ಹೈದ್ರಾಬಾದ್: ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಮತ್ತು ನಟಿ ಶೆಹನಾಜ್ ಗಿಲ್ ದೇಶಿ ವೈಬ್ ಟಾಕ್ ಶೋನಲ್ಲಿ ಮಾತಿನ ಹರಟೆ ಹೊಡೆದಿದ್ದಾರೆ. ಈ ವೇಳೆ ತಮ್ಮ ಜೀವನದ ಆಕಾಂಕ್ಷೆಗಳು ಏನು ಎಂಬ ಕುರಿತು ನವಾಜ್ ಶೆಹನಾಜ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಜೀವನದಲ್ಲಿ ತನಗೆ ಬೇಕಾಗಿರುವುದನ್ನೆಲ್ಲಾ ಪ್ರೀತಿಸಬೇಕು ಎಂದಿದ್ದಾರೆ. ಇದೇ ವೇಳೆ ಪ್ರೀತಿ ನಿಮ್ಮ ಬೆನ್ನಿಗೆ ಚೂರಿ ಹಾಕುವ ಗುಣ ಹೊಂದಿದೆ ಎಂದಿದ್ದಾರೆ.
ನಟಿ ಶೆಹನಾಜ್ ಹಾಗೂ ದಿವಂಗತ ನಟ ಸಿದ್ದಾರ್ಥ್ ಶುಕ್ಲಾ ಪ್ರೀತಿಯ ಬಂಧನದಲ್ಲಿದ್ದರು ಎಂಬುದು ಬಹುತೇಕ ಅಭಿಮಾನಿಗಳಿಗೆ ತಿಳಿದ ವಿಷಯ. ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಇವರ ಪ್ರೀತಿ ಗಟ್ಟಿಯಾದ ತಳಹದಿಯನ್ನ ರೂಪಿಸಿತ್ತು. ಇನ್ನೇನು ಈ ಜೋಡಿ ಮದುವೆಯಾಗಬೇಕು ಎಂದು ನಿರ್ಧರಿಸುವ ಮೊದಲೇ ಸಿದ್ದಾರ್ಥ್ ಹೃದಯಾಘಾತಕ್ಕೆ ಒಳಗಾದರು. ಆದರೆ, ಎಂದಿಗೂ ಈ ಜೋಡಿ ತಮ್ಮ ಸಂಬಂಧನ್ನು ಹೊರಜಗತ್ತಿಗೆ ತೋರಿಸಿರಲಿಲ್ಲ. ಆದರೆ, ಸಲ್ಮಾನ್ ಖಾನ್ ಮತ್ತು ಇತರೆ ಆಪ್ತ ವರ್ಗಕ್ಕೆ ಮಾತ್ರ ಈ ವಿಷಯ ಗೊತ್ತಿತ್ತು.
ಇನ್ನು ಕಾರ್ಯಕ್ರಮದಲ್ಲಿ ನವಾಜ್ ಜೊತೆಗೆ ಮಾತು ಮುಂದುವರೆಸಿದ ನಟಿ, ತಾವು ಪ್ರೀತಿಯಲ್ಲಿ ಬಿದ್ದಿರಲಿಲ್ಲ. ಆರಂಭದಲ್ಲಿ ನನ್ನ ಗುರಿ ಕ್ಯಾಮೆರಾ ಮುಂದೆ ಮಾತ್ರ ಬರುವುದಾಗಿತ್ತು ಎಂದಿದ್ದಾರೆ. ಇದೀಗ ಈ ನಟಿ, ಸಿನಿಮಾ ಜೊತೆಗೆ ಹಾಡುಗಾರಿಕೆಯಿಂದ ಕಾರ್ಯಕ್ರಮದ ನಿರೂಪಣೆವರೆಗೆ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ.
ಇನ್ನು, ಇದೇ ವೇಳೆ ನಟಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ನವಾಜ್, ನೀವು ಹೃದಯಾಂತರಾಳದಿಂದ ಮಾಡಬೇಕಾದ ಕಾರ್ಯದ ಬಗ್ಗೆ ಹೇಳಿ ಎಂದಾಗ ಅವರು, ಎರಡು ನಿಮಿಷ ಸುಮ್ಮನಾಗಿ ಪ್ರೀತಿ ಎಂದು ಉತ್ತರಿಸಿದ್ದಾರೆ.
