ಹಿಂದಿ ಬಿಗ್ಬಾಸ್ ಮೂಲಕ ಖ್ಯಾತರಾದ ನಟಿ ಶೆಹನಾಜ್ ಗಿಲ್ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ ಕೀರ್ತಿ ಇವರದ್ದು, ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಇವರು ಅಭಿಮಾನಿ ದೇವರುಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಇವರ ಕುರಿತು ಫೋಟೋ, ವಿಡಿಯೋಗಳು ಸದ್ದು ಮಾಡುತ್ತಿರುತ್ತವೆ. ಅಭಿಮಾನಿಗಳು ಇವರ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ ಎಂಬುದು ಈ ವಿಡಿಯೋಗಳನ್ನು ನೋಡಿದರೆ ಗೊತ್ತಾಗುತ್ತದೆ. ಇದೀಗ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ.
ಹೌದು, ಅಭಿಮಾನಿಯೊಬ್ಬರು ಶೆಹನಾಜ್ ಗಿಲ್ ಅವರನ್ನು ಕಂಡೊಡನೆ ಭಾವುಕರಾಗುತ್ತಾರೆ. ಅವರನ್ನು ಸಂತೈಸುವ ಕೆಲಸವನ್ನು ಶೆಹನಾಜ್ ಮಾಡಿದ್ದಾರೆ. ಅಭಿಮಾನಿ ಶೆಹನಾಜ್ ಎದುರು ಮಂಡಿಯೂರಿ ಉಡುಗೊರೆ ನೀಡಲು ಪ್ರಯತ್ನಿಸುತ್ತಾರೆ. ಅವರನ್ನು ತಡೆಯಲು ಬಂದ ಭದ್ರತಾ ಸಿಬ್ಬಂದಿಗೆ ಅಭಿಮಾನಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳದಂತೆ ಶೆಹನಾಜ್ ಸೂಚಿಸುತ್ತಾರೆ.
ಆ ಅಭಿಮಾನಿಯನ್ನು ಅಪ್ಪಿಕೊಂಡು ಸಂತೈಸಿ ಆಕೆ ತಂದ ಉಡುಗೊರೆಯನ್ನು ನಟಿ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲ, ಆ ಅಭಿಮಾನಿ ತನ್ನ ಕೈಯಲ್ಲಿದ್ದ ಉಂಗುರ ಕೊಡಲು ಹೋದಾಗ ಅದನ್ನು ತಡೆದ ಶೆಹನಾಜ್, ಅವರಿಗೆ ಪ್ರೀತಿಯ ಅಪ್ಪುಗೆ, ಸಿಹಿಮುತ್ತು ಕೊಟ್ಟು ಸಮಾಧಾನ ಪಡಿಸುತ್ತಾರೆ.
ಇದನ್ನೂ ಓದಿ: ಸಿದ್ಧಾರ್ಥ್ ಶುಕ್ಲಾಗೆ ಧನ್ಯವಾದ ಅರ್ಪಿಸಿದ ಶೆಹನಾಜ್ ಗಿಲ್: ವಿಡಿಯೋ
ಈ ಹಿಂದೆ ನಟಿ ದುಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭಕ್ಕೆ ತೆರಳಿದ್ದ ವೇಳೆಯೂ ಅವರನ್ನು ನೋಡಲೆಂದೇ ದೂರದ ದೇಶಗಳಿಂದ ಅಭಿಮಾನಿಗಳು ಬಂದಿದ್ದರು. ಅಲ್ಲಿಯೂ ಅಭಿಮಾನಿಗಳೊಂದಿಗೆ ಶೆಹನಾಜ್ ಉತ್ತಮ ಸಮಯ ಕಳೆದಿದ್ದರು.