ಹೈದರಾಬಾದ್: ವಿಭಿನ್ನ ಶೈಲಿಯ ಬ್ಯಾಟಿಂಗ್ ಮೂಲಕ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶಿಖರ್ ಧವನ್ ಇದೀಗ, ಬಾಲಿವುಡ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆಂಬ ವರದಿ ಬಹಿರಂಗಗೊಂಡಿದೆ. ಆದರೆ, ಯಾವ ಚಿತ್ರದಲ್ಲಿ ಅವರು ನಟನೆ ಮಾಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಕೆಲವೊಂದು ಮಾಹಿತಿ ಪ್ರಕಾರ, ಈಗಾಗಲೇ ಸಿನಿಮಾವೊಂದರಲ್ಲಿ ನಟನೆ ಮಾಡಿದ್ದಾರೆ ಎನ್ನಲಾಗ್ತಿದೆ.
- " class="align-text-top noRightClick twitterSection" data="
">
ಲಭ್ಯವಾಗಿರುವ ಮಾಹಿತಿ ಪ್ರಕಾರ, ಶೀಘ್ರದಲ್ಲೇ ಸಿನಿಮಾ ಜಗತ್ತಿಗೆ ಅವರು ಪಾದಾರ್ಪಣೆ ಮಾಡಲಿದ್ದು, ಬಿಗ್ ಬಜೆಟ್ ಚಿತ್ರವೊಂದರಲ್ಲಿ ನಟಿಸಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಆದರೆ, ಮಾಧ್ಯಮಗಳ ವರದಿ ಪ್ರಕಾರ ಶಿಖರ್ ಧವನ್ ಈಗಾಗಲೇ ಚಿತ್ರವೊಂದರಲ್ಲಿ ಭಾಗಿಯಾಗಿ ಶೂಟಿಂಗ್ ಮುಗಿಸಿದ್ದು, ಚಿತ್ರದ ಶೀರ್ಷಿಕೆ ಮತ್ತು ಇತರೆ ವಿಷಯಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಧವನ್ ಈ ಹಿಂದಿನಿಂದಲೂ ನಟನೆ ಬಗ್ಗೆ ಹೆಚ್ಚಿನ ಗೌರವ ಇಟ್ಟುಕೊಂಡಿದ್ದಾರೆ. ಇದೀಗ ತಾವು ನಟನೆ ಮಾಡಲು ಮುಂದಾಗಿರುವ ಚಿತ್ರದಲ್ಲಿ ಧವನ್ ಪಾತ್ರ ಮುಖ್ಯವಾಗಿರಲಿದ್ದು, ಇದೇ ವರ್ಷ ಸಿನಿಮಾ ಕೂಡ ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಮಕ್ಕಳಿಗೋಸ್ಕರ 'ಮಾಹಿ ಪಾಠಶಾಲಾ'.. ಜೂ. 1ರಿಂದ ಬೆಂಗಳೂರಿನಲ್ಲಿ 'ಧೋನಿ ಗ್ಲೋಬಲ್ ಸ್ಕೂಲ್' ಆರಂಭ
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕ್ರಿಕೆಟರ್ ಶಿಖರ್ ಧವನ್, ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ರಾಮ್ಸೇತು ಚಿತ್ರದ ಸೆಟ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಧವನ್ ಬಾಲಿವುಡ್ ಡೆಬ್ಯು ಬಗ್ಗೆ ಸಾಕಷ್ಟು ಮಾತು ಕೇಳಿ ಬಂದಿದ್ದವು. ಆದರೆ, ಅಕ್ಷಯ್ ಕುಮಾರ್ ಅವರನ್ನ ಭೇಟಿಯಾಗಲು ತಾವು ತೆರಳಿದ್ದರು ಎನ್ನಲಾಗಿತ್ತು.
ಇದಾದ ಬಳಿಕ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಸಹ ಧವನ್ ಕಾಣಿಸಿಕೊಂಡಿದ್ದು, ಅದರ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಿಮ್ಮನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು, ನಿಮ್ಮ 83 ಚಿತ್ರಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದರು. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಬ್ಯಾಟ್ ಬೀಸುತ್ತಿರುವ ಶಿಖರ್ ಧವನ್ ರನ್ ಮಳೆ ಹರಿಸುತ್ತಿದ್ದು, ತಾವು ಆಡಿರುವ 13 ಪಂದ್ಯಗಳಿಂದ 421ರನ್ಗಳಿಕೆ ಮಾಡಿದ್ದಾರೆ.