ETV Bharat / entertainment

ಪಂಜಾಬ್​ನಲ್ಲಿ ತಮ್ಮ ಮೊದಲ ಲೋಹ್ರಿ ಹಬ್ಬ ಆಚರಿಸಿದ ಕಾರ್ತಿಕ್ ಆರ್ಯನ್ - ಶೆಹ​​ಜಾದ ಸಿನೆಮಾ

ಬಾಲಿವುಡ್​ ನಟ ಕಾರ್ತಿಕ್ ಆರ್ಯನ್ ಸಹ ನಟಿ ಕೃತಿ ಸನೋನ್ ಅವರೊಂದಿಗೆ ಪಂಜಾಬ್‌ನಲ್ಲಿ ಲೋಹ್ರಿ ಹಬ್ಬವನ್ನು ಆಚರಿಸಿದರು.

shehzada-kartik-aaryan-celebrated-his-first-lohri-in-punjab
ಪಂಜಾಬ್​ನಲ್ಲಿ ತನ್ನ ಮೊದಲ ಲೋಹ್ರಿ ಹಬ್ಬವನ್ನು ಆಚರಿಸಿದ ಕಾರ್ತಿಕ್ ಆರ್ಯನ್
author img

By

Published : Jan 14, 2023, 7:12 PM IST

ಮುಂಬೈ : ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ತಮ್ಮ ಸಹ ನಟರೊಂದಿಗೆ ಲೋಹ್ರಿ ಹಬ್ಬವನ್ನು ಪಂಜಾಬ್​ನ ಜಲಂಧರ್​ನಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ನಟ ಕಾರ್ತಿಕ್​ ಅವರು ಇದೇ ಮೊದಲ ಬಾರಿಗೆ ಪಂಜಾಬ್​ನಲ್ಲಿ ಲೋಹ್ರಿ ಹಬ್ಬವನ್ನು ಆಚರಿಸಿದರು. ಈ ವೇಳೆ ಕಾರ್ತಿಕ್​ ತಮ್ಮ ಸಹನಟರೊಂದಿಗೆ ಭಾಂಗ್ರಾ ನೃತ್ಯ ಮಾಡಿದರು.

ಪಂಜಾಬ್​ನಲ್ಲಿ ಲೋಹ್ರಿ ಆಚರಣೆ : ಹಬ್ಬದ ಆಚರಣೆಯಲ್ಲಿ ಕಾರ್ತಿಕ್​ ಮತ್ತು ಸಹನಟಿ ಕೃತಿ ಸನೊನ್ ​ ಫುಲ್ಕರಿ ದುಪ್ಪಟ್ಟವನ್ನು ಧರಿಸಿ ಮಿಂಚುತ್ತಿದ್ದರು. ಈ ಬಗ್ಗೆ ಸಾಮಾಜಿಕ ತಾಲತಾಣದಲ್ಲಿ ಕಾರ್ತಿಕ್​ ಹಂಚಿಕೊಂಡಿದ್ದು, ಶೆಹ​​ಜಾದ ಸಿನೆಮಾ ತಂಡದ ಪರವಾಗಿ ಲೋಹ್ರಿ ಹಬ್ಬದ ಶುಭಾಶಯಗಳು. ಇದು ಪಂಜಾಬ್‌ನಲ್ಲಿ ನನ್ನ ಮೊದಲ ಲೋಹ್ರಿ ಆಚರಣೆ ಎಂದು ಬರೆದುಕೊಂಡಿದ್ದಾರೆ. ಇನ್ನು ಕಾರ್ತಿಕ್​ ಆರ್ಯನ್​ ಹಾಗೂ ಕೃತಿ ಸನೊನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಶೆಹಜಾದ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನೆಮಾವನ್ನು ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ದಿಗ್ಗಜರಾದ ಪರೇಶ್ ರಾವಲ್, ಮನಿಶಾ ಕೊಯಿರಾಲಾ, ರೋನಿತ್ ರಾಯ್ ಮತ್ತು ಸಚಿನ್ ಖೇಡೇಕರ್ ಮುಂತಾದವರು ನಟಿಸಿದ್ದಾರೆ.

