ETV Bharat / entertainment

ಭಾರಿ ಭದ್ರತೆಯೊಂದಿಗೆ ಮುಂಬೈನ ದ್ವೀಪದಲ್ಲಿ ಸಲ್ಮಾನ್​ ಶಾರುಖ್​ ಸಿನಿಮಾ ಶೂಟಿಂಗ್​ - salman khan

ಸಲ್ಮಾನ್ ಮತ್ತು​ ಶಾರುಖ್​ ಮುಂಬೈನಲ್ಲಿ ಟೈಗರ್ 3 ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

shahrukh salman shooting
ಸಲ್ಮಾನ್​ ಶಾರುಖ್​ ಸಿನಿಮಾ ಶೂಟಿಂಗ್​
author img

By

Published : May 11, 2023, 7:16 PM IST

ಬ್ಲಾಕ್ ಬಸ್ಟರ್ ಸಿನಿಮಾ 'ಪಠಾಣ್' ನಂತರ ಬಾಲಿವುಡ್​ ಕಿಂಗ್​​ ಶಾರುಖ್ ಖಾನ್ ಮತ್ತು ಬ್ಯಾಚುಲರ್​​ ಸಲ್ಮಾನ್ ಖಾನ್ ಕಾಂಬೋ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಶಾರುಖ್ ಖಾನ್ 'ಟೈಗರ್-3' ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ಮುಂಬೈನ ಮಧ್ ದ್ವೀಪದಲ್ಲಿ ಹೆಚ್ಚಿನ ಭದ್ರತೆಯೊಂದಿಗೆ ಸಲ್ಮಾನ್ ಖಾನ್ ಅವರ 'ಟೈಗರ್ 3' ಚಿತ್ರದಲ್ಲಿ ಶಾರುಖ್ ಖಾನ್ ತಮ್ಮ ಅತಿಥಿ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಶಾರುಖ್ ಖಾನ್ ಕಳೆದ ಹಲವು ದಿನಗಳಿಂದ ಈ ಚಿತ್ರಕ್ಕಾಗಿ ಡೇಟ್​ ಫೈನಲ್​ ಮಾಡುವ ಯೋಚನೆಯಲ್ಲಿದ್ದರು. ಈಗಾಗಲೇ ಶೂಟಿಂಗ್​ ಆರಂಭಗೊಂಡಿದ್ದು, ಸುಮಾರು ಒಂದು ವಾರದ ಶೆಡ್ಯೂಲ್​ ಫಿಕ್ಸ್​ ಆಗಿದೆ.

ವರದಿಗಳ ಪ್ರಕಾರ, ಚಲನಚಿತ್ರ ನಿರ್ಮಾಪಕರು ಮಧ್ ಐಸ್‌ಲ್ಯಾಂಡ್‌ನಲ್ಲಿ ಭಾರಿ ಭದ್ರತೆಯೊಂದಿಗೆ ಚಿತ್ರೀಕರಣ ನಡೆಸುತ್ತಿದ್ದಾರೆ. ಇಲ್ಲಿ 35 ಕೋಟಿ ರೂಪಾಯಿ ವೆಚ್ಚದ ಸೆಟ್​​ನಲ್ಲಿ ಆ್ಯಕ್ಷನ್ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಏಳು ದಿನಗಳಲ್ಲಿ ಈ ದೃಶ್ಯ ಪೂರ್ಣಗೊಳ್ಳಲಿದೆ. 35 ಕೋಟಿ ವೆಚ್ಚದ ಈ ದೃಶ್ಯವನ್ನು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಜೊತೆಯಾಗಿ ಚಿತ್ರೀಕರಿಸಬೇಕಿದೆ. ಕಳೆದ ಹಲವು ದಿನಗಳಿಂದ ಈ ಹೈ ಬಜೆಟ್​​ ದೃಶ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಆದಿತ್ಯ ಚೋಪ್ರಾ ನಿರ್ಮಾಣದಲ್ಲಿ 'ಟೈಗರ್-3' ನಿರ್ಮಾಣಗೊಳ್ಳುತ್ತಿದೆ. ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಯಶ್​ ರಾಜ್​ ಫಿಲ್ಮ್ಸ್ ಅಡಿ ರೆಡಿಯಾಗುತ್ತಿರುವ ಈ ಚಿತ್ರಕ್ಕೆ ಸಾಕಷ್ಟು ಸಮಯ, ಹಣ ಮೀಸಲಿಡಲಾಗಿದೆ. ಹಾಗಾಗಿ ಈ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ.

ಮನೀಶ್ ಶರ್ಮಾ ಆ್ಯಕ್ಷನ್​ ಕಟ್​​ ಹೇಳುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್​ ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇಮ್ರಾನ್ ಹಶ್ಮಿ ವಿಲನ್​ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ಇಮ್ರಾನ್ ಹಶ್ಮಿ ತೆರೆ ಮೇಲೆ ಮುಖಾಮುಖಿಯಾಗಲಿದ್ದಾರೆ. ಟೈಗರ್ 3 ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ಹಿಂದಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಮುಖ್ಯಾಂಶ ಬರೆಯುವ ಪತ್ರಕರ್ತೆಯೇ ಹೆಡ್​​ಲೈನ್': Scoop ಸೀರಿಸ್​ ಪ್ರಸಾರಕ್ಕೆ ದಿನ ನಿಗದಿ

'ಟೈಗರ್ 3' ಈ ಆ್ಯಕ್ಷನ್​ ಸಿನಿಮಾದ ಮೂರನೇ ಕಂತು. 2012ರಲ್ಲಿ ಮೊದಲ ಭಾಗ ತೆರೆಕಂಡಿತ್ತು. 'ಏಕ್ ಥಾ ಟೈಗರ್' ಶೀರ್ಷಿಕೆಯ ಟೈಗರ್​ 1 ಅನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದರು. ಟೈಗರ್ ಜಿಂದಾ ಹೈ ಟೈಟಲ್​ನ ಟೈಗರ್​ 2 ಚಿತ್ರ 2017ರಲ್ಲಿ ತೆರೆ ಕಂಡಿತ್ತು. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಎರಡನೇ ಭಾಗ ಮೂಡಿ ಬಂದಿತ್ತು. ಟೈಗರ್ 3 ಮನೀಶ್​ ಶರ್ಮಾ ನಿರ್ದೇಶನದಲ್ಲಿ ತಯಾರಾಗುತ್ತಿದ್ದು, ಈ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ನಿರೀಕ್ಷೆ ಹೊಂದಲಾಗಿದೆ. ಈ ಮೂರೂ ಭಾಗಗಳಲ್ಲೂ ಕತ್ರಿನಾ ಕೈಫ್​ ಮತ್ತು ಸಲ್ಮಾನ್​ ಖಾನ್​ ಸ್ಕ್ರೀನ್​ ಶೇರ್ ಮಾಡಿದ್ದು, ಇಮ್ರಾನ್​ ಹಶ್ಮಿ ಹೊಸ ಸೇರ್ಪಡೆ. ​​

ಇದನ್ನೂ ಓದಿ: 'ನಾನೆಂದಿಗೂ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿಲ್ಲ': ಕಂಗನಾ ರಣಾವತ್​ ಹೀಗಂದಿದ್ದೇಕೆ?!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.