ETV Bharat / entertainment

'ಪಠಾಣ್' ಸಿನಿಮಾ ಏಕೆ ನೋಡ್ಬೇಕು?: ಶಾರುಖ್ ಖಾನ್ ಉತ್ತರ ಹೀಗಿತ್ತು.. - pathaan boycott

'ಪಠಾಣ್' ಸಿನಿಮಾವನ್ನು ಏಕೆ ವೀಕ್ಷಿಸಬೇಕು? ಎಂಬುದಕ್ಕೆ ಸ್ವತಃ ನಾಯಕ ನಟ ಶಾರುಖ್ ಖಾನ್ ಉತ್ತರ ನೀಡಿದ್ದಾರೆ.

Shah Rukh Khan
ನಟ ಶಾರುಖ್ ಖಾನ್
author img

By

Published : Dec 18, 2022, 1:14 PM IST

Updated : Dec 18, 2022, 2:05 PM IST

ಬೇಶರಂ ರಂಗ್​ ಹಾಡಿನಲ್ಲಿ ನಟಿಯ ವೇಷಭೂಷಣದ ಹಿನ್ನೆಲೆಯಲ್ಲಿ ಭಾರಿ ವಿವಾದಕ್ಕೆ ಸಿಲುಕಿರುವ ನಟ ಶಾರುಖ್ ಖಾನ್ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. 'ಪಠಾಣ್' ಸಿನಿಮಾವನ್ನು ಏಕೆ ವೀಕ್ಷಿಸಬೇಕು? ಎಂಬುದಕ್ಕೆ ಅವರು ಕಾರಣ ತಿಳಿಸಿದರು.

ಶನಿವಾರ ಎಸ್​ಆರ್​ಕೆ ಟ್ವಿಟರ್​ನಲ್ಲಿ #AskSRK ಸೆಶನ್ ಅನ್ನು ನಡೆಸಿದರು. ಈ ಸಮಯದಲ್ಲಿ ಅಭಿಮಾನಿಗಳು ಥ್ರಿಲ್ಲರ್ ಮೂವಿ 'ಪಠಾಣ್​​'ಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದರು. ಈ ವೇಳೆ ಬಳಕೆದಾರರಲ್ಲಿ ಒಬ್ಬರು, 'ಪಠಾಣ್ ಚಲನಚಿತ್ರವನ್ನು ಏಕೆ ವೀಕ್ಷಿಸಬೇಕು?' ಎಂದು ಕೇಳಿದ್ದಾರೆ. ಅದಕ್ಕೆ ಎಸ್‌ಆರ್‌ಕೆ, 'I guess maza aayega is liye...'(ಅಂದರೆ ಸಿನಿಮಾ ಮನೋರಂಜನೆ ನೀಡಲಿದೆ/ಸಿನಿಮಾ ನೋಡೋದ್ರಿಂದ ಮಜಾ ಸಿಗುತ್ತೆ) ಎಂದು ನಾನು ಭಾವಿಸುತ್ತೇನೆ ಅಂತಾ ಉತ್ತರಿಸಿದ್ದಾರೆ. 15 ನಿಮಿಷಗಳ ಈ ಸೆಶನ್​ ಅವಧಿಯಲ್ಲಿ, 'ಡಾನ್' ನಟ ತಮ್ಮ ವೃತ್ತಿಜೀವನ, ಕುಟುಂಬ ಮತ್ತು ಫಿಫಾ ವಿಶ್ವಕಪ್, ಪಠಾಣ್​ ಚಿತ್ರ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಇದನ್ನೂ ಓದಿ: ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು: ದೀಪಿಕಾ ಪರ ನಿಂತ ನಟಿ ರಮ್ಯಾ

ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂದಿನ ಆಕ್ಷನ್ ಥ್ರಿಲ್ಲರ್ ಚಿತ್ರ 'ಪಠಾಣ್'ನಲ್ಲಿ ಶಾರುಖ್​ ಜೊತೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿದ್ದಾರೆ. ಚಿತ್ರವು ಜನವರಿ 25, 2023ರಂದು ತೆರೆಕಾಣಲು ಸಿದ್ಧವಾಗಿದೆ. ಚಿತ್ರ ತಯಾರಕರು ಕಳೆದ ಸೋಮವಾರ ಮೊದಲ ಹಾಡು 'ಬೇಶರಂ ರಂಗ್' ಅನ್ನು ಅನಾವರಣಗೊಳಿಸಿದ್ದಾರೆ. ಇದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: 'ಯಶ್​ ಈಸ್​ ವಾವ್..'​: ಕೆಜಿಎಫ್​ ಸ್ಟಾರ್​ ಬಗ್ಗೆ ಶಾರುಖ್‌ ಖಾನ್​​ ಮೆಚ್ಚುಗೆಯ ನುಡಿ

ಚಿತ್ರವು ದೇಶಭಕ್ತಿಯದ್ದಾಗಿದೆಯೇ ಎಂದು ಫ್ಯಾನ್ಸ್​ ಒಬ್ಬರು ಪ್ರಶ್ನಿಸಿದ್ದು, 'ಪಠಾಣ್ ಕೂಡ ತುಂಬಾ ದೇಶಪ್ರೇಮಿ, ಆದರೆ ಆಕ್ಷನ್ ರೀತಿಯಲ್ಲಿ' ಎಂದು ಶಾರುಖ್ ಉತ್ತರ ನೀಡಿದ್ದಾರೆ.

Last Updated : Dec 18, 2022, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.