ETV Bharat / entertainment

Jawan: ಜವಾನ್ ಸಿನಿಮಾದ ಶಾರುಖ್​ ಲುಕ್ ಲೀಕ್​​! - Shah Rukh Khan viral photo

ಬಾಲಿವುಡ್​ ಕಿಂಗ್​ ಖಾನ್​​ ಶಾರುಖ್ ಅವರ ಜವಾನ್​ ಟ್ರೇಲರ್​ ನಾಳೆ ಅನಾವರಣಗೊಳ್ಳಲಿದೆ.

Shah Rukh Khan look from Jawaan
ಜವಾನ್ ಸಿನಿಮಾದ ಶಾರುಖ್​ ಲುಕ್
author img

By

Published : Jul 9, 2023, 4:16 PM IST

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಜವಾನ್'. ಚಿತ್ರದ ಟ್ರೇಲರ್ ಬಿಡುಗಡೆ​ ದಿನಾಂಕವನ್ನು ನಟ ಶನಿವಾರದಂದು ಘೋಷಿಸಿದ್ದು, 'ಜವಾನ್' ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್​ನಲ್ಲಿದೆ. ಕಿಂಗ್ ಖಾನ್ ನಟನೆಯ ಮುಂಬರುವ ಚಿತ್ರದ ಬಗ್ಗೆ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ. ಇದರ ನಡುವೆ ನಟನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

'ಪಠಾಣ್' ಚಿತ್ರದ ಅದ್ಭುತ ಯಶಸ್ಸಿನ ನಂತರ ಬಾಲಿವುಡ್​ ಕಿಂಗ್ ಶಾರುಖ್ ಖಾನ್ 'ಜವಾನ್' ಮೂಲಕ ಮನರಂಜಿಸಲು ಸಿದ್ಧರಾಗಿದ್ದಾರೆ. ಬಹಳ ಸಮಯದಿಂದ ಚಿತ್ರದ ಬಗ್ಗೆ ಅಭಿಮಾನಿಗಳು ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಟ್ರೇಲರ್​ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದರು. ಅಭಿಮಾನಿಗಳ ಕಾಯುವಿಕೆ ಕೊನೆಗೊಳ್ಳುವ ಸಮಯ ಬಂದಿದೆ. ಟ್ರೇಲರ್​ ರಿಲೀಸ್​ ಡೇಟ್​ ಅನ್ನು ಅನೌನ್ಸ್​ ಮಾಡಿದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಎಸ್​ಆರ್​ಕೆ ಫ್ಯಾನ್ಸ್​ ಪೇಜ್​ ಒಂದು ಶಾರುಖ್ ಅವರ ಚಿತ್ರವೊಂದನ್ನು ಹಂಚಿಕೊಂಡಿದೆ.

ಈಗಾಗಲೇ ಅನಾವರಣಗೊಂಡಿರುವ ಶಾರುಖ್​ ಲುಕ್​ ಅನ್ನು ಮರುರೂಪಿಸಿರುವ ಫೋಟೋ ಇದು. ಜವಾನ್​​ ಚಿತ್ರದಲ್ಲಿ ನಟ ಹೀಗೆ ಕಾಣಿಸಿಕೊಳ್ಳಬಹುದೆಂದು ಊಹಿಸಿ ಅಭಿಮಾನಿಗಳೇ ಕ್ರಿಯೇಟ್​ ಮಾಡಿರುವ ಫೋಟೋ ಇದು ಎನ್ನಲಾಗುತ್ತಿದೆ. ವೈರಲ್​ ಆಗುತ್ತಿರುವ ಫೋಟೋದಲ್ಲಿ ಶಾರುಖ್ ಖಾನ್ ಬೋಳು ತಲೆಯ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಖ ಮತ್ತು ದೇಹ ರಕ್ತದಲ್ಲಿ ತೊಯ್ದು ಹೋಗಿದೆ. ಚಿತ್ರವನ್ನು ಹಂಚಿಕೊಂಡಿರುವ ಫ್ಯಾನ್ಸ್​ ಪೇಜ್​ 'ಜವಾನ್‌ನಲ್ಲಿ ಶಾರುಖ್‌ ನೋಟ' ಎಂದು ಶೀರ್ಷಿಕೆ ನೀಡಿದೆ.

