ಕನ್ನಡ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬುದ್ದಿವಂತ ನಿರ್ದೇಶಕ ಹಾಗೂ ನಟ ಅಂತಾ ಫ್ರೂವ್ ಮಾಡಿರುವ ನಟ ರಿಯಲ್ ಸ್ಟಾರ್ ಉಪೇಂದ್ರ. ಸದ್ಯ ಕಬ್ಜ ಸಿನಿಮಾದ ಮಧ್ಯೆ ಉಪೇಂದ್ರ ತಾವು ನಟಿಸಿ ಹಾಗೂ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ವಿಚಿತ್ರ ಪೋಸ್ಟರ್ ಅನ್ನ ಬಿಡುಗಡೆ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಡುವ ಕೆಲಸವನ್ನ ಮಾಡಿದ್ದಾರೆ.
ಈ ಹಿಂದೆ ಶ್, ಎ, ಸೂಪರ್, ಉಪ್ಪಿ 2 ಅಂತಾ ವಿಭಿನ್ನ ಸಿನಿಮಾ ಜೊತೆಗೆ ಸಿಕ್ಕಾಪಟ್ಟೆ ಸದ್ದು ಮಾಡುವ ಟೈಟಲ್ಗಳು ಆಗಿದ್ದವು. ಇದೀಗ ಮತ್ತೆ ಅದೇ ಸೂತ್ರವನ್ನ ಬಳಸುವ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ನಾನು ಡಿಫರೆಂಟ್ ಅಂತಾ ತೋರಿಸಿದ್ದಾರೆ.
ಇದೀಗ ಯು ಐ ಎಂಬ ಹೆಸರಿನ ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ಇಂದು ಸೆಟ್ಟೇರಿದೆ. ಅದಕ್ಕೂ ಮುಂಚೆ ನಟ ಉಪೇಂದ್ರ, ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್, ಜಿ. ಮನೋಹರನ್ ಮತ್ತು ಲಹರಿ ವೇಲು ಮತ್ತು ಸಹ ನಿರ್ಮಾಪಕರಾದ ನವೀನ್ ಮನೋಹರನ್ ಹಣೆಮೇಲೆ ಯು ಐ ಎಂಬ ನಾಮ ಹಾಕ್ಕೊಂಡು, ಈ ಸಿನಿಮಾದ ಮುಹೂರ್ತಕ್ಕೆ ಬಂದು ಗಮನ ಸೆಳೆದರು.
ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಯು ಐ ಸಿನಿಮಾಗೆ ಕಿಚ್ಚ ಸುದೀಪ್ ಬಂದು ಕ್ಲಾಪ್ ಮಾಡಿದರು. ನಂತರ ಶಿವರಾಜ್ ಕುಮಾರ್, ಧನಂಜಯ್, ವಸಿಷ್ಠ ಸಿಂಹ ಸಮ್ಮುಖದಲ್ಲಿ ಉಪೇಂದ್ರ ತಮ್ಮ ಯು ಐ ಚಿತ್ರ ಫಸ್ಟ್ ಲುಕ್ ನ್ನ ಡಿಫ್ರೆಂಟ್ ಆಗಿ ಅನಾವರಣ ಮಾಡುವ ಮೂಲಕ ನಾನು ಎಲ್ಲರಿಗಿಂತ ಭಿನ್ನ ಎಂದು ತೋರಿಸಿದರು.
ಉಪೇಂದ್ರ ಸಿನಿಮಾದ ವಿಚಿತ್ರ ಟೈಟಲ್ ಬಗ್ಗೆ ಮಾತು ಶುರು ಮಾಡಿದ ಕಿಚ್ಚ ಸುದೀಪ್, ನಾನು ಈ ಕಾರ್ಯಕ್ರಮಕ್ಕೆ ಸ್ಟಾರ್ ಆಗಿ ಬಂದಿಲ್ಲ. ನಾನು ಉಪ್ಪಿ ಸಾರ್ ಅಭಿಮಾನಿಯಾಗಿ ಬಂದಿದ್ದೇನೆ ಅಂದರು. ಬಹಳ ವರ್ಷಗಳ ನಂತರ ಮತ್ತೆ ಸಿನಿಮಾ ಮಾಡ್ತಾ ಇರೋದು ನನಗೆ ಖುಷಿ ಇದೆ. ಕುದುರೆ ಆಯ್ಕೆ ಚೆನ್ನಾಗಿದೆ. ನಮ್ಮಲ್ಲಿ ರೇಸ್ ಸ್ಟಾರ್ಟ್ ಆಯ್ತು ಅಂತಾ ಅರ್ಥ ಅದು. ಆದಷ್ಟು ಬೇಗ ಮುಗಿಸಿ ನಾವು ನೋಡೋದಕ್ಕೆ ಕಾಯ್ತಿದ್ದೀವಿ ಅಂತಾ ಸುದೀಪ್ ಹೇಳಿದರು.
