ETV Bharat / entertainment

'ಪಠಾಣ್' ಪೋಸ್ಟರ್ ರಿಲೀಸ್.. ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು - Shah Rukh khan movies

'ಪಠಾಣ್' ಚಿತ್ರದ ಹೊಸ ಪೋಸ್ಟರ್ ರಿಲೀಸ್​ ಆಗಿದೆ.

Pathaan New Poster released
ಪಠಾಣ್ ಪೋಸ್ಟರ್ ರಿಲೀಸ್
author img

By

Published : Dec 6, 2022, 2:13 PM IST

ಬಾಲಿವುಡ್​ ಸೂಪರ್​ ಸ್ಟಾರ್​​ ಶಾರುಖ್​ ಖಾನ್​ ಅವರ ಬಹು ನಿರೀಕ್ಷಿತ 'ಪಠಾಣ್' ಚಿತ್ರದ ಹೊಸ ಪೋಸ್ಟರ್ ರಿಲೀಸ್​ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಪಠಾಣ್' ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರ 2023ರ ಜನವರಿ 26ರ ಗಣರಾಜ್ಯೋತ್ಸವಕ್ಕೂ ಮುನ್ನ ಬಿಡುಗಡೆಯಾಗಲಿದೆ. ಚಿತ್ರದ ಟೀಸರ್, ಹಲವು ಪೋಸ್ಟರ್​ಗಳು ರಿಲೀಸ್ ಆಗಿದ್ದು, ಚಿತ್ರದ ಮೇಲಿನ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ನಾಲ್ಕು ವರ್ಷಗಳ ನಂತರ ಶಾರುಖ್​ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳ ಕುತೂಹಲ ಹಚ್ಚಳಕ್ಕೆ ಪ್ರಮುಖ ಕಾರಣ. ಅದು ಕೂಡ ಆ್ಯಕ್ಷನ್ ಅವತಾರದಲ್ಲಿ. ಇದೀಗ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ಶಾರುಖ್ ಖಾನ್ ಕೈಯಲ್ಲಿ ಗನ್ ಹಿಡಿದು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಫಿಫಾ ಟ್ರೋಫಿ ಅನಾವರಣಗೊಳಿಸಲಿದ್ದಾರೆ ದೀಪಿಕಾ ಪಡುಕೋಣೆ

ಯಶ್ ರಾಜ್ ಬ್ಯಾನರ್ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, 'ಅವರು ಯಾವಾಗಲೂ ಹೋರಾಡಲು ಶಾಟ್ ಗನ್ ಪಡೆಯುತ್ತಾರೆ' ಎಂದು ಬರೆಯಲಾಗಿದೆ. ಶೀಘ್ರದಲ್ಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಠಾಣ್ ಸಿನಿಮಾ ಬಿಡುಗಡೆ ಅಗಲಿದೆ.

ಇದನ್ನೂ ಓದಿ: ಹಾಲಿವುಡ್​ ಸಿನಿಮಾ 'ಬೀಸ್ಟ್​' ಪೋಸ್ಟರ್​ನ ಕಾಪಿ ಮಾಡಿದ್ಯಾ 'ಪಠಾಣ್​' ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.