ETV Bharat / entertainment

Not Ramaiya Vastavaiya: 'ಜವಾನ್​'ನ ಮತ್ತೊಂದು ಹಾಡು ಅನಾವರಣ - ಸಿನಿಮಾ ಬಿಡುಗಡೆಗೆ ಕುತೂಹಲ - ಜವಾನ್ ಲೇಟೆಸ್ಟ್ ನ್ಯೂಸ್

Not Ramaiya Vastavaiya Song: ಜವಾನ್​ ಸಿನಿಮಾದ ನಾಟ್​ ರಾಮಯ್ಯ ವಸ್ತಾವಯ್ಯ ಹಾಡು ಅನಾವರಣಗೊಂಡಿದೆ.

Not Ramaiya Vastavaiya Song
ನಾಟ್​ ರಾಮಯ್ಯ ವಸ್ತಾವಯ್ಯ ಹಾಡು
author img

By ETV Bharat Karnataka Team

Published : Aug 29, 2023, 7:28 PM IST

ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಶಾರುಖ್​ ಖಾನ್​. ಬಾಲಿವುಡ್​ ಕಿಂಗ್​ ಖಾನ್​ನ ಮುಂದಿನ ಸಿನಿಮಾ ಜವಾನ್​. ಕಂಪ್ಲೀಟ್​ ಆ್ಯಕ್ಷನ್​ ಪ್ಯಾಕ್ಡ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಸಿನಿಪ್ರಿಯರು ಕಾತರರಾಗಿದ್ದಾರೆ.

ಝಿಂದಾ ಬಂದಾ ಮತ್ತು ಚಲೇಯಾ ಹಾಡಿನ ಬಳಿಕ ಜವಾನ್​ ಚಿತ್ರದ ನಾಟ್​ ರಾಮಯ್ಯ ವಸ್ತಾವಯ್ಯ (Not Ramaiya Vastavaiya song) ಸಾಂಗ್​ ಅನ್ನು ಅನಾವರಣಗೊಳಿಸಲಾಗಿದೆ. ಇದೊಂದು ಪಾರ್ಟಿ ಟ್ರ್ಯಾಕ್​ ಆಗಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಸಂಗೀತ ಸಂಯೋಜಕ ಅನಿರುಧ್ ರವಿಚಂದರ್ ಹಾಡಿಗೆ ಗಾನಪ್ರಿಯರು ಫುಲ್​ ಮಾರ್ಕ್ಸ್ ಕೊಟ್ಟಿದ್ದಾರೆ.

ಬಿಡುಗಡೆ ಹೊಸ್ತಿಲಲ್ಲಿರುವ ಜವಾನ್​ ಸಿನಿಮಾದ ಪ್ರಚಾರ ಜೋರಾಗೇ ನಡೆಯುತ್ತಿದೆ. ಆನ್​ಲೈನ್​ನಲ್ಲಿ ಜವಾನ್​ ಪ್ರಮೋಶನ್​ ವೇಗ ಪಡೆದುಕೊಂಡಿದೆ. ಸಿನಿಮಾ ಪ್ರಚಾರ ಭಾಗವಾಗಿ ಆಗಾಗ್ಗೆ ಚಿತ್ರಕ್ಕೆ ಸಂಬಂಧಿಸಿದ ಅಪ್​ಡೇಟ್ಸ್ ಅನ್ನು ಚಿತ್ರತಂಡ ಕೊಡುತ್ತಿದೆ. ಪ್ರಿವ್ಯೂ, ಪೋಸ್ಟರ್, ಸಾಂಗ್​ ರಿಲೀಸ್ ಮೂಲಕ ಚಿತ್ರತಂಡ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಇಂದು ನಾಟ್​ ರಾಮಯ್ಯ ವಸ್ತಾವಯ್ಯ ಹಾಡು ಅನಾವರಣಗೊಂಡಿದೆ. ಇದು ಸಿನಿಮಾದ ಮೂರನೇ ಹಾಡು.

