ಒಳ್ಳೆ ಕಥೆ ಅದ್ದೂರಿ ಮೇಕಿಂಗ್ ಇದ್ದರೆ ಎಂತಹ ಸಿನಿಮಾವು ಅಭಿಮಾನಿಗಳಿಗೆ ಇಷ್ಟ ಆಗುತ್ತೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎಂದರೆ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಮುಂದುವರೆದ ಭಾಗ ಶಿವಾಜಿ ಸೂರತ್ಕಲ್ 2. ಹೌದು ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಕಥೆ ಆಧರಿಸಿ ಬಂದ ಶಿವಾಜಿ ಸುರತ್ಕಲ್ 2 ಚಿತ್ರ ಸಿನಿ ಪ್ರಿಯರ ಮೆಚ್ಚುಗೆ ಪಾತ್ರವಾಗಿ ಯಶಸ್ವಿ 50ನೇ ದಿನಗಳನ್ನ ಪೂರೈಯಿಸಿದೆ.
ಹೌದು ಕರ್ನಾಟಕದ 7 ಚಿತ್ರಮಂದಿರಗಳಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಂತೋಷವನ್ನು ಸಂಭ್ರಮಿಸಲು ನಿರ್ಮಾಪಕ ಅನೂಪ್ ಗೌಡ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ, ನಟ ರಮೇಶ್ ಅರವಿಂದ್ ಅವರಿಂದ ಐವತ್ತನೇ ದಿನದ ಪೋಸ್ಟರ್ ಬಿಡುಗಡೆ ಮಾಡಿಸಿದ್ದಾರೆ. ಚಿತ್ರದ ಯಶಸ್ಸಿಗೆ ಕಾರಣರಾದ ಕಲಾಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ ಹಾಗೂ ತಮ್ಮ ಚಿತ್ರತಂಡಕ್ಕೆ ನಿರ್ದೇಶಕರು ಹಾಗೂ ನಿರ್ಮಾಪಕರು ಧನ್ಯವಾದ ತಿಳಿಸಿದ್ದಾರೆ.
ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ನಟ ರಮೇಶ್ ಅರವಿಂದ್, ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ಐವತ್ತು ದಿನಗಳನ್ನು ಪೂರೈಸಿರುವುದು ಖುಷಿಯ ಸಂಗತಿ. ಈ ಸಂದರ್ಭದಲ್ಲಿ ನಾನು ಅಭಿಮಾನಿಗಳಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಕೃತಜ್ಞತೆ ಹೇಳಿದ್ದಾರೆ.
ಇನ್ನು ಶಿವಾಜಿ ಸುರತ್ಕಲ್ 2 ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಚಿತ್ರವನ್ನು ನಿರ್ಮಿಸಿದ್ದರು. ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದರು. ಇನ್ನು ಚಿತ್ರಕ್ಕೆ ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿತ್ತು. ಈ ವರ್ಷದ ಸಿನಿಮಾಗಳಲ್ಲಿ ಶಿವಾಜಿ ಸುರತ್ಕಲ್ ಸಿನಿಮಾ 50 ದಿನ ಪೂರೈಯಿಸಿರೋದು ಚಿತ್ರತಂಡಕ್ಕೆ ಖುಷಿ ತಂದಿದೆ.
ಧೂಮಂ ಟ್ರೈಲರ್ ಬಿಡುಗಡೆ ದಿನಾಂಕ : ಹೊಂಬಾಳೆ ಫಿಲ್ಮ್ಸ್ ಸಧ್ಯ ಕನ್ನಡದ ಪ್ರಖ್ಯಾತ ಸಿನಿಮಾ ಪ್ರೊಡಕ್ಷನ್ ಹೌಸ್ ಆಗಿದೆ. ಡಿವೈನ್ ಸ್ಟಾರ್ ಸಾರಥ್ಯದ ಕಾಂತಾರ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ದಂತಹ ಹಿಟ್ ಸಿನಿಮಾ ಮೂಲಕ ದೇಶದಾದ್ಯಂತ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ. ಕನ್ನಡ ಭಾಷೆ ಮಾತ್ರವಲ್ಲದೇ ಇತರ ಭಾಷೆಗಳ ಸಿನಿ ರಂಗದತ್ತಲೂ ಹೊಂಬಾಳೆ ಫಿಲ್ಮ್ಸ್ ಗಮನ ಹರಿಸಿದೆ.
ಇದೀಗಾ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮಲಯಾಳಂನ ನಟ ಫಹಾದ್ ಫಾಸಿಲ್ ಅಭಿನಯದ 'ಧೂಮಂ' ಚಿತ್ರೀಕರಣ ಪೂರ್ಣಗೊಂಡಿದೆ. ಇದೇ ಜೂನ್ 8ರ ಮಧ್ಯಾಹ್ನ 12:59ಕ್ಕೆ ಚಿತ್ರದ ಟ್ರೇಲರ್ ಅನಾವರಣಗೊಳ್ಳಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.
ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ನ ಬಹುನಿರೀಕ್ಷಿತ ಚಿತ್ರ 'ಧೂಮಂ'.. ಟ್ರೇಲರ್ ಬಿಡುಗಡೆಗೆ ಮುಹೂರ್ತ ನಿಗದಿ