ETV Bharat / entertainment

Shah Rukh Khan: ಶೂಟಿಂಗ್​ ವೇಳೆ ಗಾಯಗೊಂಡ ಶಾರುಖ್​ ಖಾನ್​, ಯಶಸ್ವಿ ಶಸ್ತ್ರಚಿಕಿತ್ಸೆ - ಶಾರುಖ್​ ಖಾನ್ ಅಮೆರಿಕದಲ್ಲಿ​ ಶೂಟಿಂಗ್​ ವೇಳೆ ಗಾಯ

ನಟ ಶಾರುಖ್​ ಖಾನ್​ ಅಮೆರಿಕದಲ್ಲಿ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಬಹಿರಂಗಪಡಿಸದ ಪ್ರಾಜೆಕ್ಟ್‌ನ ಚಿತ್ರೀಕರಣದಲ್ಲಿದ್ದಾಗ ಘಟನೆ ಸಂಭವಿಸಿದೆ.

Shah Rukh Khan
ನಟ ಶಾರುಖ್​ ಖಾನ್
author img

By

Published : Jul 4, 2023, 1:29 PM IST

Updated : Jul 4, 2023, 2:17 PM IST

ಬಾಲಿವುಡ್​ ನಟ​ ಶಾರುಖ್​ ಖಾನ್ ಅಮೆರಿಕದಲ್ಲಿ​ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಭಾರತಕ್ಕೆ ಮರಳುವ ಮುನ್ನ ಲಾಸ್​ ಏಂಜಲೀಸ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಲಾಸ್​ ಏಂಜಲೀಸ್​​ನಲ್ಲಿ ನಡೆದ ಸಣ್ಣ ಅವಘಡದಲ್ಲಿ ಶಾರುಖ್​ ಮೂಗಿಗೆ ಗಾಯವಾಗಿದೆ. ಹೀಗಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಎಸ್​​ಆರ್​ಕೆ ಅಪಘಾತವನ್ನು ಹೇಗೆ ಎದುರಿಸಿದರು ಎಂಬ ಬಗ್ಗೆ ಹೆಚ್ಚು ವಿವರಗಳು ಹೊರಬಿದ್ದಿಲ್ಲ. ಆದರೆ ನಟನ ಮೂಗಿಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆತಂಕಪಡುವ ಅಗತ್ಯವಿಲ್ಲ ಎಂದು ಎಸ್​ಆರ್​ಕೆ ತಂಡಕ್ಕೆ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಸಣ್ಣ ಶಸ್ತ್ರಚಿಕಿತ್ಸೆಯ ನಂತರ ನಟನ ಮೂಗಿಗೆ ಬ್ಯಾಂಡೇಜ್​ ಹಾಕಲಾಗಿದೆ. ಖಾನ್​ ಅವರ ತಂಡವು ಶಾರುಖ್​ ಆರೋಗ್ಯ ಸ್ಥಿತಿಯನ್ನು ಇನ್ನೂ ಬಹಿರಂಗಪಡಿಸಿದೇ ಇದ್ದರೂ, ಅವರು ಮುಂಬೈಗೆ ಮರಳಿದ್ದಾರೆ ಹಾಗೂ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Satyaprem Ki Katha: 5 ದಿನಗಳಲ್ಲಿ 40 ಕೋಟಿ ರೂ. ಗಡಿದಾಟಿದ 'ಸತ್ಯಪ್ರೇಮ್ ಕಿ ಕಥಾ'

ಬಹುನಿರೀಕ್ಷಿತ 'ಜವಾನ್​' ಸಿನಿಮಾ..: ಶಾರುಖ್ ಖಾನ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಜವಾನ್'. ಕಂಪ್ಲೀಟ್​ ಆ್ಯಕ್ಷನ್​ ಥ್ರಿಲ್ಲರ್​​ ಜವಾನ್ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ. ಜವಾನ್ ಟೀಸರ್ ಅನಾವರಗೊಳಿಸಲು ಚಿತ್ರತಂಡದ ಬಳಿ ಎರಡು ದಿನಾಂಕಗಳಿವೆ. ಜುಲೈ 7 ಅಥವಾ 15ರಂದು ಜವಾನ್ ಟೀಸರ್‌ನ ಗ್ರ್ಯಾಂಡ್ ಲಾಂಚ್​ಗಾಗಿ ಸಿದ್ಧತೆಗಳು ನಡೆಯುತ್ತಿವೆ.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯನ್ನು ಆಹ್ವಾನಿಸಲಿದ್ದು, ಅವರ ಸಮಯ ಮತ್ತು ಚಿತ್ರತಂಡದ ಯೋಜನೆ ಗಮನದಲ್ಲಿಟ್ಟುಕೊಂಡು ದಿನಾಂಕ ಅಂತಿಮಗೊಳಿಸಲಾಗುವುದು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ನಡುವೆ ಜವಾನ್ ಟೀಸರ್ ಅನಾವರಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಸಿನಿಮಾ ಪ್ರಚಾರಕ್ಕೆ ಶಾರುಖ್​ ಖಾನ್​ ಪಠಾಣ್​ ತಂತ್ರವನ್ನು ಬಳಸುವ ಯೋಚನೆಯಲ್ಲಿದ್ದಾರೆ ಎಂದು ಸಹ ಹೇಳಲಾಗಿದೆ. ಅಂದರೆ ಮೊದಲು ಚಿತ್ರದ ಹಾಡನ್ನು ಬಿಡುಗಡೆ ಮಾಡಿ, ಬಳಿಕ ಟೀಸರ್​, ಟ್ರೇಲರ್​​ ಅನಾವರಣಗೊಳಿಸುವ ಯೋಚನೆಯೂ ಇದೆ.

ಈ ವರ್ಷದ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜವಾನ್ ಚಿತ್ರವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್​​ ಸಂಸ್ಥೆ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲೀ ನಿರ್ದೇಶನ ಮಾಡಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ ಈ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಿದ್ಧಾರ್ಥ್​ ಮಲ್ಹೋತ್ರಾ - ದಿಶಾ ಪಟಾನಿ 'ಯೋಧ' ಸಿನಿಮಾ ಮುಂದೂಡಿಕೆ: ಥಿಯೇಟರ್​ನಲ್ಲಿ ಒಮ್ಮೆಲೇ 6 ಸಿನಿಮಾಗಳು ಎಂಟ್ರಿ..

Last Updated : Jul 4, 2023, 2:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.