'ಪಠಾಣ್' ಯಶಸ್ಸಿನ ಬಳಿಕ ಶಾರುಖ್ ಖಾನ್ ಸದ್ಯ ಡಂಕಿ (Dunki) ಸಿನಿಮಾದ ಜಪ ಮಾಡುತ್ತಿದ್ದಾರೆ. ತಾಪ್ಸಿ ಪನ್ನು ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರೀಕರಣದ ಸಲುವಾಗಿ ಕಾಶ್ಮೀರದಲ್ಲಿದ್ದಾರೆ. ಕಾಶ್ಮೀರಕ್ಕೆ ಖಾನ್ ಭೇಟಿಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 11 ವರ್ಷಗಳ ನಂತರ ಕಾಶ್ಮೀರಕ್ಕೆ ಆಗಮಿಸಿದ ಎಸ್‌ಆರ್‌ಕೆ ಅವರಿಗೆ ಅಭಿಮಾನಿಗಳು ಆತ್ಮೀಯ ಸ್ವಾಗತ ಕೋರಿದ್ದಾರೆ.
-
#ShahRukhKhan spotted entering hotel in Sonamarg ♥️🔥pic.twitter.com/qk9GA7Zrm1
— Shah Rukh Khan Warriors FAN Club (@TeamSRKWarriors) April 24, 2023 " class="align-text-top noRightClick twitterSection" data="
">#ShahRukhKhan spotted entering hotel in Sonamarg ♥️🔥pic.twitter.com/qk9GA7Zrm1
— Shah Rukh Khan Warriors FAN Club (@TeamSRKWarriors) April 24, 2023#ShahRukhKhan spotted entering hotel in Sonamarg ♥️🔥pic.twitter.com/qk9GA7Zrm1
— Shah Rukh Khan Warriors FAN Club (@TeamSRKWarriors) April 24, 2023
ಕಾಶ್ಮೀರದಲ್ಲಿ ಸೂಪರ್ ಸ್ಟಾರ್ ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದರು. ನಟ ಈ ಸ್ಥಳದೊಂದಿಗೆ, ಜನರೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ದಿವಂಗತ ನಿರ್ದೇಶಕ ಯಶ್ ಚೋಪ್ರಾ ಅವರ ಕೊನೆಯ ಚಲನಚಿತ್ರವಾದ ಜಬ್ ತಕ್ ಹೈ ಜಾನ್ ಚಿತ್ರದ ಚಿತ್ರೀಕರಣಕ್ಕಾಗಿ ಶಾರುಖ್ ಖಾನ್ ಸುಮಾರು 11 ವರ್ಷಗಳ ಹಿಂದೆ ಕಾಶ್ಮೀರಕ್ಕೆ ಬಂದಿದ್ದರು. 11 ವರ್ಷಗಳ ಹಿಂದೆ ಶಾರುಖ್ ಕಾಶ್ಮೀರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರಿಂದ ಈ ಬಾರಿ ಅವರನ್ನು ನೋಡಲು ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿ ಆಗಮಿಸಿದ್ದರು.
ಅವರ ಕಾಶ್ಮೀರದ ವಿಡಿಯೋಗಳೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೆಟ್ಟಿಗರು, ಅಭಿಮಾನಿಗಳು ನಟನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವುದರ ಜೊತೆಗೆ, ಡಂಕಿ ಸಿನಿಮಾ ಮೇಲೆ ಸಾಕಷ್ಟು ಕುತೂಹಲ ಹೊಂದಿದ್ದಾರೆ. ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಕಾಮೆಂಟ್ ವಿಭಾಗಕ್ಕೂ ಎಂಟ್ರಿಕೊಟ್ಟಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಫೈಯರ್ ಮತ್ತು ಕೆಂಪು ಹೃದಯದ ಎಮೋಜಿಗಳನ್ನು ಹೆಚ್ಚು ಬಳಸಿದ್ದಾರೆ.
