ETV Bharat / entertainment

'ಜವಾನ್'​ ಹಿಟ್​ ಆಗೋದು ಪಕ್ಕಾನಾ?​: 10 ವಿಶೇಷ ದಾಖಲೆ ಬರೆಯಲು ಶಾರುಖ್​ ಸಿನಿಮಾ ಸಿದ್ಧ - ಈಟಿವಿ ಭಾರತ ಕನ್ನಡ

Jawan to set these 10 records at box office: 'ಜವಾನ್'​ ಸಿನಿಮಾ ಸೆಪ್ಟಂಬರ್​ 7ರಂದು ಬಿಡುಗಡೆಯಾಗಲಿದ್ದು, 10 ವಿಶೇಷ ದಾಖಲೆಯನ್ನು ಸೃಷ್ಟಿಸಲಿದೆ.

Jawan
ಜವಾನ್
author img

By ETV Bharat Karnataka Team

Published : Sep 4, 2023, 6:22 PM IST

ಬಾಲಿವುಡ್​ ನಟ ಶಾರುಖ್​ ಖಾನ್​ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ 'ಜವಾನ್​'. ಸೆಪ್ಟಂಬರ್​ 7ರಂದು ತೆರೆಗಪ್ಪಳಿಸಲು ಸಿದ್ಧವಾಗಿದೆ. ಈ ಆಕ್ಷನ್​ ಡ್ರಾಮಾ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈಗಾಗಲೇ ಪ್ರೀ-ಟಿಕೆಟ್​ ಬುಕ್ಕಿಂಗ್​ ಪ್ರೊಸೆಸ್​ ಓಪನ್​ ಆಗಿದ್ದು, ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸುತ್ತಿದೆ. ಜೊತೆಗೆ 'ಜವಾನ್​' ಬಿಡುಗಡೆಗೂ ಮುನ್ನವೇ ಈವರೆಗಿನ ಅನೇಕ ದಾಖಲೆಗಳನ್ನು ಮುರಿದಿದ್ದು, ಹೊಸ ದಾಖಲೆಯನ್ನು ಸೃಷ್ಟಿಸಿದೆ.

ಮೊದಲ ದಿನದ ಕಲೆಕ್ಷನ್​ ಹೀಗಿರಲಿದೆ.. ಶಾರುಖ್​ ಖಾನ್​ ಅವರ 'ಜವಾನ್'​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮತ್ತೊಮ್ಮೆ ಸುನಾಮಿ ಎಬ್ಬಿಸಲಿದೆ. ಚಿತ್ರದ ಮುಂಗಡ ಬುಕ್ಕಿಂಗ್​ಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್​ ಸಿಕ್ಕಿದ್ದು, ಮೊದಲ ದಿನವೇ​ ಭರ್ಜರಿ ಓಪನಿಂಗ್​ ಹೊಂದುವ ನಿರೀಕ್ಷೆ ಇದೆ. ಫಸ್ಟ್​ ಡೇ 70 ರಿಂದ 75 ಕೋಟಿ ರೂಪಾಯಿ ವ್ಯವಹಾರವನ್ನು 'ಜವಾನ್​' ಮಾಡಲಿದೆ. ಈ ಮೂಲಕ ಬಾಹುಬಲಿ 2 (58 ಕೋಟಿ ರೂ.), ಕೆಜಿಎಫ್​ 2 (61 ಕೋಟಿ ರೂ.) ಮತ್ತು ಪಠಾಣ್​ (55 ಕೋಟಿ ರೂ.) ದಾಖಲೆಗಳನ್ನು ಉಡೀಸ್​ ಮಾಡಲಿದೆ.

