ETV Bharat / entertainment

ಅಮೃತ್​ಪಾಲ್​ ಬರ್ತ್​​ಡೇ ಪಾರ್ಟಿಯಲ್ಲಿ ಬಿಟೌನ್​ ಸ್ಟಾರ್ಸ್.. ಶಾರುಖ್​, ಅನನ್ಯಾ ಆದಿತ್ಯಾ ವಿಡಿಯೋ ವೈರಲ್! - ಆದಿತ್ಯಾ ರಾಯ್​ ಕಪೂರ್

Amritpal Singh Bindra birthday Bash: ನಿರ್ಮಾಪಕ ಅಮೃತ್​ಪಾಲ್ ಸಿಂಗ್​ ಬಿಂದ್ರಾ ಅವರು ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಗೆ ಬಾಲಿವುಡ್​ ಸ್ಟಾರ್ಸ್ ಸಾಕ್ಷಿಯಾಗಿದ್ದರು.

Btown stars at Amritpal's birthday party
ಅಮೃತ್​ಪಾಲ್​ ಬರ್ತ್​​ಡೇ ಪಾರ್ಟಿಯಲ್ಲಿ ಬಿಟೌನ್​ ಸ್ಟಾರ್ಸ್
author img

By

Published : Aug 6, 2023, 1:34 PM IST

ಶನಿವಾರ ಅಂದರೆ ಆಗಸ್ಟ್ 5 ರಂದು ನಿರ್ಮಾಪಕ ಅಮೃತ್​ಪಾಲ್ ಸಿಂಗ್​ ಬಿಂದ್ರಾ ಅವರು ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಯಲ್ಲಿ ಬಾಲಿವುಡ್​ನ ಸಿನಿ ಗಣ್ಯರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್​ ಕಿಂಗ್​​ ಖಾನ್​​ ಶಾರುಖ್​​, ಪುತ್ರಿ ಸುಹಾನಾ ಖಾನ್​​, ಬಾಲಿವುಡ್​ ಲವೆಬಲ್​ ಕಪಲ್​ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ, ರೂಮರ್​ ಲವ್​ ಬರ್ಡ್ಸ್ ಅನನ್ಯಾ ಪಾಂಡೆ - ಆದಿತ್ಯಾ ರಾಯ್​ ಕಪೂರ್​ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಚಿತ್ರದ ನಿರ್ದೇಶಕ - ನಿರ್ಮಾಪಕ ಕರಣ್​ ಜೋಹರ್​, ಅಗಸ್ತ್ಯಾ ನಂದಾ ಸೇರಿದಂತೆ ಹಲವರು ನಿರ್ಮಾಪಕ ಅಮೃತ್​ಪಾಲ್ ಸಿಂಗ್​ ಬಿಂದ್ರಾ ಅವರ ಮನೆಯಲ್ಲಿ ಕಾಣಿಸಿಕೊಂಡರು.

ಐಶಾರಾಮಿ ಕಾರಿನಲ್ಲಿ ಬಂದ ಪಠಾಣ್​ ನಟ ಶಾರುಖ್​ ಖಾನ್​ ಪಾಪರಾಜಿಗಳ ಕ್ಯಾಮರಾ ಕಣ್ಣುಗಳಿಂದ ತಪ್ಪಿಸಿಕೊಂಡರು. ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಬ್ಲ್ಯಾಕ್​ ಸೂಟ್​​ ಧರಿಸಿ ಕಾರ್ಯಕ್ರಮಕ್ಕೆ ಬಂದರು. ನಿರ್ಮಾಪಕರ ನಿವಾಸಕ್ಕೆ ಎಂಟ್ರಿ ಕೊಡುವ ಮುನ್ನ ಪಾಪರಾಜಿಗಳತ್ತ ನೋಡಿ ಕೈ ಬೀಸಿದರು. ಇನ್ನು ಬಾಲಿವುಡ್​ನ ಕ್ಯೂಟ್​ ಕಪಲ್​​ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಒಟ್ಟಿಗೆ ಈವೆಂಟ್​​ಗೆ ಆಗಮಿಸಿದರು. ಸಿದ್ಧಾರ್ಥ್ ಪಾಪರಾಜಿಗಳತ್ತ ನೋಡಿ ಕೈ ಬೀಸಿದರೆ, ಕಿಯಾರಾ ಕ್ಯಾಮರಾ ಕಂಡು ನಸು ನಕ್ಕರು. ಪಾರ್ಟಿಗಾಗಿ ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾಣಿ ಗ್ರೀನ್​ ಸ್ಟೈಲಿಶ್​ ಡ್ರೆಸ್​ ಧರಿಸಿದ್ದರೆ, ಬಹುಬೇಡಿಕೆ ನಟಿ ವೈಟ್​ ಶರ್ಟ್ ಆ್ಯಂಡ್​ ಪ್ಯಾಂಟ್​ನಲ್ಲಿ ಕಾಣಿಸಿಕೊಂಡರು.

