ETV Bharat / entertainment

ಶರಣ್​ ನಟನೆಯ 'ಛೂ ಮಂತರ್' ಚಿತ್ರದ ಟೈಟಲ್​ ಟ್ರ್ಯಾಕ್ ಅನಾವರಣಗೊಳಿಸಿದ ಕ್ರೇಜಿಸ್ಟಾರ್​ - ಈಟಿವಿ ಭಾರತ ಕನ್ನಡ

ನಟ ಶರಣ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಛೂ ಮಂತರ್' ಚಿತ್ರದ ಟೈಟಲ್​ ಟ್ರ್ಯಾಕ್​ ಅನ್ನು ಕ್ರೇಜಿಸ್ಟಾರ್​ ರವಿಚಂದ್ರನ್​ ಬಿಡುಗಡೆಗೊಳಿಸಿದರು.

Sharan starrer Chu mantar movie title track out
ಶರಣ್​ ನಟನೆಯ 'ಛೂ ಮಂತರ್' ಚಿತ್ರದ ಟೈಟಲ್​ ಟ್ರ್ಯಾಕ್ ಅನಾವರಣಗೊಳಿಸಿದ ಕ್ರೇಜಿಸ್ಟಾರ್​
author img

By ETV Bharat Karnataka Team

Published : Sep 12, 2023, 12:52 PM IST

ವಿಭಿನ್ನ ಕಾಮಿಡಿ ಸ್ಟೈಲ್​ನಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ಶರಣ್​. 'ಅವತಾರ ಪುರುಷ' ಚಿತ್ರದ ಬಳಿಕ ಶರಣ್​ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸಸ್ಪೆನ್ಸ್​ ಥ್ರಿಲ್ಲರ್​ 'ಛೂ ಮಂತರ್'​ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಶರಣ್​ ಸಜ್ಜಾಗಿದ್ದಾರೆ. ಸೈಲೆಂಟ್​ ಆಗಿ ಶೂಟಿಂಗ್​ ಮುಗಿಸಿ ಬಿಡುಗಡೆಗೆ ತಯಾರಾಗಿರುವ ಈ ಸಿನಿಮಾಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ಸಾಥ್​ ನೀಡಿದ್ದಾರೆ.

Sharan starrer Chu mantar movie title track out
ಶರಣ್​ ಮತ್ತು ಅದಿತಿ ಪ್ರಭುದೇವ

ಶರಣ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಛೂ ಮಂತರ್' ಚಿತ್ರದ ಟೈಟಲ್​ ಟ್ರ್ಯಾಕ್​ ಅನ್ನು ರವಿಚಂದ್ರನ್​ ಬಿಡುಗಡೆಗೊಳಿಸಿದರು. ಆನಂದ್​ ಆಡಿಯೋ ಯೂಟ್ಯೂಬ್​ ಚಾನಲ್​ನಲ್ಲಿ ಹಾಡು ಬಿಡುಗಡೆಯಾಗಿದೆ. ಬಳಿಕ ಮಾತನಾಡಿದ ರವಿಚಂದ್ರನ್​, "ಚಿತ್ರತಂಡದವರ ಮಾತು ಕೇಳಿದಾಗ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ಎಲ್ಲಾ ಲಕ್ಷಣಗಳು ಇದೆ. ಶರಣ್ ಒಬ್ಬ ಒಳ್ಳೆಯ ನಟ. ಚಂದನ್ ಶೆಟ್ಟಿ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡು ತುಂಬಾ ಚೆನ್ನಾಗಿದೆ. ನಿರ್ಮಾಪಕ ತರುಣ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ" ಎಂದು ಶುಭಹಾರೈಸಿದರು.

