ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ವೇದ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೇದ ಸೂಪರ್ ಹಿಟ್ ಆದ ಹಿನ್ನೆಲೆ ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಇದೀಗ ಹೊಸ ವರ್ಷದಂದು ಘೋಸ್ಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಘೋಸ್ಟ್ ಮೋಷನ್ ಪೋಸ್ಟರ್: ಪೋಸ್ಟರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕುತೂಹಲ ಹುಟ್ಟಿಸಿರೋ ಘೋಸ್ಟ್ ಚಿತ್ರ ಒಂದಲ್ಲ ಒಂದು ವಿಚಾರಕ್ಕೆ ಸೌಂಡ್ ಮಾಡುತ್ತಿದೆ. ಘೋಸ್ಟ್ ಫಸ್ಟ್ ಲುಕ್ನಲ್ಲಿ ಹ್ಯಾಟ್ರಿಕ್ ಹೀರೋ ಎಕೆ 47 ಗನ್ ಹಿಡಿದು ಕಾಣಿಸಿಕೊಂಡಿದ್ದರು. ಬಳಿಕ ಘೋಸ್ಟ್ ಸಿನಿಮಾದ ಕಲರ್ ಫುಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಇದೀಗ ಘೋಸ್ಟ್ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Make way for ya’ man #GHOST.
— DrShivaRajkumar (@NimmaShivanna) January 1, 2023 " class="align-text-top noRightClick twitterSection" data="
Presenting you the MotionPoster of #GHOST..
shooting in progress@lordmgsrinivas @ArjunJanyaMusic@SandeshPro@baraju_SuperHit pic.twitter.com/GGLr3Caxcg
">Make way for ya’ man #GHOST.
— DrShivaRajkumar (@NimmaShivanna) January 1, 2023
Presenting you the MotionPoster of #GHOST..
shooting in progress@lordmgsrinivas @ArjunJanyaMusic@SandeshPro@baraju_SuperHit pic.twitter.com/GGLr3CaxcgMake way for ya’ man #GHOST.
— DrShivaRajkumar (@NimmaShivanna) January 1, 2023
Presenting you the MotionPoster of #GHOST..
shooting in progress@lordmgsrinivas @ArjunJanyaMusic@SandeshPro@baraju_SuperHit pic.twitter.com/GGLr3Caxcg
ಘೋಸ್ಟ್ ಮೇಕಿಂಗ್ ವಿಡಿಯೋ: ಕೆಲ ದಿನಗಳ ಹಿಂದೆ ಅನಾವರಣಗೊಂಡಿದ್ದ ಘೋಸ್ಟ್ ಮೇಕಿಂಗ್ ವಿಡಿಯೋದಲ್ಲಿ, ಅದ್ಧೂರಿ ಜೈಲಿನ ಸೆಟ್ ಹಾಕಿ ಶಿವ ರಾಜ್ಕುಮಾರ್ ಘೋಸ್ಟ್ ಅವತಾರವನ್ನು ಚಿತ್ರೀಕರಣ ಮಾಡಲಾಗಿತ್ತು. ಕೇವಲ 15 ಸೆಕೆಂಡ್ ಇದ್ದ ಮೇಕಿಂಗ್ ವಿಡಿಯೋ ಇಡೀ ಸೌತ್ನಲ್ಲಿ ಹವಾ ಕ್ರಿಯೇಟ್ ಮಾಡಿತ್ತು. ಈ ಮೇಕಿಂಗ್ ನೋಡಿದ್ರೆ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎನಿಸುತ್ತದೆ. ತೆಲುಗು ನಟ ಜಯರಾಮ್ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.
ಘೋಸ್ಟ್ ಶೂಟಿಂಗ್: ಶ್ರೀನಿವಾಸ ಕಲ್ಯಾಣ, ಬೀರ್ ಬಲ್ ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಶ್ರೀನಿ ಘೋಸ್ಟ್ ಸಿನಿಮಾ ನಿರ್ದೇಶಿಸಿದ್ದಾರೆ. ಶ್ರೀನಿ ಅವರೇ ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜವಾಬ್ದಾರಿ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿ ಬರುತ್ತಿರುವ 29ನೇ ಸಿನಿಮಾ ಇದು. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ, ಮಹೇಂದ್ರ ಸಿಂಹ ಕ್ಯಾಮರಾವರ್ಕ್, ದೀಪು ಎಸ್. ಕುಮಾರ್ ಸಂಕಲನ ಇದೆ.
