ಬಾಲಿವುಡ್ ಜನಪ್ರಿಯ ಕಿರುತೆರೆ ನಟಿ ಶಿವಾಂಗಿ ಜೋಶಿ (Shivangi Joshi) ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕಿಡ್ನಿ ಸೋಂಕಿನಿಂದ ಬಳಲುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ತಿಳಿದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
- " class="align-text-top noRightClick twitterSection" data="
">
ಅಭಿಮಾನಿಗಳಿಗೆ ಸಲಹೆ ಕೊಟ್ಟ ನಟಿ: ಆಸ್ಪತ್ರೆಗೆ ದಾಖಲಾದ ನಂತರ ಚೇತರಿಸಿಕೊಳ್ಳಲು ಸಹಾಯ ಮಾಡಿದ ವೈದ್ಯಕೀಯ ಸಿಬ್ಬಂದಿ, ಪ್ರೀತಿ ಪಾತ್ರರು ಮತ್ತು ಸ್ನೇಹಿತರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಆರೋಗ್ಯದ ಕಾಳಜಿಯನ್ನು ಎಂದಿಗೂ ಕಡೆಗಣಿಸಬೇಡಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ಎಂದು ಅವರು ತಮ್ಮ ಅಭಿಮಾನಿಗಳಲ್ಲಿ ಕೇಳಿ ಕೊಂಡಿದ್ದಾರೆ.
ಆಸ್ಪತ್ರೆಯಿಂದ ಫೋಟೋ ಹಂಚಿಕೊಂಡ ಶಿವಾಂಗಿ ಜೋಶಿ: ಆಸ್ಪತ್ರೆಯಿಂದ ತಮ್ಮ ಫೋಟೋ ಹಂಚಿಕೊಂಡಿದ್ದಾರೆ. ಕಣ್ಣು ಮುಚ್ಚಿದ್ದರು, ನಗು ಮೊಗದ ಚಿತ್ರವದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆಂಬ ವಿಶ್ವಾಸವನ್ನು ಈ ಫೋಟೋ ವ್ಯಕ್ತಪಡಿಸುತ್ತಿತ್ತು.
ಕಿರುತೆರೆಯಲ್ಲಿ ಜನಪ್ರಿಯತೆ: 24ರ ಹರೆಯದ ನಟಿ ಶಿವಾಂಗಿ ಜೋಶಿ ಅವರು ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಜನಪ್ರಿಯ ಧಾರಾವಾಹಿ ಮೂಲಕ ಹೆಸರುವಾಸಿ ಆದವರು. ಖೇಲ್ತಿ ಹೈ ಜಿಂದಗಿ ಆಂಖ್ ಮಿಚೋಲಿ ಮೂಲಕವೂ ಜನಪ್ರಿಯತೆ ಗಳಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಖ್ಯಾತಿ ಗಳಿಸಿದವರು. ಅತ್ಯಧಿಕ ಸಂಭಾವನೆ ಪಡೆದವರು. ಆದ್ರೀಗ ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಾಂಗಿ ಜೋಶಿ ಪೋಸ್ಟ್... 'ಎಲ್ಲರಿಗೂ ನಮಸ್ಕಾರ, ಇದು ಕಷ್ಟದ ದಿನಗಳು. ನಾನು ಕಿಡ್ನಿ ಸೋಂಕಿಗೆ ಒಳಗಾಗಿದ್ದೇನೆ. ಆದರೆ, ನನ್ನ ಕುಟುಂಬ, ಸ್ನೇಹಿತರು, ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ದೇವರ ದಯೆಯಿಂದ ನಾನು ಉತ್ತಮವಾಗಿದ್ದೇನೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿ, ಫಾಲೋವರ್ಗಳಿಗೂ ತಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಲು ಸಲಹೆ ನೀಡಿದರು.
ಅಭಿಮಾನಿಗಳಿಗೆ ಏನಂದ್ರು? 'ನಿಮ್ಮ ದೇಹ, ಮನಸ್ಸು ಮತ್ತು ಆತ್ಮದ ಬಗ್ಗೆ ಕಾಳಜಿ ವಹಿಸಲು ಮರೆಯದಿರಿ. ಮುಖ್ಯವಾಗಿ ಹೆಚ್ಚು ನೀರು ಕುಡಿಯಿರಿ. ನಾನು ಶೀಘ್ರದಲ್ಲೇ ಕೆಲಸಕ್ಕೆ ಹಿಂತಿರುಗುತ್ತೇನೆ ಮತ್ತು ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ, ಚೇತರಿಸಿಕೊಳ್ಳುತ್ತಿದ್ದೇನೆ, ನಿಮ್ಮ ಪ್ರೀತಿಯ ಶಿವಾಂಗಿ' ಎಂದು ಬರೆದಿದ್ದಾರೆ.
ಇದನ್ನೂ ಓದಿ: ನಾಟು ನಾಟು ಸಾಧನೆಗೆ ಅಮೆರಿಕನ್ ಗಾಯಕ ಪ್ರಶಂಸೆ: ಭಾವುಕರಾದ ಕೀರವಾಣಿ, RRR ತಂಡ
ಶಿವಾಂಗಿ ಜೋಶಿ ತಮ್ಮ ಅನಾರೋಗ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಂತೆ ಸ್ನೇಹಿತರು ಮತ್ತು ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಶೀಘ್ರವಾಗಿ ಚೇತರಿಸಿಕೊಳ್ಳಲು ಶುಭ ಹಾರೈಸಿದರು. ಅವರ ಅನೇಕ ಸಹೋದ್ಯೋಗಿಗಳು ಮತ್ತು ಉದ್ಯಮದಲ್ಲಿನ ಅವರ ಬೆಂಬಲಿಗರು ನಟಿಯ ಆರೋಗ್ಯದ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದರು. ಕುಂಡಲಿ ಭಾಗ್ಯದ ನಟಿ ಶ್ರದ್ಧಾ ಆರ್ಯ ಪ್ರತಿಕ್ರಿಯಿಸಿ, ಚೆನ್ನಾಗಿ ಇರಿ ರಾಜಕುಮಾರಿ! ನಿಜವಾಗಿಯೂ ನಿಮಗೆ ಅನೇಕ ಆಶೀರ್ವಾದಗಳು ಇವೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: 37 ವರ್ಷಗಳ ಬಳಿಕ B.Tech ಪದವಿ ಪ್ರಮಾಣ ಪತ್ರ ಪಡೆದ ರಾಮ್‌ಗೋಪಾಲ್ ವರ್ಮಾ