- " class="align-text-top noRightClick twitterSection" data="
">
ಇದಕ್ಕೆ ಪ್ರತಿಕ್ರಿಯಿಸಿದ ನವಾಜ್, ಅದು ಆಗುತ್ತದೆ. ಇದಕ್ಕೆ ಮಾತು ಮುಂದುವರೆಸಿದ ನಟಿ, ಪ್ರೀತಿ ಆದರೆ, ಪ್ರೀತಿ ನೋವು ಕೊಡುತ್ತದೆ. ಈ ನೋವಿನಿಂದ ನನ್ನ ನಟನೆ ಹೊರಬರುತ್ತದೆ ಎಂದಿದ್ದಾರೆ.
ಶೆಹನಾಜ್ ತಮ್ಮನ್ನು ಹಾರ್ಟ್ಬ್ರೋಕನ್ (ಒಡೆದ ಹೃದಯ) ಎಂದು ಕರೆದುಕೊಂಡಿದ್ದು, ನನಗೆ ವಂಚನೆ ಹೇಗೆ ಆಗಿದೆ ಎಂದರೆ, ಅಳುತ್ತಲೇ ಇರುತ್ತೇನೆ. ನನ್ನ ಬಗ್ಗೆ 24 ಗಂಟೆ ಯೋಚಿಸಿದರೆ, ನೀವು ಹುಚ್ಚರಾಗಬಹುದು ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ನವಾಜ್, ಪ್ರತಿಯೊಬ್ಬರ ಪ್ರೀತಿ ಶುದ್ದ. ಪ್ರತಿಯೊಬ್ಬರು ಪ್ರೀತಿ ಮಾಡುವ ರೀತಿ ಬೇರೆಯದ್ದೇ ಆಗಿದೆ ಎಂದರು.
ಸಿದ್ದಾರ್ಥ್ 2021ರಲ್ಲಿ ಅಸುನೀಗಿದ ನಂತರ, ಶೆಹನಾಜ್ ಈ ಕುರಿತು ಎಲ್ಲೂ ಬಹಿರಂಗಪಡಿಸಿಲ್ಲ. ಆದರೆ, ಸಲ್ಮಾನ್ ಖಾನ್, ತಮ್ಮ ಕಿಸಿ ಕಾ ಬಾಯ್ ಕಿಸಿ ಕಿ ಜಾನ್ ಚಿತ್ರದ ಪ್ರಮೋಷನ್ನಲ್ಲಿ ಆದನ್ನು ಮರೆತು, ಮುನ್ನಡೆಯುವಂತೆ ಸಲಹೆ ನೀಡಿದ್ದರು. ಸಲ್ಮಾನ್ ಕೂಡ ಆಕೆಯನ್ನು ಸಂತೋಷವಾಗಿ, ಜೀವನದಲ್ಲಿ ಮುನ್ನಡೆಯಲು, ಮದುವೆಯಾಗಲು ಮತ್ತು ಮಕ್ಕಳನ್ನು ನೋಡಲು ಬಯಸುತ್ತೇನೆ ಎಂದು ತಿಳಿಸಿದ್ದರು. ಇದೇ ವೇಳೆ ಸಿದ್ನಾಜ್ ಅಭಿಮಾನಿಗಳ ವಿರುದ್ಧ ದೂರಿದ ನಟ ಸಲ್ಮಾನ್ ಖಾನ್, ಶೆಹನಾಜ್ ಜೀವನದಲ್ಲಿ ಮುಂದುವರಿಯಲು ಬಿಡಲಿಲ್ಲ ಎಂದು ಆಪಾದಿಸಿದ್ದರು.
ಇದನ್ನೂ ಓದಿ: ನಿರ್ದೇಶಕ ರವಿಪುಡಿಯೊಂದಿಗೆ ತಮನ್ನಾ ಜಗಳ: ಮೌನ ಮುರಿದ ಮಿಲ್ಕಿ ಬ್ಯೂಟಿ