ETV Bharat / entertainment

ಸಾವಿರ ಕೋಟಿ ಕ್ಲಬ್ ಸೇರಿದ 'ಪಠಾಣ್'​: ಟೀಕೆಗಳನ್ನು ಮೆಟ್ಟಿ ಸಾಧನೆ ಮಾಡಿದ ಹಿಂದಿ ಚಿತ್ರ! - Pathaan latest news

ಹಲವು ವಿವಾದಗಳ ನಡುವೆ ತೆರೆ ಕಂಡ ಪಠಾಣ್ ಚಿತ್ರ ಬಿಡುಗಡೆ ಆದ ಒಂದು ತಿಂಗಳ ಮೊದಲೇ 1,000 ಕೋಟಿ ಕ್ಲಬ್ ಸೇರಿದೆ.

Pathaan collection
ಪಠಾಣ್ ಕಲೆಕ್ಷನ್​
author img

By

Published : Feb 21, 2023, 1:22 PM IST

ನಾಲ್ಕು ವರ್ಷಗಳ ಬ್ರೇಕ್​ ನಂತರ ಬಂದ ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್ ಆ್ಯಕ್ಷನ್​ ಅವತಾರದ ಪಠಾಣ್​ ಚಿತ್ರದ ಕ್ರೇಜ್​ ಕಡಿಮೆ ಆಗಿಲ್ಲ. ಅವರ ಸ್ಟಾರ್​ಡಮ್​​ ಹಿಂದಿ ಚಿತ್ರರಂಗದಲ್ಲಿ ಮತ್ತೊಮ್ಮೆ ಸದ್ದು ಮಾಡಿದೆ. ಬಾಲಿವುಡ್​ ಬೇಡಿಕೆ ತಾರೆಯರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ಮುಖ್ಯಭೂಮಿಕೆಯ ಮೆಗಾ ಬ್ಲಾಕ್ ಬಸ್ಟರ್ ಚಿತ್ರ 'ಪಠಾಣ್' ದೊಡ್ಡ ಇತಿಹಾಸ ಸೃಷ್ಟಿಸಿದೆ. 'ಪಠಾಣ್' ಚಿತ್ರವೀಗ 1,000 ಕೋಟಿ ಕ್ಲಬ್ ಸೇರಿದೆ. ಬಿಡುಗಡೆಯಾದ ಒಂದು ತಿಂಗಳ ಮೊದಲೇ ಚಿತ್ರ ಈ ಸಾಧನೆ ಮಾಡಿದೆ. 'ಪಠಾಣ್' 1000 ಕೋಟಿ ಕ್ಲಬ್ ಸೇರಿದ ಐದನೇ ಭಾರತೀಯ ಚಿತ್ರವಾಗಿದೆ. ಹಿಂದಿ ಸಿನಿಮಾ 'ದಂಗಲ್' ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಟಾಪ್ 5 ಸಿನಿಮಾಗಳು: 2016ರಲ್ಲಿ ತೆರೆ ಕಂಡ ಮಿಸ್ಟರ್​ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅಭಿನಯದ 'ದಂಗಲ್' ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಈ ಚಿತ್ರವು ವಿಶ್ವಾದ್ಯಂತ ಅತಿ ಹೆಚ್ಚು ಕಲೆಕ್ಷನ್ (2,023.81 ಕೋಟಿ ರೂ.) ಮಾಡಿದೆ. ಇದಾದ ನಂತರ ಸೌತ್​ ಸೂಪರ್​ ಸ್ಟಾರ್​​ ಪ್ರಭಾಸ್​ ನಟನೆಯ ಬಾಹುಬಲಿ-2 (1,810.59 ಕೋಟಿ ರೂ.), ಕನ್ನಡದ ರಾಕಿಂಗ್​​​ ಸ್ಟಾರ್​​ ಕೆಜಿಎಫ್-2 (1,235.20 ಕೋಟಿ ರೂ.), ಜೂ. ಎನ್​​ಟಿಆರ್, ರಾಮ್​ಚರಣ್​ ಅಭಿನಯದ​​ 'ಆರ್​ಆರ್​ಆರ್​' (1,169 ಕೋಟಿ ರೂ.) ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿರುವ ಚಿತ್ರವಾಗಿದೆ.

