿ ಬಾಲಿವುಡ್ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು! - ಈಟಿವಿ ಭಾರತ ಕನ್ನಡ

ಜೋಯಾ ಅಖ್ತರ್​ ಅವರ ಚಿತ್ರ ಇದಾಗಿದ್ದು, ಟೈಗರ್​ ಬೇಬಿ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿದೆ.

The Archies
ದಿ ಆರ್ಚೀಸ್
author img

By

Published : Dec 19, 2022, 5:07 PM IST

ಮುಂಬೈ: ಲೈವ್ ಆ್ಯಕ್ಷನ್ ಮ್ಯೂಸಿಕಲ್ ಚಿತ್ರ 'ದಿ ಆರ್ಚೀಸ್'​ನ ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ವೆಬ್​ಸಿರೀಸ್ ತಯಾರಕರು ತಿಳಿಸಿದ್ದಾರೆ. ಈ ಕಥೆಯು 1960ರ ಜನಪ್ರಿಯ ಅಮೆರಿಕನ್ ಆರ್ಚೀಸ್ ಕಾಮಿಕ್ಸ್​ ಆಧರಿಸಿದೆ.

"ಚಿತ್ರೀಕರಣ ಈಗಷ್ಟೇ ಮುಕ್ತಾಯಗೊಂಡಿದೆ. ಇನ್ನು ಕಾಯಲು ಸಾಧ್ಯವಿಲ್ಲ. ಆದಷ್ಟು ಬೇಗನೆ ನಿಮ್ಮ ಮುಂದೆ ಬರಲಿದ್ದೇವೆ. ಕಾಯುತ್ತಿರಿ" ಎಂದು ನೆಟ್​ಫ್ಲಿಕ್ಸ್ ತನ್ನ ಅಧಿಕೃತ ಟ್ವಿಟರ್​​ನಲ್ಲಿ ಬರೆದುಕೊಂಡು ಸರಣಿ ಫೊಟೋ ಹಾಕಿಕೊಂಡಿದೆ.

ಇನ್ನೂ ಈ ವೆಬ್​ಸಿರೀಸ್ ಆರ್ಚಿ, ಬೆಟ್ಟಿ, ಡಿಲ್ಟನ್, ಈಥರ್, ಜಗ್‌ಹೆಡ್, ರೆಗ್ಗೀ ಮತ್ತು ವೆರೋನಿಕಾ ಎಂಬ ಏಳು ಪಾತ್ರಗಳ ಗ್ಯಾಂಗ್​ ಕಥೆಯನ್ನು ಹೇಳುತ್ತದೆ. ಅಲ್ಲದೇ ದಿ ಆರ್ಚೀಸ್ ಭಾರತದ ಆಂಗ್ಲೋ ಇಂಡಿಯನ್ ಕಥೆಯನ್ನು ಆಧರಿಸಿದೆ.

ಜೋಯಾ ಅಖ್ತರ್​ ಅವರ ಚಿತ್ರ ಇದಾಗಿದ್ದು, ಟೈಗರ್​ ಬೇಬಿ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ನಿರ್ಮಾಪಕ ಬೋನಿ ಕಪೂರ್ ಮತ್ತು ಶ್ರೀದೇವಿ ಪುತ್ರಿ ಖುಷಿ ಕಪೂರ್, ಅಮಿತಾ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಾಂಗ್ ರೈನಾ ವೆಬ್​ಸಿರೀಸ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:'little unwell'..ಪಠಾಣ್​ ಬಾಯ್ಕಾಟ್​ ಬಿಸಿ-ಅಭಿಮಾನಿಗಳ ಚಿಂತೆಗೆ ಕಾರಣವಾಯ್ತು ಶಾರುಖ್ ಹೇಳಿಕೆ​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.