ತೆಲುಗು ಸಿನೆಮಾ ಅಲ ವೈಕುಂಠಪುರಮುಲು ರಿಮೇಕ್ ​: ಈ ಸಿನೆಮಾ 2020ರಲ್ಲಿ ತೆರೆಕಂಡ ತೆಲುಗು ಚಿತ್ರ 'ಅಲ ವೈಕುಂಠಪುರಮುಲು' ಸಿನೆಮಾದ ರಿಮೇಕ್ ಆಗಿದೆ. ಈ ಸಿನೆಮಾದಲ್ಲಿ ಸ್ಟೈಲಿಷ್​​ ಸ್ಟಾರ್​​ ಅಲ್ಲು ಅರ್ಜುನ್​​ ಮತ್ತು ಪೂಜಾ ಹೆಗಡೆ ತೆರೆ ಮೇಲೆ ಮೋಡಿ ಮಾಡಿದ್ದರು.

ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಕರಣ್​ ಜೋಹರ್​: ಶೆಹಜಾದಾ ಸಿನೆಮಾದ ಟ್ರೈಲರ್ ಗುರುವಾರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನೆಮಾಗೆ ಸ್ಟಾರ್ ನಟರು ಮತ್ತು ನಿರ್ದೇಶಕರು ಮತ್ತು ನಿರ್ಮಾಪಕರು ಶುಭ ಕೋರಿದ್ದಾರೆ. ಜೊತೆಗೆ ಬಾಲಿವುಡ್​ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ತಮ್ಮ ಇನ್ಸ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಶೆಹಜಾದ ಸಿನಿಮಾವು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ.

ಫೆಬ್ರವರಿ 10ಕ್ಕೆ ತೆರೆ ಕಾಣಲಿದೆ ಶೆಹಜಾದ : ಮುಂಬೈನಲ್ಲಿ ಶೆಹಜಾದ​ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಕಾರ್ತಿಕ್ ನಿರ್ಮಾಪಕರಾಗಿ ಬಡ್ತಿ ಪಡೆದ ಈ ಚಿತ್ರ ಫೆಬ್ರವರಿ 10 ರಂದು ತೆರೆಮೇಲರ ಬರಲಿದೆ. ಈ ಚಿತ್ರಕ್ಕೆ ಪ್ರೀತಂ ಸಂಗೀತ ಸಂಯೋಜನೆ ಇದೆ. ಇನ್ನು ಕಾರ್ತಿಕ್​ ಆರ್ಯನ್​ ಅವರು 'ಶೆಹಜಾದ' ಜೊತೆಗೆ, 'ಸತ್ಯಪ್ರೇಮ್ ಕಿ ಕಥಾ', ಆಶಿಕಿ 3ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕಬೀರ್ ಖಾನ್ ನಿರ್ದೇಶನದ ಇನ್ನೂ ಹೆಸರಿಡದ ಸಿನೆಮಾದಲ್ಲೂ ನಟಿಸಲಿದ್ದಾರೆ.

ಶೆಹಜಾದ ಆ್ಯಕ್ಷನ್‌ ಡ್ರಾಮಾ ಸಿನೆಮಾವಾಗಿದ್ದು, ಸದ್ಯಕ್ಕೆ ಚಿತ್ರದ ಟೀಸರ್‌ ಮತ್ತು ಟ್ರೈಲರ್​ ಬಿಡುಗಡೆಯಾಗಿದೆ. ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜೊತೆಗೆ ನಟಿ ಕೃತಿ ಸನೋನ್ ಮತ್ತು ಕಾರ್ತಿಕ್ ಆರ್ಯನ್ ಅವರು ಶೆಹಜಾದ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ : ಕರಿ ಹೈದ ಕರಿ ಅಜ್ಜ ಸಿನಿಮಾದಲ್ಲಿ ಹಾಲಿವುಡ್ ನಟ‌ ಸಂದೀಪ್ ಸೋಪರ್ಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.