ಒಳ್ಳೆಯದಾಗಲಿ ಎಂದ ಶಿವರಾಜ್ ಕುಮಾರ್: ಉಪೇಂದ್ರ ಆತ್ಮೀಯ ಗೆಳತನ ಹೊಂದಿರುವ ಸ್ಟಾರ್ ಅಂದರೆ ಶಿವರಾಜ್ ಕುಮಾರ್. ಈ ಕಾರಣಕ್ಕೆ ಉಪೇಂದ್ರ ಸಿನಿಮಾ ಅಂತಾ ಬಂದಾಗ ಶಿವಣ್ಣ ಸಾಥ್ ಕೊಟ್ರೆ, ಶಿವಣ್ಣ ಸಿನಿಮಾ ಅಂತಾ ಬಂದಾಗ ಉಪ್ಪಿ ಜೊತೆಯಾಗುತ್ತಾರೆ. ಈ ಕಾರಣಕ್ಕೆ ಶಿವರಾಜ್ ಕುಮಾರ್ ಉಪೇಂದ್ರ ನನ್ನ ಗರ್ಲ್ ಫ್ರೆಂಡ್ ಅಂತಾ ಕರೆದರು. ಉಪ್ಪಿ ನಿರ್ದೇಶನ ಎಲ್ಲಾ ಸಿನಿಮಾಗಳನ್ನ ನೋಡಿದ್ದೀನಿ. ಉಪ್ಪಿ ನಿರ್ದೇಶನದ ಓಂ ಸಿನಿಮಾ ನನಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ. ಏಳು ವರ್ಷಗಳ ಬಳಿಕ ಉಪ್ಪಿ ನಿರ್ದೇಶನ ಮಾಡ್ತಾ ಇದ್ದಾರೆ. ಉಪೇಂದ್ರ ಕುದುರೆ ತರಹ ಓಡೋಕೆ ಸ್ಟಾರ್ಟ್ ಮಾಡಿದ್ದಾರೆ. ಒಳ್ಳೆಯದಾಗ್ಲಿ ಅಂತಾ ಶಿವರಾಜ್ ಕುಮಾರ್ ಹೇಳಿದರು.
ಕಾಮನ್ಮ್ಯಾನ್: ನಂತರ ಡಾಲಿ ಧನಂಜಯ್ ಮಾತನಾಡಿ, ಉಪ್ಪಿ ಸರ್ ಕಾಮನ್ ಮ್ಯಾನ್ಗೆ ಬೈದುಕೊಂಡು ಹಾಡಿಕೊಂಡು ಅವರ ಜೊತೆಯಲ್ಲೇ ಇರ್ತಾರೆ. ಕಾಮನ್ ಮ್ಯಾನ್ ಜವಾಬ್ದಾರಿ ಹೇಳ್ಕೋಂಡು ಬರ್ತಿದ್ದಾರೆ. ಸ್ಟಾರ್ ಡಮ್ ಎಂಜಾಯ್ ಮಾಡ್ತಿಲ್ಲ ಅಂದ್ರು. ಪ್ರಜಾಕೀಯದಿಂದ ನನ್ನ ಗುರಿನೇ ಬೇರೆ ಇದೆ. ಪೋಸ್ಟರ್ ನಲ್ಲಿ ಏನೇನೋ ಇದೆ. ಮುಂದಿನ ದಿನಗಳಲ್ಲಿ ಉಪ್ಪಿ ಸಾರ್ ನಿರ್ದೇಶನ ಮಾಡಲಿ ಅಂತಾ ಕೇಳಿಕೊಂಡರು.
ಓದಿ: ವಿಭಿನ್ನ ಪೋಸ್ಟರ್ನಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರಿಯಲ್ ಸ್ಟಾರ್!