ಕಿಂಗ್ ಖಾನ್ ಅವರ ಜವಾನ್​​ ಸಿನಿಮಾ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಟ್ರೇಲರ್​ ರಿಲೀಸ್​​ ದಿನಾಂಕ, ಸಮಯವನ್ನು ಶಾರುಖ್ ಖಾನ್ ಜುಲೈ 8 ರಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಟ್ರೇಲರ್​ ನಾಳೆ ಬೆಳಗ್ಗೆ 10-30ಕ್ಕೆ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: SRK Jawan: ನಾಳೆ ಜವಾನ್​ ಟ್ರೇಲರ್​ ರಿಲೀಸ್; ಜೈ ಅಂತಾನಾ ಪ್ರೇಕ್ಷಕ? ಆ್ಯಕ್ಷನ್​ ಅವತಾರದಲ್ಲಿ ರೊಮ್ಯಾಂಟಿಕ್​ ಹೀರೋ

ಈ ವರ್ಷದ ಆರಂಭದಲ್ಲಿ ಪಠಾಣ್​ ಸಿನಿಮಾ ತೆರೆಕಂಡಿದೆ. ಹಲವು ವಿವಾದಗಳನ್ನು ಎದುರಿಸಿ, ಬಾಯ್ಕಾಟ್​ ಭಯದ ನಡುವೆಯೇ ರಿಲೀಸ್​ ಆದ ಈ ಸಿನಿಮಾದ ಯಶಸ್ಸು ಮಾತ್ರ ಅಭೂತಪೂರ್ವ. ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಬಂದ ಸಿನಿಮಾ 1,000 ಕೋಟಿ ರೂ.ನ ಕ್ಲಬ್​ ಸೇರುವಲ್ಲಿ ಯಶಸ್ವಿಯಾಗಿದೆ. ಸೂಪರ್​ ಹಿಟ್ ಪಠಾಣ್​​ ಬಳಿಕ ಈ ಸಾಲಿನಲ್ಲೇ ಬಿಡುಗಡೆ ಆಗುತ್ತಿರುವ ಶಾರುಖ್​ ಅವರ ಮತ್ತೊಂದು ಬಿಗ್​ ಬಜೆಟ್​ ಚಿತ್ರವಿದು. ಕಂಪ್ಲೀಟ್​ ಆ್ಯಕ್ಷನ್ ಎಂಟರ್‌ಟೈನ್​ ಸಿನಿಮಾ ಇದು. ಶಾರುಖ್​ ಖಾನ್ ತಂದೆ ಮತ್ತು ಮಗನ ಪಾತ್ರವನ್ನು (ದ್ವಿಪಾತ್ರ) ನಿರ್ವಹಿಸಿದ್ದಾರೆ ಎಂದು ನಂಬಲಾಗಿದೆ. ಶಾರುಖ್​ ಖಾನ್ ಅವರ ಪ್ರೊಡಕ್ಷನ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಈ ಸಿನಿಮಾ ನಿರ್ಮಿಸಿದ್ದು, ಸೌತ್​ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶಿಸಿದ್ದಾರೆ. ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜವಾನ್​ ಅಲ್ಲದೇ ಡಂಕಿ ಸಿನಿಮಾದಲ್ಲೂ ಶಾರುಖ್​ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಸಲ್ಮಾನ್​ ಮುಖ್ಯಭೂಮಿಕೆಯ ಟೈಗರ್ 3 ಚಿತ್ರದಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ: ಕತ್ರಿನಾ-ವಿಕ್ಕಿ ರೊಮ್ಯಾಂಟಿಕ್ ಫೋಟೋ; ಮೇಡ್​ ಫಾರ್ ಈಚ್​ ಅದರ್ ಎನ್ನುವಂತಿದೆ 'ವಿಕ್ಯಾಟ್'​ ಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.