ETV Bharat / entertainment

'ಟೈಗರ್ ನಾಗೇಶ್ವರ್ ರಾವ್': ಟಾಲಿವುಡ್​ ಮಾಸ್ ಮಹಾರಾಜನಿಗೆ ಹ್ಯಾಟ್ರಿಕ್ ಹೀರೋ ಸಾಥ್ - ravi teja movie

'ಟೈಗರ್ ನಾಗೇಶ್ವರ್ ರಾವ್' ಫಸ್ಟ್ ಲುಕ್​​ಗೆ ನಟ ಶಿವ ರಾಜ್​ಕುಮಾರ್​ ದನಿ ನೀಡಿದ್ದಾರೆ.

shiva rajkumar supports ravi teja movie
ಮಾಸ್ ಮಹಾರಾಜನಿಗೆ ಹ್ಯಾಟ್ರಿಕ್ ಹೀರೋ ಸಾಥ್
author img

By

Published : May 17, 2023, 1:56 PM IST

ಮಾಸ್ ಮಹಾರಾಜನಿಗೆ ಹ್ಯಾಟ್ರಿಕ್ ಹೀರೋ ಸಾಥ್

ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಅವರು ನಟಿಸುತ್ತಿರುವ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ 'ಟೈಗರ್ ನಾಗೇಶ್ವರ್ ರಾವ್' ಫಸ್ಟ್ ಲುಕ್ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ 24ರಂದು ಪಂಚ ಭಾಷೆಯಲ್ಲಿ ಅನಾವರಣಗೊಳ್ತಿರುವ ಫಸ್ಟ್ ಲುಕ್ ಕನ್ನಡ ಝಲಕ್​​ಗೆ ಹ್ಯಾಟ್ರಿಕ್ ಹೀರೋ ಶಿವ ರಾಜ್​​ಕುಮಾರ್ ಧ್ವನಿ ನೀಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಡಿ ಆಗುತ್ತಿರುವ ಈ ಅದ್ಧೂರಿ ಸಿನಿಮಾ ಮೂಲಕ ರವಿತೇಜ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲಿದ್ದಾರೆ. ಆ ಕ್ಷಣಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಮ್ಯಾಜಿಕಲ್ ವಾಯ್ಸ್ ಮೂಲಕ 'ಟೈಗರ್ ನಾಗೇಶ್ವರ್ ರಾವ್' ಪ್ರಪಂಚಕ್ಕೆ ನಿಮ್ಮನ್ನು ಕೊಂಡೊಯ್ಯಲಿದ್ದಾರೆ. ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕಾಶ್ಮೀರಿ ಫೈಲ್ಸ್ ಹಾಗೂ ಕಾರ್ತಿಕೇಯ - 2 ನಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ತಮ್ಮದೇ ಅಭಿಷೇಕ್ ಅಗವಾಲ್ ಆರ್ಟ್ಸ್ ನಡಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

ಕಳ್ಳನ ಜೀವನಾಧಾರಿತ ಸಿನಿಮಾ: 70ರ ಕಾಲಘಟ್ಟದ ಹೈದ್ರಾಬಾದ್​ನ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದೆ. ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ರವಿತೇಜ ಗೆಟಪ್, ಬಾಡಿ ಲ್ಯಾಂಗ್ವೇಜ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ 'ಟೈಗರ್ ನಾಗೇಶ್ವರ್ ರಾವ್' ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

ಅಕ್ಟೋಬರ್ 22ಕ್ಕೆ ಸಿನಿಮಾ ಬಿಡುಗಡೆ: ದಸರಾ ಹಬ್ಬಕ್ಕೆ 'ಟೈಗರ್ ನಾಗೇಶ್ವರ್ ರಾವ್' ಬಾಕ್ಸ್​​ಆಫೀಸ್​​ ಬೇಟೆಗಿಳಿಯಲಿದ್ದಾರೆ. ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಅವರ ಈ ಬಹುನಿರೀಕ್ಷಿತ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ಸುಸಂದರ್ಭ ಹಾಗೂ ದಸರಾ ರಜೆ ಹಿನ್ನೆಲೆ ಪ್ಲಾನ್ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲಾಗ್ತಿದೆ.

ಇದನ್ನೂ ಓದಿ: ಸಿಕ್ಸ್​ ಪ್ಯಾಕ್​ ಮೈಕಟ್ಟು, ಬಜಾರ್​ ಹುಡುಗ 'ಧನ್ವೀರ್ ಗೌಡ್ರ' ಖಡಕ್‌ ದರ್ಶನ- ವಿಡಿಯೋ ನೋಡಿ

ತೆಲುಗು ಚಿತ್ರರಂಗದಲ್ಲಿ ರವಿತೇಜ ಸಾಕಷ್ಟು ಹೆಸರು ಮಾಡಿದ್ದಾರೆ. ಸೂಪರ್​ ಹಿಟ್​ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಟಾಲಿವುಡ್​ನಲ್ಲಿ ಮಾಸ್​ ಮಹಾರಾಜನೆಂದೇ ಖ್ಯಾತಿ ಪಡೆದಿದ್ದಾರೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಇವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೇ ದಸರಾ ವೇಳೆಗೆ 'ಟೈಗರ್​​ ನಾಗೇಶ್ವರ ರಾವ್​' ಬಿಡುಗಡೆ ಆಗಲಿದ್ದು, ಅಭಿಮಾನಿಗಳು ಸಿನಿಮಾ ಬಗ್ಗೆ ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ಪಿವಿಆರ್​ ಐನಾಕ್ಸ್​ಗೆ 300 ಕೋಟಿ ರೂ.ಗೂ ಅಧಿಕ ನಷ್ಟ: 50 ಸ್ಕ್ರೀನ್​​ ಮುಚ್ಚುವ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.