ವರನಟ ಡಾ.ರಾಜ್ ಕುಮಾರ್ ಜನ್ಮದಿನದಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾದ ಫಸ್ಟ್ ಲುಕ್ ಅನಾವರಣ ಆಗಿದೆ. ಈ ಚಿತ್ರಕ್ಕೆ ಗೋಸ್ಟ್ ಎಂದು ಟೈಟಲ್ ಇಟ್ಟಿದ್ದು ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಮೂಡಿಬರಲಿದೆ. ಹೊಸ ನಿರ್ದೇಶಕರಿಂದ ಹಿಡಿದು ಅನುಭವಿ ಡೈರೆಕ್ಟರ್ಗಳ ನೆಚ್ಚಿನ ನಾಯಕ ನಟನಾಗಿರುವ ಶಿವರಾಜ್ ಕುಮಾರ್, ಸದ್ಯ ಸ್ಯಾಂಡಲ್ವುಡ್ನಲ್ಲಿ ಬಿಡುವಿಲ್ಲದ ನಟರಾಗಿದ್ದಾರೆ.
ಸದ್ಯ ಬಿಡುಗಡೆ ಆಗಿರುವ ಗೋಸ್ಟ್ ಸಿನಿಮಾದ ಪೋಸ್ಟರ್ನಲ್ಲಿ ಎಕೆ 47 ಗನ್ ಹಿಡಿದು ಶಿವರಾಜ್ ಕುಮಾರ್ ಸಖತ್ ಯಂಗ್ ಆಗಿ ಕಾಣುತ್ತಿದ್ದಾರೆ. ಕನ್ನಡದಲ್ಲಿ ಶ್ರೀನಿವಾಸ ಕಲ್ಯಾಣ, ಬೀರ್‌ಬಲ್, ಓಲ್ಡ್ ಮಾಂಕ್ಗಳಲ್ಲಿ ನಿರ್ದೇಶನ ಮಾಡಿ ಅಭಿನಯಿಸಿ ಭರವಸೆ ಹುಟ್ಟಿಸಿರೋ ಶ್ರೀನಿ ಈ ಸಿನಿಮಾವನ್ನು ಬರೆದು ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಉಳಿದ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ.
ಇದನ್ನೂ ಓದಿ: 'ಕಾಲಾಪ್ಥರ್': ಧನ್ಯಾ ರಾಮ್‌ಕುಮಾರ್ ಫಸ್ಟ್ ಲುಕ್ ಅನಾವರಣ