ಇನ್ನು ತಂದೆಯೊಂದಿಗೆ ಸುಹಾನಾ ಖಾನ್​ ಕೂಡ ಆಗಮಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿರುವ ದೃಶ್ಯಗಳ ಪ್ರಕಾರ, ಲೈಟ್​ ಬ್ಲ್ಯೂ ಡ್ರೆಸ್​ನಲ್ಲಿ ಬೆರಗುಗೊಳಿಸುವ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಡೇಟಿಂಗ್​ ವಿಚಾರವಾಗಿ ಸುದ್ದಿಯಲ್ಲಿರುವ ಅನನ್ಯಾ ಪಾಂಡೆ ಮತ್ತು ಆದಿತ್ಯಾ ರಾಯ್​ ಕಪೂರ್ ಈವೆಂಟ್​ಗೆ ಪ್ರತ್ಯೇಕವಾಗಿ ಆಗಮಿಸಿದರು. ಆದ್ರೆ ಕಾರ್ಯಕ್ರಮದ ಸ್ಥಳಕ್ಕೆ ಏಕಕಾಲಕ್ಕೆ ಎಂಟ್ರಿ ಕೊಟ್ಟರು. ಲೈಗರ್​ ನಟಿ ಆರೆಂಟ್​ ಶಾರ್ಟ್ ಡ್ರೆಸ್​, ಸಿಂಪಲ್​ ನೆಕ್ಲೇಸ್​ ಧರಿಸಿ ಬಂದಿದ್ದರೆ, ನೈಟ್​ ಮ್ಯಾನೇಜರ್​ ಸ್ಟಾರ್ ಆದಿತ್ಯಾ ಬ್ಲ್ಯಾಕ್​ ಟೀ ಶರ್ಟ್​​, ಮ್ಯಾಚಿಂಗ್​ ಪ್ಯಾಂಟ್​ ಆರಿಸಿಕೊಂಡಿದ್ದರು.

ಇದನ್ನೂ ಓದಿ: ಬಿಪಾಶಾರ ಕಂದಮ್ಮನಿಗೆ ಹೃದ್ರೋಗ.. ಈ ಪರಿಸ್ಥಿತಿ ಯಾವುದೇ ತಾಯಿಗೂ ಬರಬಾರದೆಂದ ನಟಿ

ಮತ್ತೊಂದೆಡೆ ನಟಿ ಶನಾಯಾ ಕಪೂರ್​ ಕ್ಯಾಶುವಲ್​ ವೇರ್​ನಲ್ಲಿ ಕಿಲ್ಲರ್ ನೋಟ ಕೊಟ್ಟರು. ಈವೆಂಟ್​ಗೆ ತಾಯಿ ಮೀನಾ ಕಪೂರ್​ ಅವರೊಂದಿಗೆ ಆಗಮಿಸಿದ್ದರು. ಇನ್ನು ಕರೀಷ್ಮಾ ಕೂಡ ಸಖತ್​ ಸ್ಟೈಲಿಶ್​ ಆಗಿ ಆಗಮಿಸಿದ್ದರು. ಒಟ್ಟಾರೆ ನಿರ್ಮಾಪಕ ಅಮೃತ್​ಪಾಲ್ ಸಿಂಗ್​ ಬಿಂದ್ರಾ ಅವರ ಪಾರ್ಟಿ ಸೆಲೆಬ್ರಿಟಿಗಳ ಸ್ಟೈಲಿಶ್​ ಲುಕ್​ನಿಂದ ಕಂಗೊಳಿಸುತ್ತಿತ್ತು.

ಇದನ್ನೂ ಓದಿ: ಅನು ಸಿರಿಮನೆ ಬರ್ತ್ ಡೇ.. ಕ್ಯೂಟ್​ ಫೋಟೋಗಳನ್ನು ಹಂಚಿಕೊಂಡ ನಟಿ ಮೇಘಾ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.