ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ರೋಹಿತ್ ಶೆಟ್ಟಿ ಅವರ ಚೊಚ್ಚಲ ವೆಬ್ ಸರಣಿ 'ಕಾಪ್ ಯೂನಿವರ್ಸ್'ನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕರು ಹೇಳಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ, ಆ್ಯಕ್ಷನ್ ಸರಣಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ದೆಹಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಭಾರತೀಯ ಪೊಲೀಸ್ ಪಡೆ, ದೇಶಾದ್ಯಂತದ ಪೊಲೀಸ್ ಅಧಿಕಾರಿಗಳ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ದೇಶಭಕ್ತಿ, ಪ್ರತಿಯೊಬ್ಬರನ್ನು ಸುರಕ್ಷಿತವಾಗಿರಿಸಲು ಅವರು ನಿರ್ವಹಿಸುವ ಕರ್ತವ್ಯವನ್ನು ಈ ವೆಬ್ ಸರಣಿ ಒಳಗೊಂಡಿದೆ. ರೋಹಿತ್ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬಂದೂಕು ಹಿಡಿದಿರುವ ಚಿತ್ರದ ಜೊತೆಗೆ ಶಿಲ್ಪಾ ಶೆಟ್ಟಿ ಅವರಿಗೆ ತಮ್ಮ ತಂಡಕ್ಕೆ ಸ್ವಾಗತ ಕೋರಿದ್ದಾರೆ.
ಶಿಲ್ಪಾ ಶೆಟ್ಟಿ ಕಾಪ್ ಯೂನಿವರ್ಸ್ನಲ್ಲಿ ತಮ್ಮ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದಿನ ವರ್ಷ ಒಟಿಟಿ ಪ್ಲಾಟ್‌ಫಾರ್ಮ್ ಈ ವೆಬ್ ಸರಣಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಮತ್ತೊಂದು ಹೊಸ ಚಿತ್ರದಲ್ಲಿ ಜೊತೆಯಾಗುತ್ತಿರುವ ದೀಪ್ವೀರ್