ವಿಶೇಷ ದಾಖಲೆ ಬರೆಯಲಿರುವ ಶಾರುಖ್​: ಶಾರುಖ್​ ಖಾನ್​ ಅವರು 'ಜವಾನ್'​ ಮೂಲಕ ವಿಶೇಷ ಸಾಧನೆಯನ್ನು ಮಾಡಲಿದ್ದಾರೆ. ಈ ವರ್ಷ ತೆರೆಕಂಡ 'ಪಠಾಣ್'​ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಇದೀಗ 'ಜವಾನ್'​ ಚಿತ್ರ ಕೂಡ ಫಸ್ಟ್​ ಡೇ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಲಿದೆ. ಈ ಮೂಲಕ​ ಒಂದೇ ವರ್ಷದಲ್ಲಿ ಶಾರುಖ್​ ಖಾನ್​ ಅವರ ಎರಡೂ ಚಿತ್ರಗಳು 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಲಿದ್ದು, ಈ ವಿಶೇಷ ದಾಖಲೆಯನ್ನು ಸೃಷ್ಟಿಸಿದ ಹಿಂದಿ ಚಿತ್ರರಂಗದ ಮೊದಲ ಸ್ಟಾರ್​ ಬಾದ್​ ಶಾ ಆಗಲಿದ್ದಾರೆ.

ಎರಡನೇ 100 ಕೋಟಿ ಚಿತ್ರ: 'ಜವಾನ್'​ ಸಿನಿಮಾ ಹಿಂದಿ ಚಿತ್ರರಂಗದಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿಸಲು ಹೊರಟಿದೆ. ಶಾರುಖ್​ ಖಾನ್​ ಮತ್ತೊಮ್ಮೆ ತಮ್ಮ ಎರಡನೇ ಚಿತ್ರವನ್ನು ಮೊದಲ ದಿನವೇ ವಿಶ್ವದಾದ್ಯಂತ 100 ಕೋಟಿ ಗಡಿ ದಾಟಿಸಲಿದ್ದಾರೆ. ಈ ಹಿಂದೆ ಪಠಾಣ್​ ಚಿತ್ರವು ಮೊದಲ ದಿನದಂದು ವಿಶ್ವದಾದ್ಯಂತ 106 ಕೋಟಿ ರೂ. ದಾಟಿತ್ತು. ಭಾರತೀಯ ಚಿತ್ರರಂಗದಲ್ಲಿ ನಟರೊಬ್ಬರು ಇಂತಹ ಸಾಧನೆ ಮಾಡುತ್ತಿರುವುದು ಇದೇ ಮೊದಲು.

ಬಾಹುಬಲಿ 2 ದಾಖಲೆ ಉಡೀಸ್​: 'ಜವಾನ್​' ಮೊದಲ ದಿನದಂದು ವಿಶ್ವದಾದ್ಯಂತ 125 ಕೋಟಿ ರೂಪಾಯಿ ವ್ಯವಹಾರ ಮಾಡಲಿದೆ. ಈ ಮೂಲಕ ಬಾಹುಬಲಿ 2ರ 121 ಕೋಟಿ ರೂಪಾಯಿ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಬಹುದು ಎಂದು ಹೇಳಲಾಗಿದೆ.

ಒಂದೇ ವರ್ಷದಲ್ಲಿ ಎರಡು ಚಿತ್ರ 500 ಕೋಟಿ ಕ್ರಾಸ್​: ದೇಶಿಯ ಬಾಕ್ಸ್​ ಆಫೀಸ್​ನಲ್ಲಿ ಜವಾನ್​ ಸಿನಿಮಾ ಸುಲಭವಾಗಿ 500 ಕೋಟಿ ರೂಪಾಯಿ ಗಳಿಸಬಹುದು. ಈ ವರ್ಷದಲ್ಲಿ ತೆರೆಕಂಡ ಪಠಾಣ್​ ಚಿತ್ರ ಕೂಡ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಈ ಮೂಲಕ ಶಾರುಖ್​ ಖಾನ್​ ಒಂದು ವರ್ಷದಲ್ಲಿ ಎರಡು 500 ಕೋಟಿ ಚಿತ್ರಗಳನ್ನು ನೀಡಿದ ಏಕೈಕ ನಟ ಎನಿಸಿಕೊಳ್ಳಲಿದ್ದಾರೆ.

