ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಆದರ್ಶ ದಂಪತಿಗಳು ಎಂದು ಥಟ್ ಅಂತ ಎಲ್ಲರ ಕಣ್ಮುಂದೆ ಬರೋದು ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿ. ಯೆಸ್ 37 ವರ್ಷದ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರನ್ನ ತಂದೆ ರಾಜ್ ಕುಮಾರ್ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ನೋಡಿದ ಹುಡುಗಿಯನ್ನೇ ಶಿವರಾಜ್ ಕುಮಾರ್ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕೈ ಹಿಡಿದರು.
1986 ಮೇ 19ನೇ ತಾರೀಖಿನಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಅವರ ಅದ್ದೂರಿ ವಿವಾಹ ನೆರವೇರಿತ್ತು. ಶಿವಣ್ಣ-ಗೀತಕ್ಕ ಮದುವೆ ಸಂಭ್ರಮಕ್ಕೆ ಡಾ ರಾಜ್ ಮತ್ತು ಬಂಗಾರಪ್ಪನವರ ಕುಟುಂಬದ ಜೊತೆಗೆ ದೊಡ್ಮನೆಯ ಸಹಸ್ರಾರು ಅಭಿಮಾನಿಗಳು, ಬಂಗಾರಪ್ಪನವರ ಶಿವಮೊಗ್ಗ ಅಭಿಮಾನಿಗಳು ಸೇರಿದ್ದರು. ಒಂದು ಅಚ್ಚರಿ ಸಂಗತಿ ಅಂದ್ರೆ ಸ್ವತಃ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮದುವೆಯಲ್ಲಿ ರಾಜ್ಕುಮಾರ್ ಮತ್ತು ಬಂಗಾರಪ್ಪನವರ ಕುಟುಂಬಕ್ಕೆ ಕೊನೆಗೆ ಮದುವೆ ಊಟ ಸಿಗದೇ ಜನಾರ್ದನ್ ಹೋಟೆಲ್ನಲ್ಲಿ ದೋಸೆ ತಿನ್ನೋ ಮಟ್ಟಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಿದ್ದರು.
ಬೆಂಗಳೂರಿನಲ್ಲಿ ಮದುವೆ ಆಗಿತ್ತು. ಚೆನ್ನೈನಲ್ಲಿ ಆರತಕ್ಷತೆ ಅದ್ದೂರಿಯಾಗಿ ಸಿನಿಮಾ ರಂಗಗಳ ಸ್ನೇಹಿತರಿಗಾಗಿ ರಾಜ್ ಮತ್ತು ಬಂಗಾರಪ್ಪ ಕುಟುಂಬ ಆಯೋಜನೆ ಮಾಡಿತ್ತು. ದಕ್ಷಿಣದ ಆಲ್ ಮೋಸ್ಟ್ ಆಲ್ ಎಲ್ಲ ಸಿನಿಮಾ ಸೆಲೆಬ್ರಿಟಿಸ್ ಪ್ಲಸ್ ಪೊಲಿಟಿಷಿಯನ್ಸ್ ಮದುವೆಗೆ ಸೇರಿದ್ದರು. ಈ ಸಂಭ್ರಮಕ್ಕೆ ಇಂದು 37 ವರ್ಷ. ಈ ಖುಷಿಯನ್ನ ಸರಳವಾಗಿ ತನ್ನ ಮನೆ ಮಂದಿಯ ಜೊತೆಗೆ ಕೆಲವೇ ಕೆಲವು ಅಭಿಮಾನಿಗಳ ಸಮ್ಮುಖದಲ್ಲಿ ಶಿವಣ್ಣ - ಗೀತಕ್ಕ ದಂಪತಿ ಕೇಕ್ ಕಟ್ ಮಾಡುವುದರ ಮೂಲಕ 37ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನ ಸಂಭ್ರಮಿಸಿದ್ದಾರೆ.
