ETV Bharat / entertainment

ಪತಿ ರಾಜ್ ಕುಂದ್ರಾ ಜೊತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ಯಾರಿಸ್​ ಸಿಕ್ಕಾಬಟ್ಟೆ ಎಂಜಾಯ್​ - ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರು ಪತಿ ರಾಜ್ ಕುಂದ್ರಾ ರೊಂದಿಗೆ ತಮ್ಮ ಬೇಸಿಗೆ ರಜೆಯನ್ನು ಪ್ಯಾರಿಸ್​​ನಲ್ಲಿ ಕಳೆಯುತ್ತಿದ್ದಾರೆ. ಈ ಬಗ್ಗೆ ಚಿತ್ರಗಳು ಮತ್ತು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

shilpa-shetty-vacation-with-hubby-raj-kundra-in-paris-after-arjun-malaika
ಪ್ಯಾರಿಸ್‌ನಲ್ಲಿ ಪತಿ ರಾಜ್ ಕುಂದ್ರಾ ಜೊತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವಿಹಾರ
author img

By

Published : Jul 5, 2022, 8:13 PM IST

ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಸೆಲೆಬ್ರಿಟಿಗಳು ಮತ್ತು ಜೋಡಿಗಳು ಬೇಸಿಗೆ ರಜೆಯನ್ನು ವಿದೇಶಗಳಲ್ಲಿ ಆನಂದಿಸುತ್ತಿದ್ದಾರೆ. ಹೆಚ್ಚಿನ ಸೆಲೆಬ್ರಿಟಿಗಳು ಲಂಡನ್‌ನಲ್ಲಿ ಮತ್ತು ಕೆಲವರು ಪ್ಯಾರಿಸ್‌ನಲ್ಲಿ ತಮ್ಮ ಬೇಸಿಗೆ ರಜೆಯನ್ನು ಆನಂದಿಸಲು ಇಷ್ಟಪಡುತ್ತಿದ್ದಾರೆ. ಸದ್ಯ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ ಕುಂದ್ರಾ ಅವರೊಂದಿಗೆ ಪ್ಯಾರಿಸ್ ನಲ್ಲಿ ತಮ್ಮ ಬೇಸಿಗೆ ರಜೆಯನ್ನು ಆನಂದಿಸುತ್ತಿದ್ದಾರೆ.

ಅಲ್ಲಿನ ಸುಂದರವಾದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ, ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಪ್ಯಾರಿಸ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಹಿಂತಿರುಗಿದ್ದರು.

shilpa-shetty-vacation-with-hubby-raj-kundra-in-paris-after-arjun-malaika
ಪ್ಯಾರಿಸ್‌ನಲ್ಲಿ ಪತಿ ರಾಜ್ ಕುಂದ್ರಾ ಜೊತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವಿಹಾರ

ಶಿಲ್ಪಾ ಶೆಟ್ಟಿ ಪ್ಯಾರಿಸ್‌ನ ಐಫೆಲ್ ಟವರ್‌ನ ಮುಂಭಾಗದಲ್ಲಿ ನಿಂತಿರುವ ಅನೇಕ ಚಿತ್ರ ಮತ್ತು ವೀಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಸಖತ್ ಎಂಜಾಯ್ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋಗಳಿಂದ ಗೊತ್ತಾಗುತ್ತದೆ. ಈ ಹಿಂದೆ ರಾಜ್ ಕುಂದ್ರಾ ಪೋರ್ನ್ ಕೇಸ್ ನಲ್ಲಿ ಸಿಕ್ಕಿಬಿದ್ದ ಬಳಿಕ ಮತ್ತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಹಲವು ಚಿತ್ರಗಳನ್ನು ತಮ್ಮ ಇನ್​​​ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಒಂದು ಸೆಲ್ಫಿ ಚಿತ್ರದಲ್ಲಿ, ಐಫೆಲ್ ಟವರ್ ಮುಂದೆ ನಿಂತಿದ್ದಾರೆ. ಮತ್ತೊಂದು ಚಿತ್ರದಲ್ಲಿ ಪತಿ ರಾಜ್ ಕುಂದ್ರಾ ಜೊತೆ ಕಾಣಿಸಿಕೊಂಡಿದ್ದಾರೆ. ತಮ್ಮ ಚಿತ್ರಗಳಿಗೆ "#parisdiaries" ಎಂಬ ಅಡಿಬರಹ ನೀಡಿದ್ದಾರೆ.

ಫೋಟೋ ಅಲ್ಲದೆ, ಶಿಲ್ಪಾ ಪ್ಯಾರಿಸ್‌ನಿಂದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ಐಫೆಲ್ ಟವರ್ ಬಳಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಈ ಹಿಂದೆ ಶಿಲ್ಪಾ ಲಂಡನ್‌ನ ಬೀದಿಗಳಲ್ಲಿ ನಡೆಯುವಾಗ ತಾಯಿ ಸುನಂದಾ ಶೆಟ್ಟಿ ಅವರೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದರು.

ಓದಿ : ಶರ್ಟ್​ ಬಟನ್ ಬಿಚ್ಚುತ್ತ ಅಭಿಮಾನಿಗಳಲ್ಲಿ ಕಿಚ್ಚು ಹತ್ತಿಸಿದ ವಿಜಯ್ ದೇವರಕೊಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.