ETV Bharat / entertainment

ಮೆಕ್ಕಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಟ ಶಾರುಖ್ ಖಾನ್: ಫೋಟೋಗಳು ವೈರಲ್‌ - ಶಾರುಖ್ ಖಾನ್ ವೈರಲ್​ ಫೋಟೋ

ಮುಸ್ಲಿಂ ಧರ್ಮೀಯರ ಪವಿತ್ರ ಸ್ಥಳವಾದ ಮೆಕ್ಕಾಗೆ ಬಾಲಿವುಡ್ ನಟ ಶಾರುಖ್ ಖಾನ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Shah Rukh Khan visits Mecca
ಮೆಕ್ಕಾಗೆ ಭೇಟಿ ನೀಡಿದ ಶಾರುಖ್ ಖಾನ್
author img

By

Published : Dec 2, 2022, 12:27 PM IST

ಬಾಲಿವುಡ್ ನಟ ಶಾರುಖ್ ಖಾನ್ ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ 'ಡಂಕಿ' ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಬಳಿಕ ಅವರು ಮೆಕ್ಕಾ ತಲುಪಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರ ಮೆಕ್ಕಾ ಪ್ರವಾಸದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ವೈರಲ್​ ಚಿತ್ರದಲ್ಲಿ, ಶಾರುಖ್​ ಬಿಳಿ ಉಡುಗೆ, ಫೇಸ್​ ಮಾಸ್ಕ್​​ ಧರಿಸಿರುವುದನ್ನು ಕಾಣಬಹುದು. ಉಮ್ರಾ ನಂತರ ಶಾರುಖ್ ರೆಡ್ ಸೀ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು.

ಶಾರುಖ್ ಖಾನ್ ಅವರ ಅಭಿಮಾನಿಗಳು ಮೆಕ್ಕಾದಿಂದ ವೈರಲ್​​ ಆದ ಚಿತ್ರಗಳನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಶಾರುಖ್‌ ಅವರನ್ನು ಈ ಸ್ಟೈಲ್‌ನಲ್ಲಿ ನೋಡಿಲ್ಲ ಎಂದು ಹಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಸೌದಿ ಅರೇಬಿಯಾದ ಪತ್ರಕರ್ತರೊಬ್ಬರು ಟ್ವೀಟ್ ಮೂಲಕ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅಲ್ಲಿ ಅವರ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಶಾರುಖ್​ಗೆ ಅಲ್ಲಾ ಒಳ್ಳೆಯದು ಮಾಡಲಿ ಎಂದು ಅಭಿಮಾನಿಗಳು ಹರಸಿದ್ದಾರೆ.

ಮೆಕ್ಕಾಗೆ ಭೇಟಿ ನೀಡಿದ ಇತರೆ ಸೆಲೆಬ್ರಿಟಿಗಳು: ಬಾಲಿವುಡ್‌ನಲ್ಲಿ ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಸನಾ ಖಾನ್ ಮತ್ತು ಪತಿ ಮೌಲಾನಾ ಮುಫ್ತಿ ಸಯ್ಯದ್ ಅವರೊಂದಿಗೆ ಈ ವರ್ಷದ ಏಪ್ರಿಲ್‌ನಲ್ಲಿ ಮೆಕ್ಕಾಗೆ ಹೋಗಿ ಹಜ್ ಯಾತ್ರೆ ಭಾಗಿಯಾಗಿದ್ದರು. ಕಿರುತೆರೆಯ ಖ್ಯಾತ ನಟಿ ಹಾಗೂ ಮಾಜಿ ಬಿಗ್ ಬಾಸ್ ವಿನ್ನರ್ ಗೌಹರ್ ಖಾನ್ ಕೂಡ ಮೆಕ್ಕಾ-ಮದೀನಾಕ್ಕೆ ಈ ಹಿಂದೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು. ಮಾಡಲ್​​ ಗೌಹರ್ ಖಾನ್ ಈ ವರ್ಷದ ಏಪ್ರಿಲ್‌ನಲ್ಲಿ ಇಡೀ ಕುಟುಂಬದೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದರು.

ಬಾಲಿವುಡ್ ನಟ ಅಲಿ ಫಜಲ್ ಅವರು ಬಾಲಿವುಡ್ ನಟಿ ಮತ್ತು ರಿಚಾ ಚಡ್ಡಾ ಅವರನ್ನು ಅಕ್ಟೋಬರ್ 4 ರಂದು ವಿವಾಹವಾದರು. ಮದುವೆಗೂ ಮುನ್ನ ಈ ವರ್ಷದ ಜನವರಿಯಲ್ಲಿ, ಅಲಿ ಫಜಲ್ ಅವರು ಹಜ್ ಯಾತ್ರೆಯ ಚಿತ್ರಗಳನ್ನು ಹಂಚಿಕೊಂಡಿದ್ದರು.

2012ರಲ್ಲಿ, ಬಾಲಿವುಡ್ ನಟ ಅಮೀರ್ ಖಾನ್ ತನ್ನ ತಾಯಿ ಝೀನತ್ ಹುಸೈನ್ ಅವರೊಂದಿಗೆ ಮೆಕ್ಕಾಗೆ ಬಂದಿದ್ದರು. ಮಾಹಿತಿ ಪ್ರಕಾರ, ಅಮೀರ್ ತನ್ನ ತಾಯಿಗೆ ಈ ಪವಿತ್ರ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದರು, ಅದನ್ನು ಅವರು ಈಡೇರಿಸಿದ್ದಾರೆ.

ಇದನ್ನೂ ಓದಿ: ಸೌದಿ ಅರೇಬಿಯಾ ಶೂಟಿಂಗ್​ ಮುಗಿಸಿದ ಶಾರುಖ್​ ಖಾನ್​ ಅಭಿನಯದ 'ಡುಂಕಿ'

ಇವರುಗಳಲ್ಲದೇ, ಹಿಂದಿ ಚಿತ್ರರಂಗದ ದಿವಂಗತ ಹಿರಿಯ ನಟರಾದ ದಿಲೀಪ್ ಕುಮಾರ್ ಮತ್ತು ಖಾದರ್ ಖಾನ್ ಕೂಡ ತಮ್ಮ ಜೀವಿತಾವಧಿಯಲ್ಲಿ ಹಜ್ ಯಾತ್ರೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.