Pathaan collection
ಕಲೆಕ್ಷನ್​ ವಿಚಾರದಲ್ಲಿ ಟಾಪ್ ಸಿನಿಮಾಗಳು

ಇದೀಗ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಕೂಡ ಈ 1,000 ಕೋಟಿ ಕ್ಲಬ್ ಸೇರಿದೆ. ಮಾಧ್ಯಮ ವರದಿಗಳ ಪ್ರಕಾರ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ಗಡಿ ದಾಟಿದೆ. ಯಶ್​ ರಾಜ್​ ಫಿಲ್ಮ್ಸ್​ ನಿನ್ನೆ ಹಂಚಿಕೊಂಡ ಮಾಹಿತಿಯಂತೆ (ಮೊನ್ನೆವರೆಗಿನ ಕಲೆಕ್ಷನ್​​) ಚಿತ್ರ 996 ಕೋಟಿ ರೂಪಾಯಿ ಗಳಿಸಿದೆ. ಇಂದಿನ ಅಧಿಕೃತ ಮಾಹಿತಿ ಇನ್ನಷ್ಟೇ ಹಂಚಿಕೊಳ್ಳಬೇಕಿದೆ.

ಶಾರುಖ್ ಖಾನ್ ಸಿನಿ ಸಾಧನೆ: ಶಾರುಖ್ ಖಾನ್ ಅವರ 30 ವರ್ಷಗಳ ವೃತ್ತಿಜೀವನದಲ್ಲಿ 'ಪಠಾಣ್' 1,000 ಕೋಟಿ ಕ್ಲಬ್‌ ಸೇರಿರುವ ಮೊದಲ ಚಿತ್ರವಾಗಿದೆ. 1,000 ಕೋಟಿ ಕ್ಲಬ್​​ ಪಟ್ಟಿಯಲ್ಲಿ ಕೇವಲ ನಾಲ್ಕು ಚಿತ್ರಗಳು ಇದ್ದವು. ಇದೀಗ ಪಠಾಣ್ 1,000 ಕೋಟಿ ಗಳಿಸುವ ಮೂಲಕ ಐದನೇ ಸ್ಥಾನ ಪಡೆದಿದೆ. ಇನ್ನೂ ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಚಿತ್ರ 910 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ಮೇಲೆ ಎಫ್​ಐಆರ್​ ದಾಖಲಿಸುವುದಾಗಿ ಹೇಳಿದ ಅಭಿಮಾನಿ.. ಕಾರಣ ಏನು?

ಶಾರುಖ್ ಖಾನ್ ಟಾಪ್ 5 ಸಿನಿಮಾ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 2013ರಲ್ಲಿ ಬಿಡುಗಡೆಯಾದ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರವು ವಿಶ್ವಾದ್ಯಂತ 424.54 ಕೋಟಿ ರೂ. ಗಳಿಸಿದೆ. ಪಠಾಣ್‌ಗಿಂತ ಮೊದಲು ಶಾರುಖ್‌ ಅವರ ಈ ಚೆನ್ನೈ ಎಕ್ಸ್‌ಪ್ರೆಸ್ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿತ್ತು. ಇನ್ನೂ ಹ್ಯಾಪಿ ನ್ಯೂ ಇಯರ್ (383 ಕೋಟಿ ರೂ.), ದಿಲ್​ವಾಲೆ (376.85 ಕೋಟಿ ರೂ.) ಮತ್ತು ರಯೀಸ್ ವಿಶ್ವದಾದ್ಯಂತ 281.44 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ಪಠಾಣ್ ಚಿತ್ರದ ಕೋಟಿ ಕೋಟಿ ಕಲೆಕ್ಷನ್​​​ ವೇಗ ಮುಂದುವರಿದಿದೆ.

ಇದನ್ನೂ ಓದಿ: 'ನಾನು ಈಗಲೂ ನಿನ್ನನ್ನು ಎಲ್ಲೆಡೆ ಹುಡುಕುತ್ತೇನೆ ಅಮ್ಮಾ': ಜಾನ್ವಿ ಕಪೂರ್ ಭಾವನಾತ್ಮಕ ಪೋಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.