-
ವೇದ ಥಿಯೇಟರ್ ಯಾತ್ರೆಯನ್ನು ಮುಂದುವರೆಸಲು ಸಜ್ಜಾಗಿದ್ದರೆ ನಮ್ಮ ಶಿವಣ್ಣ.... ನೀವೂ ಬರ್ತೀರಾ ಅಲ್ವಾ..?
— Geetha Pictures (@GeethaPictures) January 1, 2023 " class="align-text-top noRightClick twitterSection" data="
Book your tickets now:https://t.co/SAAiQe1CCN#VEDHA #ವೇದ #VedhaInCinemasNow #VedhaRunningSuccesfully@NimmaShivanna @NimmaAHarsha @ZeeStudios_@zeestudiossouth@ArjunJanyaMusic pic.twitter.com/fQDIlpqEOo
">ವೇದ ಥಿಯೇಟರ್ ಯಾತ್ರೆಯನ್ನು ಮುಂದುವರೆಸಲು ಸಜ್ಜಾಗಿದ್ದರೆ ನಮ್ಮ ಶಿವಣ್ಣ.... ನೀವೂ ಬರ್ತೀರಾ ಅಲ್ವಾ..?
— Geetha Pictures (@GeethaPictures) January 1, 2023
Book your tickets now:https://t.co/SAAiQe1CCN#VEDHA #ವೇದ #VedhaInCinemasNow #VedhaRunningSuccesfully@NimmaShivanna @NimmaAHarsha @ZeeStudios_@zeestudiossouth@ArjunJanyaMusic pic.twitter.com/fQDIlpqEOoವೇದ ಥಿಯೇಟರ್ ಯಾತ್ರೆಯನ್ನು ಮುಂದುವರೆಸಲು ಸಜ್ಜಾಗಿದ್ದರೆ ನಮ್ಮ ಶಿವಣ್ಣ.... ನೀವೂ ಬರ್ತೀರಾ ಅಲ್ವಾ..?
— Geetha Pictures (@GeethaPictures) January 1, 2023
Book your tickets now:https://t.co/SAAiQe1CCN#VEDHA #ವೇದ #VedhaInCinemasNow #VedhaRunningSuccesfully@NimmaShivanna @NimmaAHarsha @ZeeStudios_@zeestudiossouth@ArjunJanyaMusic pic.twitter.com/fQDIlpqEOo
ಇದನ್ನೂ ಓದಿ: 2023ರ ಸಂಭ್ರಮ: ಚಿತ್ರರಂಗದವರ ಹೊಸ ವರ್ಷಾಚರಣೆ ಚಿತ್ರಗಳಲ್ಲಿ
ಅದ್ಧೂರಿ ಸೆಟ್ನಲ್ಲಿ ಘೋಸ್ಟ್ ಶೂಟಿಂಗ್: ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ನಿರ್ಮಿಸಲಾಗಿರುವ 15ಕ್ಕೂ ಅಧಿಕ ಸೆಟ್ಗಳಲ್ಲಿ 28 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ. ಶಿವರಾಜ್ಕುಮಾರ್, ತೆಲುಗು ನಟ ಜಯರಾಮ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್ ಸೇರಿ ಮುಂತಾದ ಕಲಾವಿದರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಮಾರ್ಗದರ್ಶನದಲ್ಲಿ ಸೆಟ್ಗಳು ನಿರ್ಮಾಣಗೊಂಡಿತ್ತು.
ಇದನ್ನೂ ಓದಿ: ದರ್ಶನ್ ಅಭಿನಯದ 'ಕ್ರಾಂತಿ' ಟ್ರೈಲರ್ ಬಿಡುಗಡೆ ದಿನ ಫಿಕ್ಸ್
ಹೊಸ ವರ್ಷಕ್ಕೆ ಶುಭಾಶಯ: ''ಈ ಹೊಸ ವರ್ಷ ಎಲ್ಲರಿಗೂ ಪ್ರೀತಿ, ಸಂತಸ, ಹೊಸ ಅವಕಾಶ ಹಾಗೂ ಆರೋಗ್ಯ ಆಯಸ್ಸು ತಂದು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಮಸ್ತ ಕನ್ನಡ ಜನತೆಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು'' ನಟ ಶಿವ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.