ನನ್ನ ತಾಯಿ ಹಾಗೂ ಪತ್ನಿ ನನ್ನೆರಡು ಕಣ್ಣಿದ್ದಂತೆ: ಗೀತಾಳಲ್ಲಿ ಅಮ್ಮನ ಗುಣಗಳಿವೆ. ಅದು ಊಟದ ವಿಷಯದಲ್ಲೇ ಆಗಿರಲಿ ಅಥವಾ ಸಂಭಾವನೆ ವಿಚಾರದಲ್ಲೇ ಆಗಿರಲಿ ಎಂದಿಗೂ ಯಾರಿಗೂ ಕಮ್ಮಿ ಮಾಡಿಲ್ಲ ಎಂದು ನಟ ಶಿವರಾಜ್ ಕುಮಾರ್ ಅವರು ಹೇಳಿದ್ದರು. ನನ್ನ ತಾಯಿ ಹಾಗೂ ಪತ್ನಿ ನನ್ನೆರಡು ಕಣ್ಣಿದ್ದಂತೆ. ಆನಂದ್ ಸಿನಿಮಾದಿಂದ ವೇದ ಸಿನಿಮಾದವರೆಗೂ ನನ್ನ ಸಿನಿಪಯಣ ಆನಂದ ವೇದವಾಗಿದೆ ಎಂದು ಭಾವಿಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ (ಡಿಸೆಂಬರ್ 22-2023)ರಂದು ನಟ ಶಿವರಾಜ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದರು.
ಆನಂದ್ ಸಿನಿಮಾ ನಿರ್ಮಾಣದ ದಿನಗಳನ್ನು ಮೆಲುಕು ಹಾಕಿದ್ದ ನಟ ಶಿವರಾಜ್ ಕುಮಾರ್ ಅವರು, ವೇದ ರಿಲೀಸ್ ನಲ್ಲೂ ಮೊದಲ ಸಿನಿಮಾ ರಿಲೀಸ್ ಆದಾಗ ಇದ್ದ ಅದೇ ಭಯವಿದೆ ಎಂದು ಹೇಳಿದ್ದರು. ಪ್ರತಿಯೊಬ್ಬರೂ ನನಗಿಂತಲೂ ಹೆಚ್ಚಾಗಿ ಗೀತಾಳನ್ನು ಇಷ್ಟಪಡುತ್ತಿದ್ದಾರೆ. ಗೀತಾ ಪಿಕ್ಚರ್ಸ್ನಡಿ ಕೇವಲ ನನ್ನ ಸಿನಿಮಾಗಳಷ್ಟೇ ಅಲ್ಲ, ಒಳ್ಳೆಯ ಕಥೆ ಬಂದ್ರೆ ಬೇರೆಯವರ ಸಿನಿಮಾಗಳನ್ನು ಖಂಡಿತವಾಗಿಯೂ ಮಾಡುತ್ತೇವೆ ಎಂದು ಶಿವಣ್ಣ ಹೇಳಿದ್ದರು.
ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ‘ವೇದ’ವನ್ನು ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ನಿರ್ಮಾಣ ಮಾಡಿದ್ದರು. ಶಿವರಾಜ್ ಕುಮಾರ್ ಮೊದಲ ಸಿನಿಮಾವನ್ನು ತಾಯಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸಿದರು. 125ನೇ ಸಿನಿಮಾವನ್ನು ಪತ್ನಿ ಗೀತಾ ನಿರ್ಮಾಣ ಮಾಡಿದ್ದರು. ವೇದ ಸಿನಿಮಾ ನಿರ್ಮಾಣದ ಹೊರೆ ಹೊತ್ತ ಗೀತಾ ಶಿವರಾಜ್ಕುಮಾರ್ ಬಗ್ಗೆ ಶಿವಣ್ಣ ಮಾತನಾಡಿ, ಗೀತಾ ಅವರನ್ನು ಕೊಂಡಾಡಿದ್ದರು.
ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ಜಡ್ಜ್ಮೆಂಟ್ನಲ್ಲಿ ದಿಗಂತ್ಗೆ ಸಿಗುತ್ತಾ ನ್ಯಾಯ?