'ಪಠಾಣ್​' ಸೋಲಿಸಲಿರುವ 'ಜವಾನ್​': ಶಾರುಖ್​ ಖಾನ್​ ಅವರದ್ದೇ 'ಪಠಾಣ್'​ ಚಿತ್ರದ ಆರಂಭಿಕ ಕಲೆಕ್ಷನ್​ ಅನ್ನು 'ಜವಾನ್'​ ಮುರಿಯಲಿದೆ ಎನ್ನಲಾಗಿದೆ. ಹಿಂದಿ ಚಿತ್ರರಂಗದಲ್ಲಿ 55 ಕೋಟಿಯೊಂದಿಗೆ ಅತಿ ಹೆಚ್ಚು ಓಪನಿಂಗ್​ ಪಡೆದ ಮೊದಲ ಚಿತ್ರ ಪಠಾಣ್​ ಆಗಿದೆ. ಇದೀಗ ಜವಾನ್​ ಸಿನಿಮಾವು ಪಠಾಣ್​ ಮಾತ್ರವಲ್ಲದೇ ಕೆಜಿಎಫ್​ 2, ಬಾಹುಬಲಿ 2 ಚಿತ್ರದ ದಾಖಲೆಗಳನ್ನು ಮುರಿದು ಮೊದಲ ದಿನವೇ 70 ರಿಂದ 75 ಕೋಟಿ ರೂಪಾಯಿ ಗಳಿಸಲಿದೆ.

ಮುಂಗಡ ಬುಕ್ಕಿಂಗ್​ನಲ್ಲೂ ದಾಖಲೆ: 'ಜವಾನ್'​ ಮುಂಗಡ ಬುಕ್ಕಿಂಗ್​ ವಿಚಾರವಾಗಿ ನೋಡುವುದಾದರೆ, 24 ಗಂಟೆಯಲ್ಲಿ 1.5 ಲಕ್ಷ ಟಿಕೆಟ್​ಗಳು ಮಾರಾಟವಾಗಿದೆ. ಈ ಮೊದಲು 'ಪಠಾಣ್'​ ಸಿನಿಮಾದ 1,17,000 ಟಿಕೆಟ್ ಮಾರಾಟವಾಗಿತ್ತು. ಇದೀಗ ಪಠಾಣ್​ ದಾಖಲೆಯನ್ನು ಜವಾನ್​ ಮುರಿದಿದೆ. ಜವಾನ್​ ಮೂರು ದಿನಗಳಲ್ಲಿ ಒಟ್ಟು 5.77 ಲಕ್ಷ ಮುಂಗಡ ಟಿಕೆಟ್​ಗಳನ್ನು ಮಾರಾಟ ಮಾಡಿದೆ. ಇನ್ನೂ ಜವಾನ್​ ಬಿಡುಗಡೆಗೆ ನಾಲ್ಕು ದಿನಗಳು ಬಾಕಿ ಉಳಿದಿದೆ. ಆದರೆ, ಗದರ್​ 2 ಮುಂಗಡ ಬುಕ್ಕಿಂಗ್​ನಲ್ಲಿ 7.22 ಲಕ್ಷ ಟಿಕೆಟ್​ಗಳನ್ನು ಮಾರಾಟ ಮಾಡಿದೆ. ಪಠಾಣ್​ 10.81 ಲಕ್ಷ ಟಿಕೆಟ್​ ಮಾರಾಟ ಮಾಡಿತ್ತು. ಈ ಎರಡು ಚಿತ್ರಗಳ ದಾಖಲೆಯನ್ನು ಜವಾನ್​ ಮುರಿಯಲಿದೆ ಎನ್ನಲಾಗಿದೆ. ​

ಇದನ್ನೂ ಓದಿ: ದುಬೈನ​ ಬುರ್ಜ್​ ಖಲೀಫಾದಲ್ಲಿ ಜವಾನ್​ ಟ್ರೇಲರ್​ ಅನಾವರಣ: 'ನನ್ನ ಬೋಳುತಲೆ ನೋಟ ಇದೇ ಮೊದಲು ಮತ್ತು ಕೊನೆ' ಎಂದ ಶಾರುಖ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.