  • " class="align-text-top noRightClick twitterSection" data="">

ನಾಟ್​ ರಾಮಯ್ಯ ವಸ್ತಾವಯ್ಯ ಹಾಡಿಗೂ ಮುನ್ನ ಝಿಂದಾ ಬಂದಾ ಮತ್ತು ಚಲೇಯಾ ಹಾಡು ಅನಾವರಣಗೊಂಡಿತ್ತು. ಸಿನಿಮಾದ ಎರಡೂ ಹಾಡುಗಳು ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿತ್ತು. ಟ್ರೇಲರ್​ ಬಿಡುಗಡೆಗೂ ದಿನ ನಿಗದಿ ಆಗಿದೆ. ಅದಕ್ಕೂ ಮುನ್ನ ಚಿತ್ರದ ಮೂರನೇ ಹಾಡನ್ನು ಅನಾವರಣಗೊಳಿಸಿ, ಚಿತ್ರತಂಡ ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದೆ. ನೃತ್ಯ ಸಂಯೋಜಕಿ ವೈಭವಿ ಮರ್ಚೆಂಟ್​ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಕುಮಾರ್ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಅನಿರುಧ್ ರವಿಚಂದರ್​, ವಿಶಾಲ್​ ದದ್ಲಾನಿ ಮತ್ತು ಶಿಲ್ಪಾ ರಾವ್​ ಕಠದಾನ ಮಾಡಿದ್ದಾರೆ.

ಇದನ್ನೂ ಓದಿ: Jawan: ಎಸ್​ಆರ್​ಕೆ ಸಿನಿಮಾ ಸದ್ದು - ಖ್ಯಾತ ಥಿಯೇಟರ್​ನಲ್ಲಿ ಮುಂಜಾನೆ 6 ಗಂಟೆಗೆ ಜವಾನ್​ ಪ್ರದರ್ಶನ!

ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಮೊದಲ ಬಾರಿ ತಮಿಳಿನ ಯುವ ನಿರ್ದೇಶಕ ಅಟ್ಲೀ ಕುಮಾರ್​ ಅವರೊಂದಿಗೆ ನಟಿಸಿದ್ದಾರೆ. ಇದೊಂದು ಹೈ ವೋಲ್ಟೇಜ್​ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಸಮಾಜದ ತಪ್ಪುಗಳನ್ನು ಸರಿಪಡಿಸಲು ಹೊರಡುವ ವ್ಯಕ್ತಿಯ ಭಾವನಾತ್ಮಕ ಪ್ರಯಾಣವನ್ನು ಸಿನಿಮಾ ಹೇಳಲಿದೆ. ಆಗಸ್ಟ್ 31 ರಂದು ದುಬೈನ ಬುರ್ಜ್​ ಖಲೀಫಾದಲ್ಲಿ ಟ್ರೇಲರ್​ ಬಿಡುಗಡೆ ಆಗಲಿದ್ದು, ಸೆಪ್ಟೆಂಬರ್ 7ರಂದು ಸಿನಿಮಾ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: Kiccha Sudeep 47: ಹೊಂಬಾಳೆ ಫಿಲ್ಮ್ಸ್ ಜೊತೆ ಅಭಿನಯ ಚಕ್ರವರ್ತಿ ಸುದೀಪ್​ ಸಿನಿಮಾ?

ಸಿನಿಮಾದಲ್ಲಿ ಎಸ್​ಆರ್​ಕೆ ಜೊತೆ ನಯನತಾರಾ ಮತ್ತು ವಿಜಯ್​ ಸೇತುಪತಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ರಿಧಿ ಡೋಗ್ರಾ ಕೂಡ ಇದ್ದಾರೆ. ದೀಪಿಕಾ ಪಡುಕೋಣೆ ಸ್ಪೆಷಲ್​ ಅಪಿಯರೆನ್ಸ್​ ಇರಲಿದೆ. ರೆಡ್​ ಚಿಲ್ಲೀಸ್​ ಎಂಟರ್​ಟೈನ್​ಮೆಂಟ್ ಅಡಿ ಗೌರಿ ಖಾನ್​ ಮತ್ತು ಗೌರವ್​ ವರ್ಮಾ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 7ರಂದು ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.