'ಜವಾನ್' ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ಅವರ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರ. 'ಜವಾನ್' ಅಧಿಕೃತ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ. ಜೂನ್ 2ರಂದು ತೆರೆಕಾಣಬೇಕಿದ್ದ ಚಿತ್ರ, ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಹೌದು, ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜವಾನ್ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.
ಶಾರುಖ್ ಖಾನ್ ತಮ್ಮ ಚಲನಚಿತ್ರವನ್ನು ಹೇಗೆ ಪ್ರಚಾರ ಮಾಡುವುದು ಮತ್ತು ಅಭಿಮಾನಿಗಳಲ್ಲಿ ಹೇಗೆ ಸಂಪರ್ಕ ಸಾಧಿಸಬೇಕೆಂಬುದರ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ. ಅವರ ಬಹುನಿರೀಕ್ಷಿತ ಜವಾನ್‌ನ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ ನಂತರ, ನಟ ತಮ್ಮ ಸೆಲ್ಫಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋದಲ್ಲಿ ಶಾರುಖ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಪೋಸ್ಟ್ ಶೇರ್ ಮಾಡಿ ಮನವಿಯಿಟ್ಟ ಶಾರುಖ್: ''ಎಲ್ಲರಿಗೂ ಧನ್ಯವಾದಗಳು. ಕೆಲವರು ಜವಾನ್ ಪೋಸ್ಟರ್‌ನಲ್ಲಿ ನನ್ನ ಮುಖ ಕಾಣಿಸುತ್ತಿಲ್ಲ ಎಂದು ಹೇಳಿದರು. ಹಾಗಾಗಿ ನನ್ನ ಮುಖವನ್ನು (ಫೋಟೋ) ಇಲ್ಲಿ ಹಾಕುತ್ತಿದ್ದೇನೆ. ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಹೇಳಬೇಡಿ (ಮನವಿ). ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಸೆಪ್ಟೆಂಬರ್ 7ರಂದು ಥಿಯೇಟರ್‌ಗಳಲ್ಲಿ ನಿಮ್ಮನ್ನು ಭೇಟಿಯಾಗುವ ಭರವಸೆ ಇದೆ. ಲವ್ ಯು, ಬೈ" ಎಂದು ಕಿಂಗ್ ಖಾನ್ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಸೆಲೆಬ್ರಿಟಿ, ಅಭಿಮಾನಿಗಳ ರಿಯಾಕ್ಷನ್: ನಟ ಶಾರುಖ್ ಖಾನ್ ಅವರ ಈ ಪೋಸ್ಟ್ ಸೆಲೆಬ್ರಿಟಿ ಮತ್ತು ಅಭಿಮಾನಿಗಳ ಪ್ರತಿಕ್ರಿಯೆ ಗಳಿಸಿದೆ. ಸಾನ್ಯಾ ಮಲ್ಹೋತ್ರಾ ಫೈಯರ್ ಎಮೋಜಿಗಳನ್ನು ಪೋಸ್ಟ್ಗೆ ಹಾಕಿದ್ದರೆ, ಫಾತಿಮಾ ಸನಾ ಶೇಖ್ ಅವರು ಹಾರ್ಟ್ ಎಮೋಜಿ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೊಬ್ಬರು "ನೀವು ಅತ್ಯುತ್ತಮ" ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ಅಭಿಮಾನಿ "ಯಾವಾಗಲೂ ಜವಾನ್ ಶಾ" ಎಂದು ಬರೆದಿದ್ದಾರೆ.
ಸೌತ್ ಸಿನಿಮಾ ಡೈರೆಕ್ಟರ್ ಅಟ್ಲೀ ನಿರ್ದೇಶನದ ಈ ಚಿತ್ರ ಜೂನ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರ ತಯಾರಕರು ಸಿನಿಮಾ ಬಿಡುಗಡೆ ದಿನಾಂಕವನ್ನು ಬದಲಾಯಿಸಿದ್ದಾರೆ. ಚಿತ್ರ ಮುಂದೂಡಿಕೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಿನಿಮಾ ಶೂಟಿಂಗ್ ಮುಕ್ತಾಯವಾಗದಿರುವುದು ಈ ನಿರ್ಧಾರಕ್ಕೆ ಕಾರಣ ಎಂಬುದು ಒಂದು ಮೂಲದ ಮಾಹಿತಿ.
ಇದನ್ನೂ ಓದಿ: 10 ವರ್ಷದ ಬಳಿಕ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್: ಮತ್ತೆ ಪ್ರೀತಿಯಲ್ಲಿ ದೀಪಿಕಾ-ರಣ್ಬೀರ್
ಚಲನಚಿತ್ರವು ಹೈ ಆ್ಯಕ್ಷನ್ ಸೀಕ್ವೆನ್ಸ್‌ಗಳೊಂದಿಗೆ ಕೂಡಿರಲಿದೆ. ನಟನ ಕೊನೆಯ ಸಿನಿಮಾ ಕೂಡ ಫುಲ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ರೊಮ್ಯಾಂಟಿಕ್ ಹೀರೋ ಆಗಿಯೇ ಗುರುತಿಸಿಕೊಂಡಿರುವ ಶಾರುಖ್ ಅವರ ಮೊದಲ ಆ್ಯಕ್ಷನ್ ಸಿನಿಮಾ 'ಪಠಾಣ್'. ಪಠಾಣ್ ನಂತರ ತೆರೆಕಾಣುತ್ತಿರುವ ಜವಾನ್ ಕೂಡ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಎಸ್ಆರ್ಕೆ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ದಕ್ಷಿಣದ ಸೂಪರ್ ಸ್ಟಾರ್ಗಳಾದ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಟಿ ರಮ್ಯಾರ ಮುದ್ದಿನ 'ಚಾಂಪ್' ಇನ್ನಿಲ್ಲ! Photos