ಮುಂಬೈ: ಚಿತ್ರರಂಗದ ನಟರ ಮಕ್ಕಳು ಸಿನಿಮಾ ಪ್ರವೇಶ ಮಾಡುವುದು ಹೊಸತಲ್ಲ. ಇದೀಗ ಆ ಸರದಿಗೆ ನಿಂತಿದ್ದಾರೆ ಕಿಂಗ್ಖಾನ್ ಶಾರುಖ್ ಖಾನ್ ಮಗ ಆರ್ಯನ್ ಖಾನ್. ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿರುವ ಅವರು, ಕರಣ್ ಜೋಹರ್ ನಿರ್ದೇಶನದ ಮೂಲಕ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಆರ್ಯನ್ ಖಾನ್ ನಟನೆ ಬದಲು ತೆರೆ ಹಿಂದಿನ ಕೆಲಸದಲ್ಲಿ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ತಮ್ಮ ಮೊದಲ ಪ್ರಾಜೆಕ್ಟ್ನ ಸಿರೀಸ್ಗೆ ಅವರು ಚಿತ್ರಕಥೆ ಬರೆದು ಮುಗಿಸಿದ್ದಾರೆ.
ರೆಡ್ ಚಿಲ್ಲಿ ಪ್ರೊಡಕ್ಷನ್ ಹೌಸ್ ಪ್ರಕಾರ, ಈ ಶೋವನ್ನು ಆರ್ಯನ್ ಖಾನ್ ನಿರ್ದೇಶನ ಕೂಡ ಮಾಡಲಿದ್ದಾರೆ ಎನ್ನಲಾಗ್ತಿದೆ. ಮುಂದಿನ ವರ್ಷದಿಂದ ಈ ಸೀರಿಸ್ ಶೂಟಿಂಗ್ ಆರಂಭವಾಗಲಿದೆ. ಈಗಾಗಲೇ ಚಿತ್ರಕಥೆ ಬರೆದು ಮುಗಿಸಿದ್ದು, ಆ್ಯಕ್ಷನ್ ಕಟ್ ಹೇಳಲು ಕಾತರನಾಗಿದ್ದೇನೆ ಎಂದು ಆರ್ಯನ್ ಖಾನ್ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ಮಂದಿ ಕೂಡ ಆರ್ಯನ್ ಖಾನ್ ಈ ಹೊಸ ಯೋಜನೆಗೆ ಶುಭಾಶಯದ ಮಳೆ ಸುರಿಸಿದ್ದಾರೆ.
- " class="align-text-top noRightClick twitterSection" data="
">
ಮಗನ ಈ ಹೊಸ ಅಧ್ಯಯಕ್ಕೆ ಶುಭ ಕೋರಿರುವ ಶಾರುಖ್, ಅಭಿನಂದನೆ ತಿಳಿಸಿದ್ದು, 'ಯೋಚನೆ...ನಂಬಿಕೆ...ಕನಸು ಸಾಕಾರ, ಇದೀಗ ಧೈರ್ಯದ ಮೇಲೆ ಕಾರ್ಯ..' ಎಂದು ಬರೆದು ಶುಭ ಹಾರೈಸಿದ್ದಾರೆ. ಇನ್ನು ಆರ್ಯನ್ ಖಾನ್ ತಾಯಿ ಗೌರಿ ಖಾನ್ ಕೂಡ ಮಗನ ನಿರ್ದೇಶನ ನೋಡಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.
ಆರ್ಯನ್ ಖಾನ್ ಸಹೋದರಿ ಸುಹಾನ ಖಾನ್ ಕೂಡ ಚಿತ್ರರಂಗ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ 'ಆರ್ಚೀಸ್ ಎಂಬ ಸೀರಿಸ್ನಲ್ಲಿ ಆಕೆ ಕಾಣಿಸಿಕೊಳ್ಳಲಿದ್ದಾರೆ. ಈ ಸೀರಿಸ್ ಅನ್ನು ಜೋಯಾ ಆಖ್ತರ್ ನಿರ್ದೇಶಿಸಲಿದ್ದಾರೆ. ಈ ಕಾಮಿಕ್ ಸೀರಿಸ್ 2023ರಿಂದ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ: ಹಿಂದೂ ಹೃದಯ ಸಾಮ್ರಾಟ ಶಿವಾಜಿಗೆ ನಮಿಸಿದ ಪಾತ್ರಧಾರಿ ಅಕ್ಷಯ್ ಕುಮಾರ್