ETV Bharat / entertainment

ಡಂಕಿ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್​​ ಖರೀದಿಸಲು ಡೋಲು ವಾದ್ಯದೊಂದಿಗೆ ಬಂದ ಅಭಿಮಾನಿಗಳು - Dunki

ಡಂಕಿ, ಶಾರುಖ್​ ಖಾನ್​ ಅವರಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Shah Rukh Khan Fans
ಡಂಕಿ ವೀಕ್ಷಿಸಲು ಶಾರುಖ್​ ಖಾನ್​ ಅಭಿಮಾನಿಗಳು ಕಾತರ
author img

By ETV Bharat Karnataka Team

Published : Dec 19, 2023, 1:25 PM IST

ಬಾಲಿವುಡ್ ಕಿಂಗ್​ ಖಾನ್​​ ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಸಿನಿಮಾ ಡಂಕಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಿಲೀಸ್​ಗೆ ಇನ್ನೊಂದೇ ದಿನ ಬಾಕಿ. ಅಡ್ವಾನ್ಸ್​ ಟಿಕೆಟ್​ಗಳು ಶರವೇಗದಲ್ಲಿ ಮಾರಾಟವಾಗುತ್ತಿದೆ. ಪಂಜಾಬ್​​ನ ಜಲಂಧರ್‌ನಲ್ಲಿ ಅಭಿಮಾನಿಗಳು ಡೋಲು ವಾದ್ಯದೊಂದಿಗೆ ಬಂದು ಥಿಯೇಟರ್​​ನಲ್ಲಿ ಟಿಕೆಟ್​ ಖರೀದಿಸಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಡಂಕಿ ಸಿನಿಮಾ ಸುತ್ತಲಿನ ಉತ್ಸಾಹ ಮುಗಿಲು ಮುಟ್ಟಿದೆ. ಕಿಂಗ್ ಖಾನ್ ಅಭಿಮಾನಿಗಳ ಕಾತರ ಜೋರಾಗಿದೆ. ಡಿಸೆಂಬರ್ 21 ರಂದು ಚಿತ್ರಮಂದಿಗಳಲ್ಲಿ ಬಿಡುಗಡೆಯಾಗುತ್ತಿದ್ದು, ಮುಂಗಡ ಟಿಕೆಟ್ ಬುಕಿಂಗ್ ಭರದಿಂದ ಸಾಗಿದೆ. ಪಂಜಾಬಿ ಹಿನ್ನೆಲೆಯನ್ನು ಆಧರಿಸಿದ ಹಿನ್ನೆಲೆ ಪಂಜಾಬಿ ಅಭಿಮಾನಿಗಳಿಂದ ಸಿನಿಮಾ ಸಾಕಷ್ಟು ಪ್ರೀತಿ ಗಳಿಸಿದೆ. ಇದೀಗ ಛಂಡೀಗಢದ ಅಭಿಮಾನಿಗಳು ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರಕ್ಕಾಗಿ ಜಲಂಧರ್‌ನಲ್ಲಿ ಮೊದಲ ದಿನದ ಮೊದಲ ಶೋ ವೀಕ್ಷಿಸಲು ಮುಂಗಡವಾಗಿ ಟಿಕೆಟ್​ ಬುಕ್ ಮಾಡಲು ಡೋಲು ವಾದ್ಯದೊಂದಿಗೆ ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿದ್ದಾರೆ.

ಬಾಲಿವುಡ್​ ನಟ ಶಾರುಖ್ ಖಾನ್ ಅವರ ಫ್ಯಾನ್​ ಕ್ಲಬ್ ಈ ವಿಡಿಯೋವನ್ನು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್ ನಲ್ಲಿ ಹಂಚಿಕೊಂಡಿದೆ. ಅಭಿಮಾನಿಗಳ ಉತ್ಸಾಹವನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಅನೇಕ ಅಭಿಮಾನಿಗಳು ಪಂಜಾಬಿ ವೇಷಭೂಷಣದಲ್ಲಿದ್ದು, ಡೋಲು ಸದ್ದಿಗೆ ಭರ್ಜರಿಯಾಗಿ ನೃತ್ಯ ಮಾಡುತ್ತಿದ್ದಾರೆ. ಅನೇಕರು ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಂತರ, ಮೊದಲ ದಿನದ ಮೊದಲ ಶೋ ವೀಕ್ಷಿಸಲು ಚಿತ್ರಮಂದಿರದಲ್ಲಿ ಟಿಕೆಟ್​ ಖರೀದಿಸುತ್ತಿರೋದನ್ನು ಈ ವೈರಲ್​ ವಿಡಿಯೋದಲ್ಲಿ ಕಾಣಬಹುದು. ಜಲಂಧರ್‌ನ ಥಿಯೇಟರ್​ ಹೊರಗೆ ಅಭಿಮಾನಿಗಳು ಸಂಭ್ರಮಾಚರಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಸಂಭ್ರಮಾಚರಿಸಿರುವ ಶಾರುಖ್ ಖಾನ್ ಅಭಿಮಾನಿಗಳು, ಚಿತ್ರ ತೆರೆಕಂಡ ಬಳಿಕ ಇನ್ನೆಷ್ಟು ಖುಷಿ ವ್ಯಕ್ತಪಡಿಸಲಿದ್ದಾರೆ ಎಂಬ ಕುತೂಹಲವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Salaar vs Dunki: ಅಡ್ವಾನ್ಸ್​ ಟಿಕೆಟ್​ನಲ್ಲಿ ಶಾರುಖ್​​ ಸಿನಿಮಾ ಮುಂದು, ಪ್ರಭಾಸ್​​ ಚಿತ್ರದಿಂದಲೂ ಪೈಪೋಟಿ

ಹಿಟ್ ಸಿನಿಮಾಗಳ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಆ್ಯಕ್ಷನ್​ ಕಟ್​​ ಹೇಳಿರುವ 'ಡಂಕಿ' ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ಅವರಂತಹ ಸ್ಟಾರ್ ನಟರೂ ಕೂಡ ಇದ್ದಾರೆ. ಡಿಸೆಂಬರ್​ 22 ರಂದು ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಸಲಾರ್​ ಸಿನಿಮಾ ಬಿಡುಗಡೆ ಆಗಲಿದ್ದು, ಬಾಕ್ಸ್​ ಆಫೀಸ್​ ಪೈಪೋಟಿ ಪಕ್ಕಾ. ಎರಡೂ ಚಿತ್ರಗಳ ಅಡ್ವಾನ್ಸ್​​ ಟಿಕೆಟ್​ ಬುಕಿಂಗ್​​ ಜೋರಾಗೇ ನಡೆಯುತ್ತಿದೆ.

ಇದನ್ನೂ ಓದಿ: ಫೈಟರ್ ಬಿಡುಗಡೆಗೆ ದಿನಗಣನೆ: 'ಶೇರ್ ಖುಲ್ ಗಯೇ' ಮೇಕಿಂಗ್​ ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.