ETV Bharat / entertainment

ಶಿವಾಜಿ ಸುರತ್ಕಲ್ 2: ಪ್ರೇಕ್ಷಕರ ಮನ‌‌ಗೆಲ್ಲಲು ಸಜ್ಜಾಗಿದ್ದಾರೆ ರಮೇಶ್ ಅರವಿಂದ್

ಇದೇ ಶುಕ್ರವಾರದಂದು ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ ಚಿತ್ರ ಶಿವಾಜಿ ಸುರತ್ಕಲ್ 2 ತೆರೆ ಕಾಣಲಿದೆ.

Shivaji Suratkal 2
ಶಿವಾಜಿ ಸುರತ್ಕಲ್ 2
author img

By

Published : Apr 12, 2023, 1:42 PM IST

ರಮೇಶ್ ಅರವಿಂದ್​ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. ಈಗಲೂ ಎವರ್​ಗ್ರೀನ್ ಹೀರೋ, ನಿರ್ದೇಶಕ, ನಿರೂಪಕನಾಗಿ ಸ್ಯಾಂಡಲ್ ವುಡ್​ನಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದಾರೆ. ವಯಸ್ಸು 58 ಆದರೂ ಆ ಎನರ್ಜಿ ಕಿಂಚಿತ್ತೂ ಕಡಿಮೆ ಆಗಿಲ್ಲ. ತಾವಿರುವ ಸ್ಥಳಗಳಲ್ಲಿ ಬಹಳ ಎನರ್ಜಿಟಿಕ್​ ಆಗಿ ಕೆಲಸ ಮಾಡುವ ಮೂಲಕ ಗಮನ ಸೆಳೆಯುತ್ತಾರೆ.

ಸುಮಾರು 35 ವರ್ಷಗಳಲ್ಲಿ 140 ಚಲನಚಿತ್ರಗಳನ್ನು ಮಾಡಿದ್ದಾರೆ. 2018ರ ಬಳಿಕದ ಸಿನಿಮಾ ಸಂಖ್ಯೆ ಬೆರಳೆಣಿಕೆ. ಆದ್ರೆ ವೀಕೆಂಡ್​ ವಿತ್​ ರಮೇಶ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು ಸದ್ಯ ಶಿವಾಜಿ ಸುರತ್ಕಲ್ 2 ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್​ ರಿಲೀಸ್ ಆಗಿದೆ.

2020ರಲ್ಲಿ ತೆರೆ ಕಂಡು ಸೂಪರ್ ಹಿಟ್ ಆಗಿದ್ದ ಚಿತ್ರ ಶಿವಾಜಿ ಸುರತ್ಕಲ್. ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಂಡು ನಟ ರಮೇಶ್​ ಅರವಿಂದ್​ ಸಿನಿ ಪ್ರಿಯರ ಮನಗೆದ್ದಿದ್ದರು. ಇದೀಗ ಶಿವಾಜಿ ಸುರತ್ಕಲ್ ಮುಂದುವರೆದ ಭಾಗ ''ಶಿವಾಜಿ ಸುರತ್ಕಲ್ ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ'' ಚಿತ್ರದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ.

Shivaji Suratkal 2
ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಶಿವಾಜಿ ಸುರತ್ಕಲ್ 2

ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗದಂತೆಯೇ ಈ ಚಿತ್ರವು ಸಹ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಎಂಬುದೇ ಈ ಚಿತ್ರದ ಹೂರಣ.

ಮೊದಲ ಭಾಗ ನೋಡಿದವರಿಗೆ ಈ ಚಿತ್ರ ಖಂಡಿತ ಇಷ್ಟವಾಗುತ್ತದೆ. ಇಲ್ಲಿ ಕೊಲೆ, ಕೊಲೆ ರಹಸ್ಯದ ಮಾತ್ರವಲ್ಲದೇ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ ಎಂಬುದು ಚಿತ್ರತಂಡದ ಅಭಿಪ್ರಾಯ.

ಕನ್ನಡದಲ್ಲಿ ಇದೊಂದು ವಿಭಿನ್ನ ಪ್ರಯತ್ನ ಎಂಬ ನಂಬಿಕೆ ಇದೆ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ. 'ಶಿವಾಜಿ ಸುರತ್ಕಲ್' ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್​ನಲ್ಲಿ ನಟರಾಕ್ಷಸ.. ವೇದಿಕೆಯಲ್ಲಿ ಕಣ್ಣೀರಿಟ್ಟ ಡಾಲಿ

ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಸೇರಿದಂತೆ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಶಿವಾಜಿ ಸುರತ್ಕಲ್ 2 ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಇದೇ ಏಪ್ರಿಲ್ 14 ರಾಜ್ಯಾದ್ಯಂತ ಶಿವಾಜಿ ಸುರತ್ಕಲ್ ಸೀಕ್ವೆಲ್​​ ಬಿಡುಗಡೆಯಾಗುತ್ತಿದ್ದು, ಸಿನಿಪ್ರಿಯರ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ: ಬ್ಯೂಟಿ ಪ್ರೊಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​​ ಆಗಿ ಶಾರುಖ್ ಖಾನ್​​ ಪುತ್ರಿ: ಜಾಲತಾಣದಲ್ಲಿ ಚರ್ಚೆ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.