Sharan starrer Chu mantar movie title track out
ಶರಣ್​ ನಟನೆಯ 'ಛೂ ಮಂತರ್' ಚಿತ್ರದ ಟೈಟಲ್​ ಟ್ರ್ಯಾಕ್ ಅನಾವರಣಗೊಳಿಸಿದ ಕ್ರೇಜಿಸ್ಟಾರ್​

ಬಳಿಕ ನಟ ಶರಣ್​ ಮಾತನಾಡಿ, "ನಾನು ನಾಯಕ ನಟನಾಗಲು ರವಿ ಸರ್​ ಕಾರಣ. ನಾನು ಅವರೊಂದಿಗೆ ಹಠವಾದಿ ಚಿತ್ರದಲ್ಲಿ ಅಭಿನಯಿಸಬೇಕಾದರೆ, ನೀನು ಇನ್ನು ನಾಯಕನಾಗಿಲ್ವಾ? ಎಂದು ಕೇಳಿದ್ದರು. ಯಾವತ್ತೂ ನಾಯಕನಾಗಬೇಕು ಅಂದುಕೊಂಡಿರದ ನಾನು ಅವರು ಹೇಳಿದ್ದು ಕೇಳಿ ಎರಡು ವರ್ಷಗಳಲ್ಲಿ ಹೀರೋ ಆದೆ. ಅಷ್ಟು ಒಳ್ಳೆಯ ಮನಸ್ಸು ರವಿ ಸರ್​ ಅವರದ್ದು. ಇಂದು ನಮ್ಮ ಚಿತ್ರದ ಹಾಡನ್ನು ಅವರು ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಈ ಹಾಡಿನ ಬಗ್ಗೆ ಹೇಳಬೇಕಾದರೆ, ಚಂದನ್ ಶೆಟ್ಟಿ ಅಮೋಘವಾಗಿ ಹಾಡಿದ್ದಾರೆ‌. ವಿಜಯ್ ಈಶ್ವರ್ ಈ ಹಾಡನ್ನು ಬರೆದಿದ್ದು, ದರ್ಶಿನಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾನು, ಚಿಕ್ಕಣ್ಣ ಹಾಗೂ ಅದಿತಿ ಪ್ರಭುದೇವ ಅಭಿನಯಿಸಿದ್ದೇವೆ‌" ಎಂದು ಹೇಳಿದರು.

ಅದಿತಿ ಪ್ರಭುದೇವ, ಶರಣ್​ ಮತ್ತು ಮೇಘನಾ ಗಾಂವ್ಕರ್

"ನಾನು ರವಿ ಸರ್ ಅವರಿಗೆ ಕೆಲವು ದಿನಗಳ ಹಿಂದೆ ಟೀಸರ್ ತೋರಿಸಿದ್ದೆ. ಟೈಟಲ್ ಟ್ರ್ಯಾಕ್​ನ್ನು ನೀವೇ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದೆ. ಇಂದು ರವಿಚಂದ್ರನ್ ಸರ್ ಬಂದು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರವಿ ಸರ್ ಅವರಿಗೆ, ಈ ಚಿತ್ರದ ಟೈಟಲ್ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಾಗೂ ಕಥೆ ಮೆಚ್ಚಿ ಪ್ರೋತ್ಸಾಹ ನೀಡಿದ ತರುಣ್ ಸುಧೀರ್ ಅವರಿಗೆ ಈ ಸಂದರ್ಭದಲ್ಲಿ ನಾನು ಧನ್ಯವಾದ ತಿಳಿಸುತ್ತೇನೆ. ಇಂದು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಕೂಡ ಬರಲಿದೆ" ಎಂದು ನಿರ್ಮಾಪಕ ತರುಣ್​ ಶಿವಪ್ಪ ತಿಳಿಸಿದರು.

ಚಿತ್ರತಂಡ ಹೀಗಿದೆ.. ಚಿತ್ರದಲ್ಲಿ ಶರಣ್ ಜೊತೆ ನಟಿಯರಾದ ‌ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ಅಭಿನಯಿಸಿದ್ದು, ಚಿಕ್ಕಣ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ನವನೀತ್ ನಿರ್ದೇಶನ ಮಾಡಿದ್ದು, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೂಪ್ ಅವರ ಛಾಯಾಗ್ರಹಣ, ದರ್ಶಿನಿ ನೃತ್ಯ ಸಂಯೋಜನೆ, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಸಿನಿಮಾ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ಒತ್ತಾಯಕ್ಕೆ ಮಣಿದ ರಿಯಲ್​ ಸ್ಟಾರ್​: 'ಯುಐ' ಚಿತ್ರದ ಟೀಸರ್​ಗೆ ಮುಹೂರ್ತ ಫಿಕ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.