-
Latest: #ShahRukhKhan Sonemarg Kashmir For Dunki Shoot 🔥@iamsrk welcome to Kashmir Khan Sahab 🙏❤pic.twitter.com/2TZKVI447u
— Shahrukh Girlfriend (@Neeta11shahrukh) April 25, 2023 " class="align-text-top noRightClick twitterSection" data="
">Latest: #ShahRukhKhan Sonemarg Kashmir For Dunki Shoot 🔥@iamsrk welcome to Kashmir Khan Sahab 🙏❤pic.twitter.com/2TZKVI447u
— Shahrukh Girlfriend (@Neeta11shahrukh) April 25, 2023Latest: #ShahRukhKhan Sonemarg Kashmir For Dunki Shoot 🔥@iamsrk welcome to Kashmir Khan Sahab 🙏❤pic.twitter.com/2TZKVI447u
— Shahrukh Girlfriend (@Neeta11shahrukh) April 25, 2023
ವೈರಲ್ ವಿಡಿಯೋಗಳಲ್ಲಿ, ಸೋನ್ಮಾರ್ಗ್ ಹೋಟೆಲ್ ಬಳಿ ಕಿಂಗ್ ಖಾನ್ ಅವರನ್ನು ಸ್ವಾಗತಿಸುತ್ತಿರುವುದು ಕಂಡುಬರುತ್ತದೆ. ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ, ಬಿಳಿ ಶಾಲು ಹಾಕಿಕೊಂಡಿದ್ದರು. ಸುಂದರ ಹೂಗುಚ್ಛ ನೋಡಿ ಪಠಾಣ್ ನಟನನ್ನು ಸ್ವಾಗತಿಸಲಾಗಿದೆ. ಶಾರುಖ್ ಅಭಿಮಾನಿಗಳಿಂದ ಹೂವುಗಳು ಮತ್ತು ಶಾಲು ಸ್ವೀಕರಿಸಿದರು. ನಟನ ಜೊತೆಯಲ್ಲಿ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡಾ ಉಪಸ್ಥಿತರಿದ್ದರು.
ಶಾರುಖ್ ಖಾನ್ ಕಣಿವೆ ಪ್ರದೇಶದಲ್ಲಿ ಡಂಕಿ ಚಿತ್ರದ ಚಿತ್ರೀಕರಣ ನಡೆಸಲಿದ್ದಾರೆ. ವರದಿಗಳ ಪ್ರಕಾರ, ಚಿತ್ರದಲ್ಲಿ ಅವರು ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ದೀಪಿಕಾ ಪಡುಕೋಣೆ ಜೊತೆಗೆ ನಟಿಸಿ ಇತ್ತೀಚೆಗೆ ತೆರೆಕಂಡ ಪಠಾಣ್ ಯಶಸ್ಸಿನಲ್ಲಿದ್ದಾರೆ. ನಾಲ್ಕು ವರ್ಷಗಳ ಬ್ರೇಕ್ ನಂತರ ಮರಳಿರುವ ಎಸ್‌ಆರ್‌ಕೆ ಡಂಕಿ ಅಲ್ಲದೇ ಜವಾನ್ ಸಿನಿಮಾ ಸಲುವಾಗಿಯೂ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಶಾರುಖ್ ಪುತ್ರನ ಬಟ್ಟೆ ಬ್ರ್ಯಾಂಡ್ ಜಾಹೀರಾತು: ತಂದೆಗೆ ಆ್ಯಕ್ಷನ್ ಕಟ್ ಹೇಳಿದ ಮಗ
ಪಠಾಣ್ ಸಿನಿಮಾ ಮೂಲಕ ಅವರ ಪುನರಾಗಮನವನ್ನು ಅಭಿಮಾನಿಗಳು ಭರ್ಜರಿಯಾಗಿ ಬರಮಾಡಿಕೊಂಡರು. ಟೀಕೆ, ಟ್ರೋಲ್ಗಳಿಂದಲೇ ಸದ್ದು ಮಾಡಿದ್ದ ಸಿನಿಮಾವನ್ನು ಅಭಿಮಾನಿಗಳು ಗೆಲ್ಲಿಸಿಕೊಟ್ಟರು. ಪಠಾಣ್ ಯಶಸ್ಸಿನ ಬಳಿಕ ಅಭಿಮಾನಿಗಳು, ಜವಾನ್ ಮತ್ತು ಡಂಕಿ ಮೇಲೆ ಕಣ್ಣಿಟ್ಟಿದ್ದಾರೆ. ಹೊಸ ಅವತಾರದಲ್ಲಿ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಆಸ್ಕರ್ 2024 ಪ್ರಶಸ್ತಿ ಸಮಾರಂಭಕ್ಕೆ ಮುಹೂರ್ತ ನಿಗದಿ: ಪ್ರಮುಖ ದಿನಾಂಕಗಳ ಪಟ್ಟಿ ಹೀಗಿದೆ..